ಪುತ್ತೂರು: 6 ತಿಂಗಳ ಹಿಂದೆಯಷ್ಟೆ ಬಂದಿದ್ದ ಕೆ.ಎಸ್.ಆರ್.ಟಿ.ಸಿಯ ವಿನೂತನ ಮಾದರಿಯ ಅಶ್ವಮೇಧ(ಕ್ಲಾಸಿಕ್) ಬಸ್ ಸೆ.4ರಂದು ಸಂಜೆ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಸುದ್ದಿಬಿಡುಗಡೆ ಪತ್ರಿಕಾ ಕಚೇರಿ ಮುಂದೆ ಕೆಟ್ಟು ನಿಂತ ಘಟನೆ ನಡೆದಿದೆ.
ಮಂಗಳೂರಿನಿಂದ ಹುಬ್ಬಳ್ಳಿಗೆ ಹೋಗಲು ಪುತ್ತೂರಿಗೆ ಬರುತ್ತಿದ್ದ ಅಶ್ವಮೇಧ ಬಸ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಬಸ್‌ಅನ್ನು ಚಾಲಕ ನಿಲ್ಲಿಸಿದ್ದಾರೆ.ವಿನೂತನ ಮಾದರಿಯ ಬಸ್‌ನಲ್ಲಿ ಸ್ವಯಂಚಾಲಿತ ಬಾಗಿಲುಗಳು, ತುರ್ತು ಬಟನ್, ಎಲ್‌ಇಡಿ ಮಾರ್ಗಫಲಕ, ಪಾಯಿಂಟ್ ವಾಯ್ಸ್ ಇದ್ದು ಇದರಲ್ಲಿ ತೊಂದರೆ ಆದಾಗ ಸಂವೇದಕಗಳು(ಸೆನ್ಸಾರ್) ಎಚ್ಚರಿಕೆ ನೀಡುತ್ತವೆ.ಅದೇ ರೀತಿ ಬಸ್‌ನಲ್ಲಿನ ತಾಂತ್ರಿಕ ದೋಷ ಉಂಟಾಗಿದ್ದು ಈ ಕುರಿತು ಸಂವೇದಕ ನೀಡಿದ ಸೂಚನೆಗೆ ಸಂಬಂಧಿಸಿ ಬಸ್‌ನ ಇಂಜಿನ್ ಆಫ್ ಆಗಿದ್ದರಿಂದ ಬಸ್‌ನ್ನು ನಿಲ್ಲಿಸಲಾಗಿದೆ. ಬಸ್ ರಸ್ತೆ ಮಧ್ಯೆ ಕೆಟ್ಟು ನಿಂತಿದ್ದರಿಂದ ಇತರ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.
ಈ ಬಸ್ಸುಗಳು ನಿಜವಾಗಿಯು ಕುದುರೆ ಜಟಕ ಗಾಡಿ ತರ ಇರುತ್ತದೆ.. ನಾನು 01-09-2024 ರಂದು ಗಗನಚುಕ್ಕಿ ಪ್ರವಾಸ ಹೋಗಿದ್ದಾಗ ಪ್ರಯಾಣ ಬಹಳ ಪ್ರಯಾಸದಾಯಕವಾಗಿರುತ್ತದೆ. ಸೀಟುಗಳು ಬಹಳ ಚಿಕ್ಕದಾಗಿರುತ್ತದೆ. ಈ ಬಸ್ಸಿನ ಅಗಲ ಚಿಕ್ಕದಾಗಿರುತ್ತದೆ. ಆದುದರಿಂದ ಇಬ್ಬರು ಮತ್ತು ಮೂರು ಜನ ಕುಳಿತುಕೊಳ್ಳಲು ಬಹಳ ಇಕ್ಕಟ್ಟದಾಗಿರುತ್ತದೆ. ಜಟಕ ಗಾಡಿಯಲ್ಲಿ ಕುಲುಕಾಟದ ತರಹ ಈ ಬಸ್ಸಿನಲ್ಲಿ ಸಹ ಬಹಳ ಕುಲುಕಾಟ ಇರುತ್ತದೆ. ಈ ಗಾಡಿಯಲ್ಲಿ ಶಾಕ್ ಅಬ್ಬಸೋರ್ಬೇರ್ ಇರುವ ಹಾಗೆ ಕಾಣುವುದಿಲ್ಲ. ಹೊಸ ಬಸ್ಸಿಗೆ ಇರಬೇಕಾದ ಯಾವುದೇ ಲಕ್ಷಣಗಳು ಇದಕ್ಕೆ ಇರುವುದಿಲ್ಲ. ಯಾರೋ ಚೆನ್ನಾಗಿ ಈ ಬಸ್ಸಿನ ಖರೀದಿಯಲ್ಲಿ ಕಮಿಷನ್ ತಿಂದಿ ರುವಂತಿದೆ.