ರೂ.1.06ಲಕ್ಷ ಲಾಭ, ಶೇ.10 ಡಿವಿಡೆಂಡ್, 42ಪೈಸೆ ಬೋನಸ್
ಪುತ್ತೂರು:ಇರ್ದೆ ಹಾಲು ಉತ್ಪಾದಕರ ಸಹಕಾರ ಸಂಘವು 2023-24ನೇ ಸಾಲಿನಲ್ಲಿ 1,06,596.42 ಲಾಭಗಳಿಸಿ ಶೇ.10 ಡಿವಿಡೆಂಡ್ ಹಾಗೂ ಪ್ರತಿ ಲೀಟರ್ ಹಾಲಿಗೆ 42 ಪೈಸೆ ಬೋನಸ್ ನೀಡಲಾಗುವುದು ಎಂದು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಶುಭಕರ ರೈ ಘೋಷಣೆ ಮಾಡಿದರು.
ಸಭೆಯು ಸೆ.12ರಂದು ಸಂಘದ ಆವರಣದಲ್ಲಿ ನಡೆಯಿತು. ವರದಿ ವರ್ಷದಲ್ಲಿ ಹೈನುಗಾರರಿಂದ 1,19,805 ಲೀಟರ್ ಹಾಲು ಖರೀದಿಸಿ 1,15,922 ಲೀಟರ್ ಹಾಲನ್ನು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದ್ದು ರೂ.42,48,594.237,560 ಆದಾಯ ಬಂದಿದೆ. 7,560 ಲೀಟರ್ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಿದ್ದು ರೂ.3,68,726 ಆದಾಯ ಬಂದಿದೆ. 867 ಚೀಲ ಪಶು ಆಹಾರ ಮಾರಾಟದಿಂದ ರೂ.10,61,060 ಹಾಗೂ 81 ಕೆಜಿ ಪಶು ಆಹಾರ ಮಾರಾಟದಿಂದ ರೂ.44,880, 120ಕೆಜಿ ಸಂವೃದ್ಧಿ ಮಾರಾಟದಿಂದ ರೂ.6,000 ಹಾಗೂ ಮಾದರಿ ಹಾಲು ಮಾರಾಟದಿಂದ ರೂ.17,752 ಆದಾಯ ಬಂದಿದೆ. ಸಂಘ ಎಲ್ಲಾ ಖರ್ಚು ವೆಚ್ಚಗಳನ್ನು ಕಳೆದು ರೂ.1,06,596.42 ನಿವ್ವಳ ಲಾಭಗಳಿಸಿದೆ. ಲಾಭಾಂಶವನ್ನು ಸಂಘದ ಉಪ ನಿಬಂದನೆಯಂತೆ ವಿಂಗಡಿಸಲಾಗಿದೆ ಎಂದರು.
ಹೈನುಗಾರಿಕೆ ಕೇವಲ ಆರ್ಥಿಕ ಲಾಭವಾಗಿ ಕಾಣಬಾರದು. ಜೊತೆಗೆ ಕೃಷಿಯ ಅಭಿವೃದ್ಧಿಯೂ ಆಗಲಿದೆ. ಹೀಗಾಗಿ ಎಲ್ಲರೂ ಹೈನುಗಾರಿಕೆ ನಡೆಸಬೇಕು. ಸಂಘವನ್ನು ಬೆಳಸಬೇಕು. ಹೈನುಗಾರಿಕೆಗೆ ಪೂರಕವಾಗಿ ಒಕ್ಕೂಟ ಸಹಕಾರ ನೀಡಬೇಕು. ಕ್ಷೀರ ಕ್ರಾಂತಿಯ ಉದ್ದೇಶದಲ್ಲಿ ಒಕ್ಕೂಟವು ಮುತುವರ್ಜಿ ವಹಿಸಿಕೊಂಡು ಸಹಕಾರ ನೀಡಬೇಕು ಎಂದು ಅಧ್ಯಕ್ಷ ಶುಭಕರ ರೈ ಹೇಳಿದರು.
ದ.ಕ ಹಾಲೂ ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ.ಅನುದೀಪ್ ಒಕ್ಕೂಟದಿಂದ ದೊರೆಯುವ ಸೌಲಭ್ಯಗಳು, ಹಸುಗಳ ಪಾಲನೆ, ವೈಜ್ಞಾನಿಕ ವಿಧಾನಗಳ ಕುರಿತು ಮಾಹಿತಿ ನೀಡಿದರು.
ಬಹುಮಾನ ವಿತರಣೆ:
ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಜಯಂತಿ ಜಿ.ಆರ್(ಪ್ರ), ಸರೋಜ(ದ್ವಿ) ಹಾಗೂ ದಿನೇಶ್ ಕುಮಾರ್ ರೈ(ತೃ)ಯವರಿಗೆ ಬಹುಮಾನ ಹಾಗೂ ಎಲ್ಲಾ ಹೈನುಗಾರರಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು.
ನಿರ್ದೇಶಕರಾದ ಪುಷ್ಪರಾಜ ಶೆಟ್ಟಿ ಯಸ್., ಬಿ.ಚಂದ್ರಶೇಖರ ರೈ, ರವೀಂದ್ರ ಶೆಟ್ಟಿ ಕೆ., ಆನಂದ ಗೌಡ ಎ., ವೆಂಕಪ್ಪ ನಾಯ್ಕ ಎಂ., ಸದಾನಂದ ರೈ ಸಿ., ಸುಧಾಕರ ರೈ ಬಿ., ಅಜಿತಾ ಶಂಕರಿ ಯಸ್, ಸರೋಜ ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷ ಶುಭಕರ ರೈ ಸ್ವಾಗತಿಸಿದರು. ಕಾರ್ಯದರ್ಶಿ ಜೆ.ರಾಜರಾಮ ಭಟ್ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಬಿ. ದಿನೇಶ್ ಕುಮಾರ್ ರೈ ವಂದಿಸಿದರು. ಸಹಾಯಕ ಯನ್ ಹಮೀದ್ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು.