ದರ್ಬೆ: ಇಲ್ಲಿನ ಪಿ ಸಿ ಪೈ ಅವರ ಕಿರಿಯ ಮಗ ದೇವಸ್ಯ ಬಳಿ ನಿವಾಸಿ, ಪಾಣೆಮಂಗಳೂರು ಮಹೇಶ್ ಪೈ(70) ಇಂದು ಬೆಳಿಗ್ಗೆ ಹೃದಯಘಾತದಿಂದ ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಸತ್ಯಭಾಮಾ ಪೈ, ಮಕ್ಕಳಾದ ಕಾಶಿನಾಥ್ ಪೈ, ಶಾಂಭವಿ ಕುಡ್ವ, ಅಳಿಯ ಮುಲ್ಕಿ ಅತುಲ್ ಕುಡ್ವ, ಸೊಸೆ ಶುಭ ಪೈ, ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.