ಅರುಣ್ ಕುಮಾರ್ ಪುತ್ತಿಲ ವಿರುದ್ಧ ಸಂತ್ರಸ್ತೆಯಿಂದ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು-ಪೊಲೀಸರ ವಿರುದ್ಧವೂ ಆರೋಪ

0

ಪುತ್ತೂರು: ಅತ್ಯಾಚಾರ ಆರೋಪ ಹೊರಿಸಿ ಅರುಣ್ ಕುಮಾರ್ ಪುತ್ತಿಲ (Arun Kumar Puttila) ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದ ಸಂತ್ರಸ್ತೆ ಇದೀಗ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೂ (Human Rights Commission) ದೂರು ನೀಡಿರುವುದು ಬೆಳಕಿಗೆ ಬಂದಿದೆ. ಪುತ್ತೂರು ನಗರ ಪೊಲೀಸ್ ಠಾಣೆಯ (Puttur Town Police Station) ಅಧಿಕಾರಿ ಮತ್ತು ಸಿಬ್ಬಂದಿ ಆರಂಭದಲ್ಲಿ ತನ್ನ ದೂರನ್ನು ಸ್ವೀಕರಿಸಿಲ್ಲ,ಪೊಲೀಸ್ ಸಿಬ್ಬಂದಿಗಳೂ ಆರೋಪಿಯೊಂದಿಗೆ ಶಾಮೀಲಾಗಿ ತನಗೆ ನ್ಯಾಯ ಕೊಡಿಸಲು ವಿಫಲರಾಗಿದ್ದಾರೆ ಎಂದೂ ದೂರಿನಲ್ಲಿ ಆರೋಪಿಸಿದ್ದಾರೆ.


ಅರುಣ್ ಕುಮಾರ್ ಪುತ್ತಿಲ ಅವರಿಂದ ನನಗಾದ ಅನ್ಯಾಯದ ಕುರಿತು ತನಿಖೆ ನಡೆಸಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸಂತ್ರಸ್ತೆ ಆಗ್ರಹಿಸಿದ್ದಾರೆ.ನನಗಾದ ಅನ್ಯಾಯದ ವಿರುದ್ಧ ದೂರು ನೀಡಲು ಆ.30ರಂದು ಪುತ್ತೂರು ನಗರ ಪೊಲೀಸ್ ಠಾಣೆಗೆ ಹೋದಾಗ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ನನ್ನ ದೂರನ್ನು ಸ್ವೀಕರಿಸದೆ ನನ್ನನ್ನು ಮೂರು ದಿನಗಳ ಕಾಲ ಕಾಯಿಸಿರುತ್ತಾರೆ.ಸೆ.1ರಂದು ನಾನು ಪುತ್ತೂರಿನ ಮಹಿಳಾ ಠಾಣೆಯಲ್ಲಿ ಧರಣಿ ಮಾಡಿದಾಗ ಸಾಯಂಕಾಲ ನಾನು ನೀಡಿದ ಅತ್ಯಾಚಾರ ದೂರನ್ನು ಬದಲಾಯಿಸಿ ಐಪಿಸಿ 376ರ ಬದಲಿಗೆ ಆತನಿಗೆ ಸುಲಭವಾಗಿ ಜಾಮೀನು ಸಿಗಬಹುದಾದ ಕಲಂ 354(ಎ) ಬರುವಂತಹ ದೂರನ್ನು ದಾಖಲು ಮಾಡಿರುತ್ತಾರೆ ಎಂದೂ ಸಂತ್ರಸ್ತೆ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.


ಆರೋಪಿ ಮತ್ತು ಆತನ ಕಡೆಯವರು ದೂರನ್ನು ನೀಡದಂತೆ ಮತ್ತು ಪ್ರಕರಣದಲ್ಲಿ ಸಾಕ್ಷಿ ನುಡಿಯದಂತೆ ನನಗೆ ಜೀವಬೆದರಿಕೆ ಹಾಕುತ್ತಿದ್ದಾರೆ ಎಂದೂ ದೂರಿನಲ್ಲಿ ಆರೋಪಿಸಿದ್ದು,ತನಗೆ ನ್ಯಾಯ ದೊರಕಿಸಿ ಕೊಡುವಂತೆ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here