ಪುತ್ತೂರು: ಶ್ರೀ ದೇವತಾ ಸಮಿತಿಯ ವತಿಯಿಂದ ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ನೆಲೆಯಲ್ಲಿ ತುಳು ಅಪ್ಪೆಕೂಟ ಪುತ್ತೂರು ವತಿಯಿಂದ ತುಳು ಅಪ್ಪೆ ಕೂಟದ ಅಧ್ಯಕ್ಷರಾದ ಹರಿಣಾಕ್ಷಿ ಜೆ ಶೆಟ್ಟಿಯವರ ಸಮಗ್ರ ಅಧ್ಯಕ್ಷತೆಯಲ್ಲಿ ‘ತುಳು ಸಾಹಿತ್ಯ ಮಿನದನ’ ಕಾರ್ಯಕ್ರಮ ನಡೆಯಿತು.
ತುಳು ಅಪ್ಪೆ ಕೂಟದ ಗೌರವ ಸಲಹೆಗಾರರಾದ ಶಿಕ್ಷಕಿ, ಸಾಹಿತಿ ಕವಿತಾ ಅಡೂರು ಅಧ್ಯಕ್ಷತೆಯಲ್ಲಿ ನಡೆದ ‘ಅಪ್ಪೆಲ್ಲೆ ತುಳು ಕಬಿಕೂಟ’ ಕವಿಗೋಷ್ಠಿಯಲ್ಲಿ ಕವಿಗಳಾದ ಅಶ್ವಿಜ ಶ್ರೀಧರ್ ಶ್ರೀನಂದನ, ದೇವಕಿ ಬನ್ನೂರು, ನಳಿನಿ ಭಾಸ್ಕರ ರೈ ಮಂಚಿ, ವಿಂಧ್ಯಾ ಎಸ್ ರೈ ಕಡೆಶಿವಾಲಯ, ಸೌಮ್ಯ ಆರ್ ಶೆಟ್ಟಿ ಆನೆಕಲ್ಲು ಮಂಜೇಶ್ವರ, ಪರಮೇಶ್ವರೀ ಪ್ರಸಾದ್, ಶ್ವೇತಾ ಡಿ ಬಡಗಬೆಳ್ಳೂರು, ಶಾಂತಾ ಪುತ್ತೂರು, ವಸಂತಲಕ್ಷ್ಮೀ ಪುತ್ತೂರು, ವೀಣಾ ತಂತ್ರಿ ಕೆಮ್ಮಿಂಜೆ, ರೋಹಿಣಿ ರಾಘವ ಆಚಾರ್ಯ, ಶಾಂತಾ ಕುಂಟಿನಿ ಮತ್ತು ಶ್ರೀಶಾವಾಸವಿ ತುಳುನಾಡ್ ಸ್ವರಚಿತ ಕವನಗಳನ್ನು ಪ್ರಸ್ತುತ ಪಡಿಸಿದರು.
ಜೀ ಕನ್ನಡ ಸರಿಗಮಪ ಸೀಸನ್-20 ಖ್ಯಾತಿಯ ಸಮನ್ವಿ ರೈ ಮದಕ ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಮನ್ವಿ ರೈ ಮದಕ, ಅಪ್ಪೆ ಕೂಟದ ಕೋಶಾಧಿಕಾರಿ ಭಾರತಿ ವಸಂತ್, ಸದಸ್ಯರಾದ ಶಾರದಾ ಕೇಶವ ನಾಯ್ಕ್, ಗೌರವಾಧ್ಯಕ್ಷರಾದ ಪ್ರೇಮಲತಾ ರಾವ್ ಮತ್ತು ತಂಡದ ಸದಸ್ಯರು ಅನುಪಮ, ರಮಾದೇವಿ, ಜ್ಯೋತಿ, ರೇವತಿ ಸಾಲ್ಮರ, ಜಯಂತಿ ಹೆಬ್ಬಾರ್ ಪದರಂಗೀತ ಪ್ರಸ್ತುತ ಪಡಿಸಿದರು. ಕಾರ್ಯಕ್ರಮ ನೀಡಿದವರಿಗೆ ಅಪ್ಪೆಕೂಟದ ವತಿಯಿಂದ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ತುಳು ಅಪ್ಪೆ ಕೂಟದ ಅಧ್ಯಕ್ಷರಾದ ಹರಿಣಾಕ್ಷಿ ಜೆ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಸದಸ್ಯರಾದ ಶಾರದಾ ಅರಸ್ ವಂದಿಸಿದರು. ತುಳು ಅಪ್ಪೆ ಕೂಟದ ಪ್ರಧಾನ ಕಾರ್ಯದರ್ಶಿ ವಿದ್ಯಾಶ್ರೀ ಎಸ್ (ಶ್ರೀಶಾವಾಸವಿ) ತುಳುನಾಡ್ ಕಾರ್ಯಕ್ರಮ ನಿರೂಪಿಸಿದರು.