ಅಗಳಿ ಶ್ರೀ ಸದಾಶಿವ ಮಹಿಳಾ ಮಂಡಲ ರಚನೆ

0

ಗೌರವಾಧ್ಯಕ್ಷರಾಗಿ ಜ್ಯೋತಿ ಭಟ್, ಅಧ್ಯಕ್ಷರಾಗಿ ಸವಿತಾ ಅಗಳಿ, ಕಾರ್ಯದರ್ಶಿಯಾಗಿ ಭವ್ಯ ಅಗಳಿ

ಕಾಣಿಯೂರು: ಅಗಳಿ ಶ್ರೀ ಸದಾಶಿವ ಮಹಿಳಾ ಮಂಡಲವನ್ನು ನೂತನವಾಗಿ ಅಗಳಿ ಶ್ರೀ ಸದಾಶಿವ ದೇವಸ್ಥಾನದ ಸಭಾಂಗಣದಲ್ಲಿ ರಚನೆ ಮಾಡಲಾಯಿತು.

ಮಹಿಳಾ ಮಂಡಲದ ಗೌರವಾಧ್ಯಕ್ಷರಾಗಿ ಜ್ಯೋತಿ ಭಟ್, ಅಧ್ಯಕ್ಷರಾಗಿ ಸವಿತಾ ಅಗಳಿ, ಕಾರ್ಯದರ್ಶಿಯಾಗಿ ಭವ್ಯ ಅಗಳಿ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಜಯಲಕ್ಷ್ಮಿ, ಪಾರ್ವತಿ, ಜತೆ ಕಾರ್ಯದರ್ಶಿಯಾಗಿ ಸಂಧ್ಯಾ ಬಿ, ಕೋಶಾಧಿಕಾರಿಯಾಗಿ ಕಾವ್ಯರವರನ್ನು ಆಯ್ಕೆ ಮಾಡಲಾಗಿದೆ. ಸದಸ್ಯರಾದ ಪುಷ್ಪಾವತಿ, ಶುಭಲತಾ, ಲಲಿತಾ, ವೇದಾವತಿ, ಹೇಮಾವತಿ, ಕುಸುಮಾ, ರೇವತಿ, ಗಾಯತ್ರಿ, ನಿರ್ಮಲಾ, ನಂದಾಶ್ರೀ, ಹರಿಣಿ, ರಶ್ಮಿ,ಗೀತಾ, ಉಮೇಶ್ವರಿ ಅಗಳಿ, ಅಶ್ವಿನಿ, ಮಮತಾ, ನಾಗರತ್ನ, ಮಾಲತಿ, ದೀಕ್ಷಿತಾ, ಉಷಾ, ಹಿತ ಉಪಸ್ಥಿತರಿದ್ದರು. ಅಗಳಿ ಶ್ರೀ ಸದಾಶಿವ ದೇವಸ್ಥಾನದ ಅನುವಂಶೀಯ ಮೊಕ್ತೇಸರ ಶಿವರಾಮ ಗೌಡ ಅಗಳಿ, ಸದಾಶಿವ ಯುವಕ ಮಂಡಲದ ಅಧ್ಯಕ್ಷ ಲೋಕೇಶ್ ಅಗಳಿ, ಮೋನಪ್ಪ ಗೌಡ, ಮೋಹನ್ ಅಗಳಿ, ಮನೋಜ್ ಅಗಳಿ ಉಪಸ್ಥಿತರಿದ್ದು, ಮಾಹಿತಿ, ಮಾರ್ಗದರ್ಶನ ನೀಡಿದರು.

LEAVE A REPLY

Please enter your comment!
Please enter your name here