ಪುತ್ತೂರು: ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಕೋರ್ಟ್‌ರಸ್ತೆಯಲ್ಲಿರುವ ಮುಳಿಯ ಜ್ಯುವೆಲ್ಸ್‌ನಲ್ಲಿ(Muliya Jewels) ಆ.30ರಿಂದ ಸೆ.26ರ ತನಕ ನಡೆಯಲಿರುವ ‘ಡೈಮಂಡ್ ಫೆಸ್ಟ್’ನ(Dimond Fest) ಎರಡನೇ ಆವೃತ್ತಿಯು ಸೆ.2ರಂದು ಅಧಿಕೃತವಾಗಿ ಉದ್ಘಾಟನೆಗೊಂಡಿತು.
ಶಾಸಕ ಅಶೋಕ್ ಕುಮಾರ್ ರೈಯವರ ಪತ್ನಿ ಸುಮಾ ಅಶೋಕ್ ರೈಯವರು ಡೈಮಂಡ್ ಫೆಸ್ಟ್ ನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಮುಳಿಯದ ಡೈಮಂಡ್ ಫೆಸ್ಟ್ ನಲ್ಲಿ ಕನಿಷ್ಠ ಬೆಲೆಯಲ್ಲಿ ಖರೀದಿಸಬಹುದಾದ ಆಭರಣಗಳೂ ಇದ್ದು ಜನ ಸಾಮಾನ್ಯರಿಗೂ ಖರೀದಿಸುವ ಅವಕಾಶ ಕಲ್ಪಿಸಲಾಗಿದೆ.ಉತ್ತಮ ವೆರೈಟಿ, ಆಕರ್ಷಕ ವಿನ್ಯಾಸಗಳ ಆಭರಣಗಳನ್ನು ಆಕರ್ಷಕ ಕೊಡುಗೆಗಳೊಂದಿಗೆ ಉತ್ತಮ ಬೆಲೆಯಲ್ಲಿ ಗ್ರಾಹಕರು ಖರೀದಿಸಬಹುದು.ಮುಳಿಯ ಜ್ಯುವೆಲ್ಸ್ ಕರ್ನಾಟಕದ ವಿವಿಧ ಕಡೆಗಳಲ್ಲಿ ಮಳಿಗೆಗಳನ್ನು ಹೊಂದಿದ್ದು ಮುಂದೆ ಹೊರ ರಾಜ್ಯಗಳಲ್ಲಿಯೂ ಮಳಿಗೆಗಳನ್ನು ತೆರೆಯುವಂತಾಗಲಿ ಎಂದು ಆಶಿಸಿ ಶುಭಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಡ್ಯಾಶ್ ಮಾರ್ಕೆಟಿಂಗ್‌ನ ಮುಖ್ಯಸ್ಥೆ ನಳಿನಿ ಶೆಟ್ಟಿ ಮಾತನಾಡಿ, ಮುಳಿಯ ಜ್ಯುವೆಲ್ಸ್‌ನಲ್ಲಿ ಗುಣಮಟ್ಟದ ಆಭರಣಗಳೊಂದಿಗೆ ಗ್ರಾಹಕರಿಗೆ ಮನಮುಟ್ಟುವಂಥ ಆಕರ್ಷಕ ವಿನ್ಯಾಸಗಳ ಆಯ್ಕೆಗಳಿವೆ ಎಂದು ಹೇಳಿ ಶುಭಹಾರೈಸಿದರು.
ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಇಪ್ಪತ್ತೈದು ವರ್ಷಗಳಿಂದ ಚಿನ್ನಾಭರಣಗಳಲ್ಲಿ ಹೊಸತನಗಳನ್ನು ಪರಿಚಯಿಸಿರುವ ಮುಳಿಯ ಜ್ಯುವೆಲ್ಸ್‌ನಲ್ಲಿ ಗ್ರಾಹಕರಿಗೆ ಕೈಗೆಟಕುವ ದರದ ಆಭರಣಗಳೂ ಲಭ್ಯವಿದೆ.ರೂ.7 ಸಾವಿರದಿಂದ ಪ್ರಾರಂಭಗೊಂಡು ವಜ್ರದ ಆಭರಣಗಳು ಫೆಸ್ಟ್ ನಲ್ಲಿ ಲಭ್ಯವಿದೆ.ಮುಂಬೈಯಿಂದ ನಾವೇ ಖರೀದಿಸಿದ, ಗ್ರಾಹಕರ ಮನಮುಟ್ಟುವಂತಹ ವೆರಾಟಿ, ವಿನ್ಯಾಸದ ವಜ್ರದ ಆಭರಣಗಳು ಫೆಸ್ಟ್ ನಲ್ಲಿ ಲಭ್ಯವಿದೆ ಎಂದರು.ಡೈಮಂಡ್ ಫೆಸ್ಟ್ ನ ಎರಡನೇ ಆವೃತ್ತಿಯ ಪ್ರಥಮ ಗ್ರಾಹಕಿ, ನಿವೃತ್ತ ಶಿಕ್ಷಕಿ ಸುನೀತಾ ಕಾವಳಮುಡೂರುರವರಿಗೆ ಕಾರ್ಯಕ್ರಮದಲ್ಲಿ ವಜ್ರದ ಆಭರಣವನ್ನು ಹಸ್ತಾಂತರಿಸಲಾಯಿತು.
ಮುಳಿಯ ಜ್ಯುವೆಲ್ಸ್‌ನ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಶಿವಕೃಷ್ಣಮೂರ್ತಿ, ಪ್ರಬಂಧಕ ರಾಘವೇಂದ್ರ ಪಾಟೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಹರಿಣಾಕ್ಷಿ ಪ್ರಾರ್ಥಿಸಿದರು. ಕಾರ್ಯನಿರ್ವಾಹಕ ಅಧಿಕಾರಿ ಯತೀಶ್ ಸ್ವಾಗತಿಸಿದರು.-ರ್ ಮ್ಯಾನೇಜರ್‌ಗಳಾದ ಪ್ರವೀಣ್ ಕಾರ್ಯಕ್ರಮ ನಿರೂಪಿಸಿ, ಆನಂದ ಕುಲಾಲ್ ವಂದಿಸಿದರು.