ಮತ್ತಷ್ಟು ವಿಭಿನ್ನತೆಗಳೊಂದಿಗೆ ಟಾಪ್ ಟೆನ್ ಲಕ್ಕಿ ಸ್ಕಿಂನ 7ನೇ ಆವೃತಿ ಆರಂಭ-ಗ್ರಾಹಕರ ಅನುಕೂಲಕ್ಕಾಗಿ ಸ್ಮಾರ್ಟ್ ಕಾರ್ಡ್ ಬಿಡುಗಡೆ, ಆ್ಯಪ್ ಲಾಂಚಿಂಗ್

0

ಪುತ್ತೂರು: ಪ್ರಪ್ರಥಮ ಬಾರಿಗೆ 2013ರಲ್ಲಿ ಪುತ್ತೂರಿನಲ್ಲಿ ಲಕ್ಕಿ ಸ್ಕೀಮ್ ಅನ್ನು ಪ್ರಾರಂಭಿಸಿ, ಪಾರದರ್ಶಕ ಡ್ರಾ ಹಾಗೂ ಕ್ಲಪ್ತ ಸಮಯದಲ್ಲಿ ಉತ್ಪನ್ನಗಳನ್ನು ಪೂರೈಸಿ, ಅಸಂಖ್ಯಾತ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾದ ಪುತ್ತೂರಿನ ಟಾಪ್ ಟೆನ್ ಲಕ್ಕಿ ಸ್ಕಿಂನ ಏಳನೇ ಆವೃತಿಯ ಸ್ಮಾರ್ಟ್ ಕಾರ್ಡ್ ಬಿಡುಗಡೆ ಮತ್ತು ಆ್ಯಪ್ ಲಾಂಚಿಂಗ್ ಕಾರ್ಯಕ್ರಮ ಹಾಗೂ ಸ್ಕೀಮ್ ನ ಎಜೆಂಟರ ಸಭೆಯು ಬೊಳುವಾರಿನ ಮಹಾವೀರ್ ವೆಂಚರ್ಸ್ ನಲ್ಲಿ ನಡೆಯಿತು.

ನಗರಸಭಾ ಸದಸ್ಯರಾದ ಪಿ.ಜಿ. ಜಗನ್ನಿವಾಸ ರಾವ್ ರವರು ಮಾತನಾಡಿ ಸ್ಕೀಮ್ ಎಂದರೆ ಭಯದ ವಾತಾವರಣ ನಿರ್ಮಾಣವಾಗುವ ಪರಿಸ್ಥಿತಿ ಇತ್ತು. ಆದರೆ ಇವರ ವ್ಯವಹಾರ ಹಾಗೂ ನಡೆದು ಬಂದ ಹಾದಿಯನ್ನು ಗಮನಿಸಿದಾಗ ಇದೊಂದು ವಿಶ್ವಾಸನೀಯ ಸಂಸ್ಥೆ ಎಂದು ಭಾಸವಾಗುತ್ತಿದೆ. ಎಲ್ಲರ ಸಹಕಾರದಿಂದ ಯಶಸ್ಸು ಸಾಧ್ಯವಿದೆ. ಜನೋಪಯೋಗಿ ಸ್ಕೀಮ್ ಇದಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದರು.

ಕೆ.ಪಿ.ಸಿ.ಸಿ. ಸಂಯೋಜಕರಾದ‌ ನೂರುದ್ದೀನ್ ಸಾಲ್ಮರರವರು ಮಾತನಾಡಿ ಬಹಳಷ್ಟು ಸಂತಸದ ಕ್ಷಣವಿದು. ಬಡ, ಮಧ್ಯಮ ವರ್ಗದ ಜನರ ಪಾಲಿಗೆ ಇದು ಬಹಳಷ್ಟು ಸಹಕಾರಿಯಾಗಲಿದೆ.
ಬಡವರ್ಗದ ಜನರ ಕನಸನ್ನು ನನಸು ಮಾಡುವ ಸ್ಕೀಮ್ ಇದಾಗಿದ್ದು, ಅವರ ಬಾಳಿಗೆ ಬೆಳಕಾಗಲಿದೆ‌. ಟಾಪ್ ಟೆನ್ ಆರು ಆವೃತಿಯನ್ನು ಯಾವುದೇ ಲೋಪದೋಷಗಳಿಲ್ಲದೆ ಯಶಸ್ವಿಯಾಗಿ ಪೂರೈಸಿ ಏಳನೇ ಆವೃತಿಯನ್ನು ಆರಂಭಿಸಿದೆ. ಅದೂ ಕೂಡ ಹಲವಾರು ವಿಶೇಷತೆಯನ್ನು ಹೊಂದಿದೆ. ಇದರಿಂದಾಗಿ‌ ಹಲವರಿಗೆ ಉದ್ಯೋಗ ಸೃಷ್ಠಿಯಾಗಲಿದೆ.
ಪಾರದರ್ಶಕ ಸೇವೆ ನೀಡುತ್ತಿರುವ ಸಂಸ್ಥೆ ಇದಾಗಿದೆ ಎನ್ನುವ ಹೆಮ್ಮೆ ನನಗಿದೆ. ಆಧುನಿಕ ಯುಗಕ್ಕೆ ಪೂರಕಾದ ವ್ಯವಸ್ಥೆ ಇಲ್ಲಿದೆ ಎಂದರು.

ಕಾಯರ್ತಡ್ಕ ಶಾಲಾ ಮುಖ್ಯೋಪಾಧ್ಯಾಯ ಯಾಕೂಬ್ ಕೈಯ್ಯೂರು ಮಾತನಾಡಿ ಟಾಪ್ ಟೆನ್ ಬಹಳಷ್ಟು ವರುಷಗಳ ಇತಿಹಾಸವಿರುವ ಒಂದು ಲಕ್ಕಿ ಸ್ಕೀಮ್ ಆಗಿದೆ. ಇವರ ಯೋಜನೆ ಯೋಚನೆಯ ಮೂಲಕ‌ ಇವರು ಬಹಳಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ. ಪಾರ್ದರ್ಶಕ ಸೇವೆ ನೀಡುವ ಮೂಲಕ ಸಂಸ್ಥೆ ಜನರನ್ನು ತಲುಪಿ ಆಗಿದೆ ಎಂದರು.ಇದೇ ಸಂದರ್ಭದಲ್ಲಿ ಸ್ಕೀಮ್‌ನ ಏಜೆಂಟರುಗಳನ್ನು ನೆನಪಿನ‌ ಕಾಣಿಕೆ ನೀಡಿ ಗೌರವಿಸಲಾಯಿತು.

ಯೂನಿಯನ್ ಬ್ಯಾಂಕ್ ನ ವ್ಯವಸ್ಥಾಪಕರಾದ ಸ್ಮಿತೇಶ್ , ಮೆಸ್ಕಾಂ ನ ನಾಮನಿರ್ದೇಶಿತ ಸದಸ್ಯರಾದ ಪ್ರಕಾಶ್ ರೈ , ಬೆಂಗಳೂರಿನ ಉದ್ಯಮಿ ಸಮದ್ ಸೊಂಪಾಡಿ, ಯುವಕಾಂಗ್ರೆಸ್ ಮುಖಂಡ ಮೋನು ಬಪ್ಪಳಿಗೆ, ಉದ್ಯಮಿ ಫಾರೂಕ್ ಪುತ್ತೂರು ಎನ್. ಎಸ್. ಯು.ಐ.ನ ಭಾತಿಷ್ ಅಳಕೆಮಜಲು, ಸುದ್ದಿಬಿಡುಗಡೆ ಪತ್ರಿಕೆ ವರದಿಗಾರ ನಿಶಾಕಿರಣ್ ಬಾಳೆಪುಣಿ, ಪ್ರಮುಖರಾದ ಪ್ರದೀಪ್ ಪಿ. ಎಸ್. ಪುತ್ತೂರು, ಅಶೋಕ್ ಆಲಂಗಾರ್, ಹಮೀದ್ ಹಾಜಿ ಬಲ್ನಾಡ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿಹಾಲ್ ಯೂಸುಫ್ ಸ್ವಾಗತಿಸಿದರು. ಶಫೀಕ್ ಅಡ್ಕ ವಂದಿಸಿದರು. ಪಾಲುದಾರರಾದ ಜುನೈದ್ ಸಾಲ್ಮರ, ಪ್ರವೀಣ್ ಪೂಜಾರಿ ಬಲ್ನಾಡು, ಕಿರಣ್ ಬಟ್ಕಳ ಅತಿಥಿಗಳನ್ನು ಸ್ವಾಗತಿಸಿದರು. ಅಬ್ದುಲ್ ರಝಾಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು. ನವಾಝ್ ಸಾಲ್ಮರ, ಶಹಾನ್ ಪುತ್ತೂರು, ಆಸೀಫ್ ಬಡಕ್ಕೋಡಿ, ಆಸೀಫ್ ಬಲ್ನಾಡು ಸಹಕರಿಸಿದರು.

ಸ್ಮಾರ್ಟ್ ಕಾರ್ಡ್ & ಆ್ಯಪ್ ನಲ್ಲೇನಿದೆ:
ಟಾಪ್ ಟೆನ್ ಲಕ್ಕಿಸ್ಕೀಮ್ ನ ಆಯೋಜಕರು ತಮ್ಮ ಎಳನೇ ಸೀಸನ್ ನಲ್ಲಿ ಪ್ರತೀಯೋರ್ವ ಗ್ರಾಹಕರಿಗೆ ಸ್ಮಾರ್ಟ್ ಕಾರ್ಡ್ ಅನ್ನು ನೀಡಲಿದ್ದಾರೆ. ಈ ಸ್ಮಾರ್ಟ್ ಕಾರ್ಡ್ ನಲ್ಲಿ ನೀಡಲಾದ ಕ್ಯೂ ಆರ್ ಕೋಡ್ ಮೂಲಕ ಗ್ರಾಹಕರು ತಮ್ಮ ಸ್ಕೀಮ್ ನ ಕಂತುಗಳನ್ನು ಪಾವತಿಸಬಹುದಾಗಿದೆ. ಅದೇ ರೀತಿ ಗ್ರಾಹಕರು ಸ್ಕೀಮ್ ಗೆ ಸೇರಿದ ಕೂಡಲೇ ತಮಗೆ ಮೆಂಬರ್ ಸಂಖ್ಯೆಯನ್ನು ನೀಡಲಾಗುತ್ತದೆ. ಬಳಿಕ ಮೊಬೈಲ್ ನಲ್ಲಿ ಪ್ಲೇಸ್ಟೋರ್ ನಿಂದ ಟೋಪ್ ಟೆನ್ ನ ಆ್ಯಪ್ ಅನ್ನು ಡೌನ್ ಲೋಡ್ ಮಾಡಿ ತಮಗೆ ನೀಡಲಾದ ಮೆಂಬರ್ ಸಂಖ್ಯೆ ಹಾಗೂ ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಆ್ಯಪ್ ಅನ್ನು ಆ್ಯಕ್ಟಿವೇಟ್ ಮಾಡಬಹುದಾಗಿದೆ. ಬಳಿಕ ಆ ಆ್ಯಪ್ ನ ಮೂಲಕ ತಾವುಗಳು ಹಣ ಪಾವತಿಯೂ ಮಾಡಬಹುದು ಮಾತ್ರವಲ್ಲದೆ ತಾವು ಕಟ್ಟಿದ ಹಣ ಹಾಗೂ ಡ್ರಾ ವಿಜೇತರ ಬಗ್ಗೆ ಮಾಹಿತಿ ಲಭಿಸುತ್ತದೆ. ಈ ಆ್ಯಪ್ ಮೂಲಕ ಗ್ರಾಹಕರು ತಮ್ಮ ಖಾತೆಯ ಆಗುಹೋಗುಗಳ ಬಗ್ಗೆ ತಿಳಿಯಬಹುದಾಗಿದೆ.

ಫ್ಲ್ಯಾಟ್ – ಕಾರು ಗೆಲ್ಲುವ ಸುವರ್ಣಾವಕಾಶ:
ಟಾಪ್ ಟೆನ್ ಲಕ್ಕಿ ಸ್ಕೀಂ ಕಳೆದ ಆರು ಆವೃತಿಗಳಲ್ಲಿಯೂ ತಮ್ಮ ಸದಸ್ಯರಿಗೆ ಉತ್ತಮ ಗುಣಮಟ್ಟದ ವಸ್ತುಗಳನ್ನು ನೀಡುವುದರೊಂದಿಗೆ ಜನರ ವಿಶ್ವಾಸ ಗಳಿಸಿದೆ ಮಾತ್ರವಲ್ಲದೆ ಪ್ರತಿಯೊಂದು ಸ್ಕೀಮ್ ನಲ್ಲಿಯೂ ಒಂದಲ್ಲ ಒಂದು ವಿಶೇಷತೆಗಳನ್ನು ಹೊಂದಿತ್ತು. ಈ ಭಾರಿಯ ಸದಸ್ಯರಿಗೆ ಎರಡು ಬೆಡ್ ರೂಮ್‌ನ ಒಂದು ಮನೆ, ಒಂದು ಕಾರು, ಹತ್ತು ಬೈಕ್, 11 ಚಿನ್ನದ ಚೈನ್, 1 ಯ್ಯಾಕ್ಟೀವಾ ಹೋಂಡವನ್ನು ಗೆಲ್ಲುವ ಅವಕಾಶವನ್ನು ಸಂಸ್ಥೆ ಕಲ್ಪಿಸಿದೆ.

ಪ್ರತೀ ಹದಿನೈದು ದಿನಗಳಿಗೊಮ್ಮೆ 500 ಪಾವತಿ:
ಟಾಪ್ ಟೆನ್ ಲಕ್ಕಿ ಸ್ಟೀಂ ನ ಏಳನೇ ಆವೃತಿಯ ಪ್ರಥಮ ಡ್ರಾ ಅ.1ರಂದು ನಡೆಯಲಿದ್ದು, ಪ್ರತೀ ಹದಿನೈದು ದಿನಗಳಿಗೊಮ್ಮೆ 500 ರೂಪಾಯಿಯಂತೆ 40 ಕಂತುಗಳನ್ನು ಪಾವತಿಸಬೇಕಾಗಿದೆ. ಪ್ರತೀ ತಿಂಗಳ 1 ಹಾಗೂ 16ನೇ ದಿನಾಂಕದಂದು ಸಾಯಂಕಾಲ ಐದು ಗಂಟೆಗೆ ಕಚೇರಿಯಲ್ಲಿ ಡ್ರಾ ನಡೆಯಲಿದ್ದು, ಡ್ರಾ ವಿಜೇತರಾದ ಸದಸ್ಯರು ಮುಂದಿನ ಕಂತು ಕಟ್ಟಬೇಕಾಗಿಲ್ಲ. ಉಳಿದಂತೆ 40 ಕಂತುಗಳನ್ನು ಕಟ್ಟಿ ವಿಜೇತರಾಗದೆ ಉಳಿದ ಸದಸ್ಯರಿಗೆ ಬ್ರಾಂಡೆಟ್ ಕಂಪನಿಗಳ ಎಲೆಕ್ಟೋನಿಕ್ಸ್ ಐಟಂಗಳನ್ನು ಉತ್ತಮ ವ್ಯಾರೆಂಟಿಯೊಂದಿಗೆ ಅಥವಾ ಆಯ್ದ ಚಿನ್ನಾಭರಣಗಳನ್ನು ನೀಡಲಾಗುವುದು.

ಮತ್ತಷ್ಟು ಹೊಸತನದೊಂದಿಗೆ ಪಾರದರ್ಶಕ ಸೇವೆ ನೀಡುವ ಪ್ರಯತ್ನ
ನಾವೂ ಈಗಾಗಲೇ ಆರು ಆವೃತ್ತಿಯನ್ನು‌ ಯಶಸ್ವಿಯಾಗಿ ಪೂರ್ತಿಗೊಳಿಸಿದ್ದೇವೆ‌. ಪ್ರತಿಯೊಂದು ಆವೃತಿಯೂ ಒಂದಕ್ಕೊಂದು ವಿಭಿನ್ನವಾಗಿತ್ತು ಮಾತ್ರವಲ್ಲದೆ ವಿಶೇಷತೆಗಳಿಂದ ಕೂಡಿತ್ತು. ಈ ಭಾರಿ ಇನ್ನಷ್ಟು ವಿಭಿನ್ನಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಸ್ಕೀಮ್ ಇತಿಹಾಸದಲ್ಲೇ ಪ್ರಥಮ ಎನ್ನುವಂತೆ ಗ್ರಾಹಕರಿಗೆ ಸ್ಮಾರ್ಟ್ ಕಾರ್ಡ್ ನೀಡಲಿದ್ದೇವೆ ಮಾತ್ರವಲ್ಲದೆ ಅವರ ವ್ಯವಹಾರವನ್ನು ನೋಡಲು ಆ್ಯಪ್ ನ ವ್ಯವಸ್ಥೆಯನ್ನು ಮಾಡಿದ್ದೇವೆ. ಇನ್ನಷ್ಟು ಪಾರದರ್ಶಕವಾಗಿ ಸೇವೆ ನೀಡುವ ಇರಾದೆ ನಮ್ಮದಾಗಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸ್ಕೀಮ್ ಗೆ ಸದಸ್ಯರಾಗಿ‌ ತಮ್ಮ ಅದೃಷ್ಟ ಪರೀಕ್ಷೆ ಮಾಡಬಹುದಾಗಿದೆ.
ಪಾಲುದಾರರು

LEAVE A REPLY

Please enter your comment!
Please enter your name here