ಪುತ್ತೂರು: ಉದ್ಯಮಿ ಮೂಲತಃ ಗಡಿಪ್ಪಿಲ ನಿವಾಸಿಯಾಗಿದ್ದು ಪ್ರಸ್ತುತ ಸವಣೂರು ಸಮೀಪದ ಶಾಂತಿನಗರದಲ್ಲಿ ವಾಸವಾಗಿದ್ದ ಇಬ್ರಾಹಿಂ(62.ವ) ಅವರು ಸೆ.11ರಂದು ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ವಾಹನಗಳ ಡೀಲರ್ ಆಗಿದ್ದ ಇಬ್ರಾಹಿಂ ಅವರು ಪೀಠೋಪಕರಣಗಳ ಫ್ಯಾಕ್ಟರಿ ಹೊಂದಿದ್ದರು. ‘ಗಡಿಪ್ಪಿಲ ಇಬ್ರಾಹಿಂ’ ಎಂದೇ ಅವರು ಚಿರಪರಿಚಿತರಾಗಿದ್ದರು. ಮೃತರು ಪತ್ನಿ ಝೈನಬಾ, ಪುತ್ರ ಸುಹೈಲ್, ಪುತ್ರಿಯರಾದ ಅನೀಸಾ, ದಿಲ್ಶಾ, ಸಹನಾ ಹಾಗೂ ಸುರಯ್ಯಾ ಅವರನ್ನು ಅಗಲಿದ್ದಾರೆ. ಮೃತರ ಮನೆಗೆ ನೂರಾರು ಮಂದಿ ಆಗಮಿಸಿ ಸಂತಾಪ ಸೂಚಿಸಿದರು. ಬಡಕ್ಕೋಡಿ ಜುಮಾ ಮಸೀದಿಯ ಖಬರ್‌ಸ್ಥಾನದಲ್ಲಿ ದಫನ ಕಾರ್ಯ ನಡೆಸಲಾಯಿತು.