ಪುತ್ತೂರು: ಪುಣಚ ಗ್ರಾಮ ಪಂಚಾಯತ್ ವತಿಯಿಂದ ಉಜ್ವಲ ಸಂಜೀವಿನಿ ಒಕ್ಕೂಟದ ಸಹಕಾರದೊಂದಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆಗಳಿಂದ ಪ್ರಾಯೋಗಿಕವಾಗಿ ಒಣ ಕಸ ಸಂಗ್ರಹಿಸುವ ಬಗ್ಗೆ ಗ್ರಾಮ ಪಂಚಾಯತ್ ಮತ್ತು ಸಂಜೀವಿನಿ ಒಕ್ಕೂಟದ ನಿಯೋಗದೊಂದಿಗೆ ಅಜ್ಜಿನಡ್ಕ ಭಾಗದ ಮನೆಗಳಿಗೆ ಭೇಟಿ ನೀಡುವ ಮೂಲಕ ಒಣ ಕಸ ಸಂಗ್ರಹಣಾ ಚೀಲ ಮತ್ತು ಮಾಹಿತಿ ಪುಸ್ತಕ ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋಧ ಯಾನೆ ಬೇಬಿ, ಉಪಾಧ್ಯಕ್ಷ ಮಹೇಶ್ ಶೆಟ್ಟಿ, ಸದಸ್ಯರುಗಳಾದ ರಾಮಕೃಷ್ಣ ಮೂಡಂಬೈಲು, ಲಲಿತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ,ಉಜ್ವಲ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಭಾರತಿ, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಸತ್ಯ ಪ್ರಕಾಶ್, ಉಸ್ಮಾನ್, ಉಜ್ವಲ ಸಂಜೀವಿನಿ ಒಕ್ಕೂಟದ ಸಿಬ್ಬಂದಿಗಳಾದ ರೇಖಾ, ಮೀನಾಕ್ಷಿ, ಕುಸುಮಾವತಿ,ಎಸ್ ಎಲ್ ಆರ್ ಎಂ ಘಟಕದ ಸಿಬ್ಬಂದಿಗಳಾದ ಲೀಲಾ, ಉಷಾ,ಪುಷ್ಪವತಿ ಉಪಸ್ಥಿತರಿದ್ದರು.
ಮನೆಗಳಲ್ಲಿ ಉತ್ಪತ್ತಿಯಾಗುವ ಒಣ ಕಸವನ್ನು ಸಂಗ್ರಹಿಸಿ ವಾರಕ್ಕೊಮ್ಮೆ ಗ್ರಾಮ ಪಂಚಾಯತ್ ತ್ಯಾಜ್ಯ ಸಂಗ್ರಹಣೆಯ ಸ್ವಚ್ಛವಾಹಿನಿ ವಾಹನಕ್ಕೆ ನೀಡಿ ಗ್ರಾಮದ ಸ್ವಚ್ಚತೆ ಕಾಪಾಡಲು ಸಹಕರಿಸುವಂತೆ ವಿನಂತಿಸಲಾಯಿತು.