ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ ದಿನಾಚರಣೆ – ಸನ್ಮಾನ

0

ಪುತ್ತೂರು: ಬನ್ನೂರು ಕೃಷ್ಣ ನಗರದಲ್ಲಿರುವ ಎವಿಜಿ ಶಾಲೆಯಲ್ಲಿ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಂಗವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿ ನಿವೃತ್ತ ಶಿಕ್ಷಕ ಹಾಗೂ ಲೇಖಕರಾಗಿರುವ ನಾರಾಯಣ ರೈ ಕುಕ್ಕುವಳ್ಳಿ ಅವರು ಮಾತನಾಡಿ, ಒಬ್ಬ ಶಿಕ್ಷಕರಾಗಿದ್ದವರು ರಾಷ್ಟ್ರಪತಿಯಾಗಿರುವುದು ಗುರುವೃಂದಕ್ಕೆ ಹೆಮ್ಮೆಯ ಮತ್ತು ಅಭಿಮಾನದ ಸಂಗತಿ. ಅಂತಹ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆದರ್ಶವನ್ನು ಶಿಕ್ಷಕರಾದ ನಾವೆಲ್ಲ ಪಾಲಿಸೋಣ ಎಂದರು.


ಜಿಲ್ಲಾ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕಿ ಶುಭಲತಾ ಅವರನ್ನು ಶಿಕ್ಷಕ ದಿನಾಚರಣೆಯ ಪ್ರಯುಕ್ತ ಶಾಲಾ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಶುಭಲತಾ ಅವರು ಮಾತನಾಡಿ, ರಾಧಾಕೃಷ್ಣನ್ ಅವರ ತ್ಯಾಗಶೀಲ ಬದುಕು ಮತ್ತು ಅಪಾರ ಅನುಭವ ನಮಗೆಲ್ಲ ಅನುಸರಣೆಯವಾದುದು ಎಂದರು. ಇದೇ ಸಂದರ್ಭದಲ್ಲಿ ಎವಿಜಿ ಶಾಲೆಯ ಎಲ್ಲಾ ಶಿಕ್ಷಕ ವೃಂದದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರ ಹುದ್ದೆ ಅದೊಂದು ಪವಿತ್ರವಾಗಿದ್ದು ಸಮಾಜವನ್ನು ತಿದ್ದುವಲ್ಲಿ ಶಿಕ್ಷಕರ ಜವಾಬ್ದಾರಿ ಅನನ್ಯವಾದುದು ಎಂದರು.

ಗೌರವ ಉಪಸ್ಥಿತಿಯಲ್ಲಿದ್ದ ಸಂಸ್ಥೆಯ ನಿರ್ದೇಶಕರಾದ ಡಾ. ಅನುಪಮ ಶಾಲಾ ಸಂಚಾಲಕ ಕೆ ವಿ ನಾರಾಯಣ, ಪ್ರಧಾನ ಕಾರ್ಯದರ್ಶಿ ಗುಡ್ಡಪ್ಪ ಗೌಡ ಬಲ್ಯ., ಸಂಸ್ಥೆಯ ಪ್ರಾಂಶುಪಾಲ ಸವಿತಾ ಕುಮಾರಿ ಕೆ ಮತ್ತು ಶಿಕ್ಷಕಿ ರಾಧಾ ಹಾಗೂ ವಿದ್ಯಾರ್ಥಿ ನಾಯಕನಾದ ಅದ್ವಿಕ್ ಬಂಜನ್ ಮತ್ತು ಕುಮಾರಿ ಶಿವಾನಿ ಸಂದರ್ಭೋಚಿತವಾಗಿ ಮಾತನಾಡಿ ಶಿಕ್ಷಕರ ದಿನದ ಶುಭಾಶಯ ಕೋರಿದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಸೌಮ್ಯ ಹೆಗಡೆಯವರು ಸ್ಪರ್ಧಾ ವಿಜೇತರ ವಿವರವನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ನಿರ್ದೇಶಕರಾದ ಪುಷ್ಪಾವತಿ ಕಳುವಾಜೆ ಎ.ವಿ, ವಾಮನ ಗೌಡ ಎ.ವಿ, ಗಂಗಾಧರ ಗೌಡ, ವನಿತಾ, ಜಯಪ್ರಕಾಶ್ ಕಳುವಾಜೆ ಬೋಧಕ-ಬೋಧಕೇತರ ವೃಂದ ಪೋಷಕ ವೃಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು. ಸಂಸ್ಥೆಯ ನಿರ್ದೇಶಕಿ ಪ್ರತಿಭಾ ದೇವಿ ಸ್ವಾಗತಿಸಿ, ಗೌತಮ್ ಅವರು ಸಂವಿಧಾನದ ಪೂರ್ವ ಪೀಠಿಕೆ ಓದಿದರು, ಗೌರಿ ಬನ್ನೂರು ರವರು ಪ್ರಾರ್ಥಿಸಿ, ವಂದಿಸಿದರು, ದೀಕ್ಷಾ ರವರು ಕಾರ್ಯಕ್ರಮ ನಿರೂಪಿಸಿದರು ಮತ್ತು ವನಿತಾ ರವರು ಸಹಕರಿಸಿದರು.

LEAVE A REPLY

Please enter your comment!
Please enter your name here