





ಪುತ್ತೂರು: ಕೆದಂಬಾಡಿ ಗ್ರಾಮದ ತ್ಯಾಗರಾಜನಗರದಲ್ಲಿರುವ ಹಿಂದು ಜಾಗರಣ ವೇದಿಕೆಯ 22ನೇ ವಾರ್ಷಿಕ ಸಮಾರಂಭ ಹಾಗೂ ಸಾಮೂಹಿಕ ಗಣಪತಿ ಹವನವು ಸೆ.7ರಂದು ಬೆಳಿಗ್ಗೆ ತ್ಯಾಗರಾಜನಗರದಲ್ಲಿ ನಡೆಯಲಿದೆ. ಬೆಳಿಗ್ಗೆ 1೦.3೦ ಕ್ಕೆ ಸಾಮೂಹಿಕ ಶ್ರೀ ಗಣಪತಿ ಹವನ ಆರಂಭಗೊಂಡು ಮಧ್ಯಾಹ್ನ ಮಹಾ ಮಂಗಳಾರತಿ ಬಳಿಕ ಪ್ರಸಾದ ವಿತರಣೆ ನಡೆದು ಮಧ್ಯಾಹ್ನ 1 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 12 ರಿಂದ ಆಟೋಟ ಸ್ಪರ್ಧೆಗಳು ನಡೆಯಲಿದ್ದು ಕೆದಂಬಾಡಿ ಮತ್ತು ಅರಿಯಡ್ಕ ಗ್ರಾಮದ ಅಂಗನವಾಡಿ ಮಕ್ಕಳಿಗೆ, ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಿಂದು ಜಾಗರಣ ವೇದಿಕೆಯ ಸಂಯೋಜಕ ಭವಿತ್ ಪಯಂದೂರು, ಸಹ ಸಂಯೋಜಕ ಲೋಕೇಶ್ ಸ್ವಾಮಿನಗರ ಹಾಗೂ ಸದಸ್ಯರುಗಳ ಪ್ರಕಟಣೆ ತಿಳಿಸಿದೆ.









