





ಪುತ್ತೂರು: ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಸೆ.10-11ರಂದು ಸ್ವಚ್ಚತಾ ಪಖ್ವಾಡಾ ಕಾರ್ಯಕ್ರಮದಡಿಯಲ್ಲಿ “ಕೈ ತೊಳೆಯುವ ದಿನ” ಮತ್ತು “ವೈಯಕ್ತಿಕ ನೈರ್ಮಲ್ಯ ದಿನ” ಹಾಗೂ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.


ಕಬ್ -ಬುಲ್ ಬುಲ್, ಸ್ಕೌಟ್ಸ್ -ಗೈಡ್ಸ್ ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮುಖ್ಯ ಶಿಕ್ಷಕಿ ಜಯಶ್ರೀ ಬಿ ಸಾಲ್ಯಾನ್ ಅವರ ಸಾರಥ್ಯದಲ್ಲಿ ಶಿಕ್ಷಕರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಕೈ ತೊಳೆಯುವ ವಿಧಾನವನ್ನು ಶಿಕ್ಷಕಿ ಚಂದ್ರಾವತಿ ತಿಳಿಸಿದರು. ಸ್ವಚ್ಚತೆ ಹಾಗೂ ಅದರ ಮಹತ್ವವನ್ನು ಗೈಡ್ ಕ್ಯಾಪ್ಟನ್ ವನಿತಾ ಶೆಟ್ಟಿ ವಿವರಿಸಿದರು.





ಶಾಲಾ ಕೊಠಡಿ, ಶೌಚಾಲಯಯದ ಸ್ವಚ್ಚತೆಯ ಕುರಿತು ಶೇಖ್ ಜಲಾಲುದ್ದೀನ್ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ಶೇಖ್ ರಹ್ಮತ್ತುಲ್ಲಾಹ್ ಉಪಸ್ಥಿತರಿದ್ದರು.









