ಸಮಾಜದ ಸ್ವಾಸ್ತ್ಯ ಕಾಪಾಡುವ ಅತ್ಯಂತ ಗುರುತರ ಜವಾಬ್ದಾರಿ ಇರುವ ವೃತ್ತಿ ಶಿಕ್ಷಕ ವೃತ್ತಿ- ಶಾಸಕಿ ಭಾಗೀರಥಿ ಮುರುಳ್ಯ
ಸವಣೂರು : ಸುಳ್ಯ ಮಂಡಲ ಮಹಿಳಾ ಮೋರ್ಚಾ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಮುರುಳ್ಯದಲ್ಲಿ ಲೀಲಾವತಿ ರಾಘವ ಗೌಡ ಮತ್ತು ಜಾನಕಿ ವೆಂಕಪ್ಪ ಗೌಡ ಅವರನ್ನು ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.
ಈ ಸಂಧರ್ಭ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಸುಳ್ಯ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ. ಬಿ. ಕೆ. ಮಾಜಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯೆ ಪುಷ್ಪಾವತಿ ಬಾಳಿಲ,ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ವನಿತಾ ಸುವರ್ಣ, ಮಹಿಳಾ ಮೋರ್ಚಾ ಸದಸ್ಯೆ ಮತ್ತು ಮುರುಳ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಾನಕಿ ಮುರುಳ್ಯ, ಎಡಮಂಗಲ ಗ್ರಾ.ಪಂ.ಉಪಾಧ್ಯಕ್ಷೆ ದಿವ್ಯಾ ಯೋಗಾನಂದ,ಮಹಿಳಾ ಮೋರ್ಚಾ ಸದಸ್ಯೆ ಆಶಾ ರೈ ಕಲಾಯಿ, ಮುರುಳ್ಯ ಗ್ರಾಮ ಪಂಚಾಯತ್ ಸದಸ್ಯರಾದ ಪುಷ್ಪಲತಾ , ಮಾಜಿ ಸದಸ್ಯೆ ಸುಧಾರಾಣಿ , ಬಿಜೆಪಿ ಕಾರ್ಯಕರ್ತರಾದ ನೀಲಾವತಿ ತೋಟ, ನಿರ್ಮಲ ಹನಿಗುಂದಿ,ಮನೆಯವರಾದ ಮೈನಾ ಮತ್ತು ಕುಸುಮಾಧರ, ಯತೀಶ್ ಮತ್ತು ಮಧು,ವೆಂಕಪ್ಪ ಮಾಸ್ಟರ್ ಅಲಾಜೆ ಮುಂತಾದ ಪ್ರಮುಖರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
ಸುಳ್ಯ ಮಂಡಲ ಸವಣೂರು ಮಹಾಶಕ್ತಿ ಕೇಂದ್ರದ ಸೋಂಪಾಡಿ ನಿವಾಸಿ ಶಿಕ್ಷಕಿ ಚಂದ್ರಕಲಾ ಇವರನ್ನು ಅವರ ಸ್ವ ಗೃಹದಲ್ಲಿ ಗೌರವಿಸಲಾಯಿತು.
ಈ ಸಂಧರ್ಭ ಸುಳ್ಯ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ. ಕೆ ,ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಶ್ರೀ,ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಜೀವಿ ಶೆಟ್ಟಿ ಮಹಿಳಾ ಮೋರ್ಚಾ ಸದಸ್ಯೆ ಆಶಾ ರೈ ಕಲಾಯಿ,ಪಂಚಾಯತ್ ಸದಸ್ಯರಾದ ಚಂದ್ರಕಲಾ ಸುಣ್ಣಾಜೆ, ಪುಷ್ಪಾವತಿ ಕೇಕುಡೆ ಉಪಸ್ಥಿತರಿದ್ದರು.