ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಅಳಕೆಮಜಲು ಕಿ. ಪ್ರಾ. ಶಾಲೆ ಸಮಗ್ರ ಪ್ರಶಸ್ತಿ

0

ವಿಟ್ಲ: ಮಿತ್ತೂರು ಶಾಲೆಯಲ್ಲಿ ನಡೆದ ಕಂಬಳಬೆಟ್ಟು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಿರಿಯರ ವಿಭಾಗದಲ್ಲಿ 29 ಅಂಕಗಳನ್ನು ಪಡೆದು ಅಳಕೆಮಜಲು ಕಿ. ಪ್ರಾ. ಶಾಲೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಕಿರಿಯ ವಿಭಾಗದಲ್ಲಿ ಅರೇಬಿಕ್ ಪಠಣ ಮುಈನುದ್ದೀನ್ ಪ್ರಥಮ, ಕಥೆ ಆದ್ಯಾ ಕೆ. ಪ್ರಥಮ, ಅಭಿನಯ ಗೀತೆ ನಿರೀಕ್ಷಾ ದ್ವಿತೀಯ, ಭಕ್ತಿಗೀತೆ, ದೇಶಭಕ್ತಿಗೀತೆ ಮನ್ವಿ ದ್ವಿತೀಯ, ಧಾರ್ಮಿಕ ಪಠಣ ಸಂಸ್ಕೃತ ಪ್ರಶ್ವಿತಾ ದ್ವಿತೀಯ, ಕಂಠಪಾಠ ಇಂಗ್ಲೀಷ್ ಕನ್ನಡ ಮೇಘಶ್ರೀ ತೃತೀಯ, ಡ್ರಾಯಿಂಗ್ ಫಾತಿಮಾ ಮುಈನ ತೃತೀಯ, ಆಶುಭಾಷಣ ಆದ್ಯಾ ಕೆ. ತೃತೀಯ, ಹಿರಿಯ ವಿಭಾಗದಲ್ಲಿ ಅಭಿನಯ ಗೀತೆ ಅದ್ವಿತ ಪ್ರಥಮ, ಕಥೆ ರಿಝಾ ಫಾತಿಮಾ ಪ್ರಥಮ, ಭಕ್ತಿಗೀತೆ ಮಾನ್ಯಶ್ರೀ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here