ಪುತ್ತೂರಿನ ಸುಲ್ತಾನ್ ಡೈಮಂಡ್ಸ್ & ಗೋಲ್ಡ್‌ನಲ್ಲಿ ವಜ್ರಾಭರಣಗಳ ಬೃಹತ್ ಪ್ರದರ್ಶನ

0

ಪುತ್ತೂರು: ಇಲ್ಲಿನ ಏಳ್ಮುಡಿಯಲ್ಲಿರುವ ತಾಜ್ ಟವರ್‌ನಲ್ಲಿ ಕಾರ್ಯಾಚರಿಸುತ್ತಿರುವ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಮಳಿಗೆಯಲ್ಲಿ ಸೆ.5ರಿಂದ ಸೆ.15ರ ವರೆಗೆ ‘ವಿಶ್ವ ವಜ್ರ-ಡೈಮಂಡ್ ಎಕ್ಸಿಬಿಷನ್’ ನಡೆಯುತ್ತಿದ್ದು ಈಗಾಗಲೇ ಗ್ರಾಹಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.

ಅತ್ಯಾಧುನಿಕ ಶೈಲಿಯ ಬೃಹತ್ ಸಂಗ್ರಹದಲ್ಲಿ ಇಟಲಿ, ಫ್ರಾನ್ಸ್, ಅಮೇರಿಕಾ, ಬೆಲ್ಜಿಯಂ, ಸಿಂಗಾಪುರ, ಟರ್ಕಿ ಶೈಲಿಯ 4ಸಿ ಪರಿಪೂರ್ಣವಾದ ನೈಸರ್ಗಿಕ ವಜ್ರಾಭರಣಗಳ 10 ಸಾವಿರಕ್ಕೂ ಅಧಿಕ ಕ್ಯಾರೆಟ್‌ಗಳು ಲಭ್ಯವಿರಲಿದೆ. ಇದರಲ್ಲಿ ಪ್ರತೀ ಕ್ಯಾರೆಟ್ ಮೇಲೆ 8 ಸಾವಿರ ರೂ. ಡಿಸ್ಕೌಂಟ್ ನೀಡಲಾಗುತ್ತದೆ. ಈ ಬೃಹತ್ ವಿಶ್ವ ವಜ್ರ ಡೈಮಂಡ್ ಎಕ್ಸ್‌ಪೋ ವೀಕ್ಷಿಸಲು ಮತ್ತು ಖರೀದಿಸಲು ಗ್ರಾಹಕರಿಗೆ ಇದೊಂದು ಸುವರ್ಣಾವಕಾಶವಾಗಿದೆ.

ವಜ್ರಾಭರಣಗಳ ಪ್ರದರ್ಶನದಲ್ಲಿ ಉನ್ನತ ಶ್ರೇಣಿಯ KYOMI ಐಷಾರಾಮಿ ಡೈಮಂಡ್, ಸಾಲಿಟೇರ್ ಕಲೆಕ್ಷನ್, ಸಾಂಪ್ರದಾಯಿಕ ಕ್ಲೋಸ್ ಸೆಟ್ಟಿಂಗ್ ಸಂಗ್ರಹ, ತನ್ಮಾನಿಯಾ ಸಂಗ್ರಹಗಳು, ವಧುವಿನ ವಜ್ರಾಭರಣಗಳ ಸಂಗ್ರಹ, ಕತ್ತರಿಸದ ವಜ್ರಗಳು ಮತ್ತು ರೂಬಿ ಎಮರಾಲ್ಡ್ ರತ್ನದ ಸಂಗ್ರಹಗಳು ಮತ್ತು ಕೈಗೆಟುಕುವ ದೈನಂದಿನ ಧರಿಸುವ ವಜ್ರದ ಸಂಗ್ರಹಗಳು ಲಭ್ಯವಿದೆ. 80 ಸಾವಿರ ರೂ.ಗಳಿಂದ ಪ್ರಾರಂಭವಾಗುವ ಡೈಲಿವೇರ್ ಲೈಟ್‌ವೇಟ್ ಡೈಮಂಡ್ ನೆಕ್ಲೇಸ್‌ಗಳು, 35 ಸಾವಿರ ರೂ.ಗಳಿಂದ ಪ್ರಾರಂಭವಾಗುವ ಲೈಟ್‌ವೇಟ್ ಡೈಮಂಡ್ ಬ್ಯಾಂಗಲ್, 8 ಸಾವಿರ ರೂ.ಗಳಿಂದ ಪ್ರಾರಂಭವಾಗುವ ಡೈಮಂಡ್ ರಿಂಗ್‌ಗಳು ಲೈಟ್‌ವೇಟ್ ಸಂಗ್ರಹದಲ್ಲಿ ಲಭ್ಯವಿದ್ದು ಇದನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಸುಲ್ತಾನ್ ಡೈಮಂಡ್ಸ್ ಗೋಲ್ಡ್ ಪುತ್ತೂರು ಬ್ರಾಂಚ್ ಮ್ಯಾನೇಜರ್ ಮುಸ್ತಫಾ ಕಕ್ಕಿಂಜೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here