ಪುತ್ತೂರು: ಇಲ್ಲಿನ ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ಜೆಸಿಐ ಪುತ್ತೂರು, ರೋಟರಿ ಪುತ್ತೂರು ಎಲೈಟ್, ಲಯನ್ಸ್ ಕ್ಲಬ್ ಪುತ್ತೂರು, ಓಂ ನ್ಯೂಸ್ ಬಳಗ, ಶ್ರೀ ಹನುಮಾನ್ ಮಂದಿರ ಸಾಂತ್ವನ ಸೇವಾ ಟ್ರಸ್ಟ್ ಪುತ್ತೂರು, ಬಡವರ ಬಂಧು ತಂಡ ಕುಕ್ಕಿಪಡಿ ಇವರ ಸಹಯೋಗದೊಂದಿಗೆ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿ ಮತ್ತು ‘ವಿಷನ್ ಐ ಕೇರ್’ ವತಿಯಿಂದ ನೇತ್ರದಾನ ನೋಂದಣಿ, ಉಚಿತ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ತಪಾಸಣಾ ಶಿಬಿರ ಹಾಗೂ ಊರ ಪರವೂರ ಸಹೃದಯಿ ದಾನಿಗಳ ಸಹಕಾರದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅಶಕ್ತರಿಗೆ ಆಹಾರ ಸಾಮಗ್ರಿಗಳ ಕಿಟ್ ನೀಡುವ 31ನೇ ಯೋಜನೆ ‘ಒಳಿತು ಮಾಡು ಮನುಷ’ ಕಾರ್ಯಕ್ರಮವು ಆ.30ರಂದು ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ದೀಪ ಬೆಳಗಿಸಿ, ಭಾರತ ಮಾತೆಗೆ ಪುಷ್ಪಾರ್ಚಣೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಅತಿಥಿ ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ‘ನೀವು ಮಾಡುವ ಕೆಲಸ ಅಷ್ಟು ಸುಲಭದ ಕೆಲಸವಲ್ಲ ನಿಮಗೆ ಇರುವ ಕಾಳಜಿ, ಕಳಕಳಿ ನೋಡುವಾಗ ಬಾಕಿ ಉಳಿದ ಕಾರ್ಯಕ್ರಮಕ್ಕೂ ನಿಮ್ಮ ಕಾರ್ಯಕ್ರಮಕ್ಕೆ ತುಂಬಾ ವ್ಯತ್ಯಾಸವಿದೆ ಇದು ತುಂಬಾ ಅದ್ಭುತವಾದ ಕಾರ್ಯಕ್ರಮ ತಾನು ಕಷ್ಟದಲ್ಲಿದ್ದು ತನ್ನಿಂದ ಈ ಸಮಾಜಕ್ಕೆ ಏನಾದರೂ ಸಹಾಯ ಮಾಡುವ ಮನೋಭಾವನೆ ನಿಮ್ಮಲ್ಲಿದೆ ಹಾಗೆ ಇನ್ನು ಮುಂದಕ್ಕೂ ನಿಮ್ಮ ಸೇವೆ ಬಾನೆತ್ತರಕ್ಕೆ ಬೆಳಗಲಿ’ ಎಂದು ಶುಭ ಹಾರೈಸಿದರು.
ಪುತ್ತೂರಿನ ಜೆಸಿಐ ಅಧ್ಯಕ್ಷ ಮೋಹನ್ ಕೆ ಮಾತಾನಾಡಿ, ‘ನನ್ನಲ್ಲಿ ಇದ್ದದ್ದನ್ನು ಇನ್ನೊಬ್ಬರಿಗೆ ಕೊಡಲಿಕ್ಕೆ ಆಲೋಚನೆ ಮಾಡುತ್ತಾರೆ ಆದರೆ ಈ ತಂಡ ತಮ್ಮಲ್ಲಿ ಇಲ್ಲದೆ ಇದ್ದರೂ ಇನ್ನೊಬ್ಬರಲ್ಲಿ ಕೇಳಿ ಇಂತಹ ಸೇವೆಯನ್ನು ಮಾಡುತ್ತಾರೆ ಸಮಾಜದಲ್ಲಿರುವ ಅಶಕ್ತರೊಂದಿಗೆ ಸಕ್ರಿಯವಾಗಿ ನಿಲ್ಲಬೇಕು ಅಂತಹ ಕೆಲಸವನ್ನು ಈ ತಂಡವು ಮಾಡುತ್ತಿದೆ. ನಿಮ್ಮ ಈ ಒಳ್ಳೆಯ ಕೆಲಸಕ್ಕೆ ನನ್ನ ಬೆಂಬಲ ಯಾವಾಗಲು ಇದೆ, ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಸಮಾಜದ ಕಣ್ಣಿರನ್ನು ಒರೆಸುವoತಾಗಲಿ. ತನು ಮನ ಧನ ಸಹಾಯದೊಂದಿಗೆ ನಾನು ಕೂಡ ನಿಮ್ಮ ಜೊತೆ ಕೈ ಜೋಡಿಸುತ್ತೆನೆಂದರು’.
ಇನ್ನೋರ್ವ ಅತಿಥಿ ನಗರಸಭಾ ಸದಸ್ಯರಾದ ದಿನೇಶ್ ಸೇವಿರೆ ಮಾತಾನಾಡಿ, ‘ನಿಮ್ಮ ಸೇವೆ ಉತ್ತಮವಾಗಿದ್ದು ನಿಮಗೆ ಯಾವಾಗಲೂ ದೇವರ ಅನುಗ್ರಹ ಸಿಗಲಿ ನಾನು ಕೂಡ ನಿಮ್ಮ ಜೊತೆ ಇದ್ದೇನೆ’ ಎಂದರು ಹಾಗೂ ಇನ್ನೊರ್ವ ಅತಿಥಿಯಾದ ಪತ್ರಕರ್ತರು, ರೋಟರಿ ಕ್ಲಬ್ ಪುತ್ತೂರು ಎಲೈಟ್ ನಾ ಕಾರ್ಯದರ್ಶಿಯಾದ ಮೌನೇಶ್ ವಿಶ್ವಕರ್ಮ ಮಾತನಾಡಿ, ‘ಇಂದು ಮಾನವೀಯತೆ ಕಡಿಮೆಯಾಗುತ್ತಿದೆ ವೈಯಕ್ತಿಕ ಸ್ವಾರ್ಥವೇ ಹೆಚ್ಚಾಗುತ್ತಿದೆ ಇಂತಹ ಕಾಲದಲ್ಲಿ ಟೀಮ್ ಒಳಿತು ಮಾಡು ಮನುಷ್ಯ ತಂಡ ತನ್ನಲ್ಲಿ ಏನೂ ಇಲ್ಲದಿದ್ದರೂ ಇನ್ನೊಬ್ಬರಿಗೆ ಹೇಗೆ ಸಹಾಯ ಮಾಡಬಹುದು ಎಂಬುದಕ್ಕೆ ಮಾದರಿ’ ಎಂದರು.
‘ಟೀಮ್ ಒಳಿತು ಮಾಡು ಮನುಷ’ ತಂಡದ ಮಾಜಿ ಅಧ್ಯಕ್ಷೆ ಶೋಭಾ ಚೇತನ್ ಮಡಿವಾಳ ಮಾತನಾಡಿ ಸಣ್ಣ ಮಟ್ಟದಲ್ಲಿ ಪ್ರಾರಂಭವಾದ ಯೋಜನೆ ಸಹೃದಯಿ ದಾನಿಗಳ ಸಹಕಾರದಿಂದ ಇವತ್ತು ಆನೇಕ ಆಸಕ್ತರಿಗೆ ಸಹಾಯವಾಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ, ಇನ್ನು ಮುಂದೆಯೂ ಆಶಕ್ತರ ಸೇವೆಯನ್ನು ಮಾಡುವ ಅವಕಾಶ ದೇವರು ಅನುಗ್ರಹಿಸಲಿ ಎಂದು ಹೇಳಿದರು.
ವೇದಿಕೆಯಲ್ಲಿ ಬಿ.ಸಿ.ರೋಡು ಖುಷಿ ಗೊಂಬೆ ಬಳಗ ತಂಡದ ಕಲಾವಿದ ಲೋಕೇಶ್, ಧನ್ವಂತರಿ ಕ್ಲಿನಿಕ್ ವೈದ್ಯಕೀಯ ವೆರಿನ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ 50 ಸಾವಿರ ಮೊತ್ತದ 50 ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಲಾಯಿತು.ಹಾಗೂ 56ಜನರಿಗೆ ಬಿಪಿ,ಶುಗರ್ ತಪಾಸಣೆ, 50 ಜನರಿಗೆ ಉಚಿತ ಕಣ್ಣಿನ ತಪಾಸಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷೆ ಸರಸ್ವತಿ, ಕಾರ್ಯದರ್ಶಿ ಕಾವ್ಯ ಹೆಗ್ಡೆ, ಖಜಾಂಚಿ ಶೋಭಾ ಮಡಿವಾಳ, ಸ್ಥಾಪಕ ಅಧ್ಯಕ್ಷ ಚೇತನ್ ಕುಮಾರ್ ಮತ್ತು ಟ್ರಸ್ಟ್ ನ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಆತ್ಮಿ,ದಿಶಾ ಪ್ರಾರ್ಥಿಸಿ, ಚೈತ್ರ ಸ್ವಾಗತಿಸಿ,ಭವತಿ ಬಿಕ್ಷಮ್ ದೇಹಿ ಬಡವರ ಬಂಧು ಸೇವಾ ತಂಡದ ಸಂಚಾಲಕ ಗುರುರಾಜ್ ಕುಕ್ಕಿಪಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಲಾವಿದ ಕೃಷ್ಣಪ್ಪ ಶಿವನಗರ ವಂದಿಸಿದರು.