ನೆಲ್ಯಾಡಿ: ’ಲೇಝರ್ ಕಾರ್‌ವಾಶ್’ ಶುಭಾರಂಭ

0

ನೆಲ್ಯಾಡಿ: ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಮೀಪ, ನೆಲ್ಯಾಡಿ-ಮಾದೇರಿ ರಸ್ತೆಯ ರಿಯಾ ರಬ್ಬರ್ ಟ್ರೇಡರ‍್ಸ್ ಬಳಿ ಅತ್ಯಾಧುನಿಕ ಸೌಲಭ್ಯ ಹೊಂದಿರುವ ’ ಲೇಝರ್ ಕಾರ್‌ವಾಶ್’ ಸೆ.4ರಂದು ಬೆಳಿಗ್ಗೆ ಶುಭಾರಂಭಗೊಂಡಿತು.


ನೆಲ್ಯಾಡಿ ಇನ್‌ಫಾಂಟ್ ಜೀಸಸ್ ಚರ್ಚ್‌ನ ಧರ್ಮಗುರು ರೆ.ಫಾ.ಗ್ರಾಟಿಯನ್ ಅಲ್ವಾರೆಸ್ ಅವರು ಆಶೀರ್ವಾದ ವಿಧಿವಿಧಾನ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ನೆಲ್ಯಾಡಿ ಪೇಟೆ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ಇಲ್ಲಿ ಹಲವಾರು ವಿದ್ಯಾಸಂಸ್ಥೆಗಳು, ಬೇರೆ ಬೇರೆ ಉದ್ದಿಮೆಗಳೂ ಇವೆ. ಇವೆಲ್ಲವೂ ನೆಲ್ಯಾಡಿಯ ಅಭಿವೃದ್ಧಿಗೆ ಪೂರಕವಾಗಿವೆ. ಇದೀಗ ನೆಲ್ಯಾಡಿಯಲ್ಲಿ ಇದೇ ಮೊದಲ ಬಾರಿಗೆ ಅತ್ಯಾಧುನಿಕ ಸೌಲಭ್ಯ ಹೊದಿರುವ ಲೇಝರ್ ಕಾರ್‌ವಾಶ್ ಆರಂಭಗೊಂಡಿರುವುದು ಸಂತಸ ತಂದಿದೆ. ಇಲ್ಲಿ ಬಾವಿ ನೀರು ಉಪಯೋಗಿಸಿ ಫೋಮ್‌ವಾಶ್ ಮಾಡುತ್ತಿರುವುದರಿಂದ ವಾಹನಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ಸಂಸ್ಥೆ ವಾಹನ ಮಾಲಕರಿಗೆ ಅತ್ಯುತ್ತಮ ಸೇವೆ ಒದಗಿಸುವ ಮೂಲಕ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.


’ಲೇಝರ್ ಕಾರ್‌ವಾಶ್’ನ ಮಾಲಕರಾದ ಪೌಲ್ ಡಿ.ಸೋಜ ಹಾಗೂ ವೆರೋನಿಕಾ ಡಿ.ಸೋಜ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ನಿವೃತ್ತ ಸೈನಿಕ ಒ.ಜಿ.ನೈನಾನ್, ನೆಲ್ಯಾಡಿ ಎಲೈಟ್ ರಬ್ಬರ್ ಕಂಪನಿ ಮಾಲಕ ಶಾಜಿ ಯು.ವಿ., ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್.ದುರ್ಗಾಶ್ರೀ, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಬಾಣಜಾಲು, ನೆಲ್ಯಾಡಿ ಗ್ರಾ.ಪಂ.ಸದಸ್ಯ ಮಹಮ್ಮದ್ ಇಕ್ಬಾಲ್, ಮಾಜಿ ಸದಸ್ಯ ಅಬ್ರಹಾಂ ಕೆ.ಪಿ., ನಿವೃತ್ತ ಮುಖ್ಯಶಿಕ್ಷಕ ವೆಂಕಟ್ರಮಣ ಭಟ್, ನೆಲ್ಯಾಡಿ ಜೇಸಿಐ ಪೂರ್ವಾಧ್ಯಕ್ಷ ಮೋಹನ್, ಉದ್ಯಮಿ ಪಾರ್ಶ್ವನಾಥ್ ಜೈನ್, ಜಾನ್ಸನ್ ಇಂಜಿನಿಯರಿಂಗ್ ವರ್ಕ್ಸ್‌ನ ಜಾನ್ಸನ್, ಪಿಲಿಕ್ಕಲ್ ರಬ್ಬರ್ ಟ್ರೇಡರ‍್ಸ್‌ನ ಜಾನ್ಸನ್, ನಯನ್ ಟ್ರೇಡರ‍್ಸ್‌ನ ಜೋಸೆಫ್ ವಿ.ಜೆ., ಬಿನು ಎಂ., ಅಬ್ದುಲ್ ರಹಿಮಾನ್ ಆಲಂಪಾಡಿ, ಗಣೇಶ್ ಪೊಸೊಳಿಕೆ, ಚಾರ್ಲ್ಸ್ ಮಂಗಳೂರು, ರಿಚರ್ಡ್ ತೊಕ್ಕೊಟ್ಟು, ರಿಲ್ಸನ್ ಕುವೈಟ್, ಜೊಯೆಲ್ ದುಬೈ, ರಿಚರ್ಡ್ ಸುರತ್ಕಲ್ ಸೇರಿದಂತೆ ಹಲವಾರು ಗಣ್ಯರು ಆಗಮಿಸಿ ನೂತನ ಸಂಸ್ಥೆಗೆ ಶುಭಹಾರೈಸಿದರು. ಕೆಲ್ವಿನ್ ಪೌಲ್ ಡಿ.ಸೋಜ ಹಾಗೂ ಇತರರು ಸಹಕರಿಸಿದರು. ಪ್ರೆಸ್ಸಿ ಡಿ.ಸೋಜ ಅವರು ನಿರೂಪಿಸಿದರು.


ಅತ್ಯಾಧುನಿಕ ಸೇವೆ:
ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಮಾಲಕ ಪೌಲ್ ಡಿ.ಸೋಜ ಅವರು, ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಮೀಪ, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ಅನತಿ ದೂರದಲ್ಲಿ ’ಲೇಝರ್ ಕಾರ್‌ವಾಶ್ ’ಇದೆ. ಇದು ಅತ್ಯಾಧುನಿಕ ಸೌಲಭ್ಯ ಹೊಂದಿದೆ. ಇಲ್ಲಿ ಬಾವಿ ನೀರನ್ನೇ ಉಪಯೋಗಿಸಿಕೊಂಡು ಫೋಮ್ ವಾಶ್ ಮಾಡಿಕೊಡುತ್ತೇವೆ. ಇದರಿಂದ ವಾಹನಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ದ್ವಿಚಕ್ರ ವಾಹನದಿಂದ ಕಾರು, ಟೆಂಪೋ ಸೇರಿದಂತೆ ವಿವಿಧ ರೀತಿಯ ವಾಹನಗಳ ವಾಶ್ ಮಾಡಿಕೊಡಲಾಗುವುದು. ನುರಿತ ಕೆಲಸಗಾರರಿಂದ ಸಕಾಲದಲ್ಲಿ ಉತ್ತಮ ಸೇವೆ ಸಿಗುವುದರಿಂದ ವಾಹನಗಳ ಮಾಲಕರು ಹೆಚ್ಚು ಸಮಯ ಕಾಯಬೇಕಾಗಿಲ್ಲ ಎಂದರು. ಅಲ್ಲದೇ ಮುಂದೆ ಇಲ್ಲಿ ವಾಹನಗಳ ಬಾಡಿ ಪಾಲಿಶ್, ಇಂಟೀರಿಯರ್ ಕ್ಲೀನಿಂಗ್, ವೆಹಿಕಲ್ ಪೈಂಟಿಂಗ್, ದುರಸ್ತಿ ಸೇವೆಯೂ ಶೀಘ್ರದಲ್ಲಿ ಆರಂಭಗೊಳ್ಳಲಿದೆ ಎಂದು ಹೇಳಿದ ಪೌಲ್ ಡಿ.ಸೋಜ ಅವರು ನೆಲ್ಯಾಡಿ ಜನತೆಯ ಸಹಕಾರ ಕೋರಿದರು. ಹೆಚ್ಚಿನ ಮಾಹಿತಿಗಾಗಿ ಮೊ: 8296556645ಗೆ ಸಂಪರ್ಕಿಸಬಹುದಾಗಿದೆ.

  • *ಬಾಡಿಪಾಲಿಶ್, ಪೈಂಟಿಂಗ್, ದುರಸ್ತಿ ಸೇವೆ ಶೀಘ್ರ ಆರಂಭ

LEAVE A REPLY

Please enter your comment!
Please enter your name here