ಫಿಲೋಮಿನಾ ಪ.ಪೂ ಕಾಲೇಜಿಗೆ ಅಲೋಷಿಯಸ್ ಫೆಸ್ಟ್ 2024′ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿಗಳು

0

ಪುತ್ತೂರು: ಸೈಂಟ್ ಅಲೋಶಿಯಸ್ ಕಾಲೇಜು ಮಂಗಳೂರು ಇದರ ಆಶ್ರಯದಲ್ಲಿ ಪದವಿ ಪೂರ್ವ ಕಾಲೇಜಿನ ಮಕ್ಕಳಿಗಾಗಿ ನಡೆದ ರಾಷ್ಟ್ರಮಟ್ಟದ ‘ಅಲೋಷಿಯಸ್ ಫೆಸ್ಟ್ 2024’ ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ(St Philomena’s College) ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.

ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಮೊಹಮದ್ ಫಾರಿಶ್ ಬಸ್ತಿಕರ್ ಮತ್ತು ಅಕ್ಬರ್ ಹಸನ್ ಪ್ರಥಮ, ಕ್ಯಾರೆಕ್ಟರ್ ಡ್ರೆಸ್ಸಿಂಗ್ ನಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಮಿಫಾ ಶೇಖ್, ವೀಕ್ಷಾ, ನಾಫಿಯ, ಅಂಕಿತ ಎಲ್ ಡಿ, ಅಯಿಷಾತ್  ಫರಿಹ, ಫಾತಿಮತ್ ರಾಹಿಲ, ಫಾತಿಮತ್ ನಫ್ಲ ಎಂ ಪ್ರಥಮ, ವಿಜ್ಞಾನ ರಂಗೋಲಿಯಲ್ಲಿ ಪ್ರಥಮ ವಿಜ್ಞಾನ ವಿಭಾಗದ ಅಪೂರ್ವ ಮತ್ತು ಚಿನ್ಮಯಿ ದ್ವಿತೀಯ, ಸಾಮಾನ್ಯ ಜ್ಞಾನ ರಸಪ್ರಶ್ನೆಯಲ್ಲಿ ದ್ವಿತೀಯ ಕಲಾ ವಿಭಾಗದ ಧ್ರುವ ಜಗದೀಶ್ ಭಂಡಾರಿ  ಹಾಗೂ ರೋಶಿನ್ ತೃತೀಯ, ವಿಜ್ಞಾನ ಪ್ರದರ್ಶನ ದಲ್ಲಿ ಪ್ರಥಮ ವಿಜ್ಞಾನ ವಿಭಾಗದ ವೈಭವ್ ವಿ ನಾಯಕ್ ಮತ್ತು ಸಿದ್ದಾಂತ್ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರದರ್ಶನ ಕಲಾ ಸಂಘದ ನಿರ್ದೇಶಕರಾದ ಸುಮನಾ ರಾವ್, ಭರತ್.ಜಿ.ಪೈ  ರಶ್ಮಿ.ಪಿ.ಎಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here