ನಿಡ್ಪಳ್ಳಿ; ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ಪವಿತ್ರ ಕ್ಷೇತ್ರ ಎಂದು ಖ್ಯಾತಿ ಪಡೆದ ಇರ್ದೆ ಬೆಂದ್ರ್ ತೀರ್ಥ ಗುಂಡಿಯಲ್ಲಿ ಶ್ರಾವಣ ಅಮಾವಾಸ್ಯೆ ದಿನವಾದ ಸೆ.3 ರಂದು ನೂರಾರು ಭಕ್ತಾದಿಗಳು ಪುಣ್ಯ ತೀರ್ಥ ಸ್ನಾನ ಮಾಡಿ ಪುಳಕಿತರಾದರು.
ಕ್ಷೇತ್ರದಲ್ಲಿ ಇರುವ ಅಶ್ವಥ ಕಟ್ಟೆಯಲ್ಲಿ ಪುರೋಹಿತರು ಮುಂಜಾನೆ ಪೂಜೆ ಸಲ್ಲಿಸಿ, ನಂತರ ತೀರ್ಥ ಗುಂಡಿಯಲ್ಲಿ ಪೂಜೆ ಸಲ್ಲಿಸಿದ ನಂತರ ಭಕ್ತಾದಿಗಳು ತೀರ್ಥ ಸ್ನಾನ ಮಾಡಿ ಪುಳಕಿತ ಗೊಂಡರು.ಚರ್ಮ ವ್ಯಾದಿ ಇರುವವರು ಇಲ್ಲಿ ಅಮಾವಾಸ್ಯೆ ದಿನ ತೀರ್ಥ ಸ್ನಾನ ಮಾಡಿದರೆ ಚರ್ಮ ರೋಗ ಗುಣವಾಗುತ್ತದೆ ಎಂದು ಪ್ರತೀತಿ.