ಸವಣೂರು ವೃತ್ತ ಮಟ್ಟದ ಪ್ರಾಥಮಿಕ ವಿಭಾಗದ ಖೋ ಖೋ ಪಂದ್ಯಾಟ – ಆನಡ್ಕ ಹಿರಿಯ ಪ್ರಾಥಮಿಕ ಶಾಲಾ ಬಾಲಕರು ಮತ್ತು ಬಾಲಕಿಯರು ಪ್ರಥಮ

0

ಪುತ್ತೂರು: ಪ್ರಗತಿ ವಿದ್ಯಾಸಂಸ್ಥೆಗಳು ಕಾಣಿಯೂರು ಇಲ್ಲಿ ನಡೆದ ಸವಣೂರು ವೃತ್ತ ಮಟ್ಟದ ಪ್ರಾಥಮಿಕ ವಿಭಾಗದ ಖೋ ಖೋ ಪಂದ್ಯಾಟದಲ್ಲಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಆನಡ್ಕ ಶಾಲಾ ಕ್ರೀಡಾಪಟುಗಳು ಪಡೆದುಕೊಂಡಿದ್ದಾರೆ. ಬಾಲಕರ ವಿಭಾಗದಲ್ಲಿ ವಿವೇಕ್ ಬೆಸ್ಟ್ ಆಲ್ ರೌಂಡರ್ ಆಗಿ, ಬೆಸ್ಟ್ ಚೇಸರ್ ಆಗಿ ಪ್ರಣವ್, ಬಾಲಕಿಯರ ವಿಭಾಗದಲ್ಲಿ ಕೃತಿ ವಿ ಪಿ ಬೆಸ್ಟ್ ಚೇಸರ್, ಪ್ರಗತಿ ಬೆಸ್ಟ್ ರನ್ನರ್ ಆಗಿ ಬಹುಮಾನಗಳನ್ನು ಪಡೆದಿರುತ್ತಾರೆ.ಸೆ.13ರಂದು ಹಳೇನೇರಂಕಿಯಲ್ಲಿ ನಡೆಯುವ ತಾಲೂಕು ಮಟ್ಟದ ಖೋ ಖೋ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ. ಇವರ ಸಾಧನೆಯನ್ನು ಎಸ್ ಡಿ ಎಂ ಸಿ, ಪೋಷಕರು,ಹಿರಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಶ್ಲಾಘಿಸಿದರು. ಈ ಕ್ರೀಡಾಪಟುಗಳಿಗೆ ಶಾಲಾ ಹಿರಿಯ ವಿದ್ಯಾರ್ಥಿಗಳಾದ ಶ್ರೀ ಶರತ್, ಗುರುಪ್ರಸಾದ್, ಯಕ್ಷಿ ತ್ ಹಾಗೂ ಶಿಕ್ಷಕರಾದ ಮಾಲತಿ ಇವರು ತರಬೇತಿಯನ್ನು ನೀಡಿರುತ್ತಾರೆ.

LEAVE A REPLY

Please enter your comment!
Please enter your name here