ಪುತ್ತೂರು: ಸೆ.1ರಂದು ನಿಧನರಾದ ಕೃಷ್ಣನಗರ ನಿವಾಸಿ ಮೂಲತ ಕಾಸರಗೋಡು ತಾಲೂಕಿನ ವರ್ಕಾಡಿಯಲ್ಲಿ ಪ್ರಗತಿಪರ ಕೃಷಿಕರಾಗಿದ್ದು ಕೇರಳ ಸರಕಾರದ ಕೃಷಿ ಇಲಾಖೆಯಿಂದ ಹಲವು ಬಾರಿ ಸನ್ಮಾನಿಸಲ್ಪಟ್ಟಿದ್ದ ಪರಿವಾರ ಬಂಟ ಸಮಾಜದ ಅಗ್ರ ಕುಟುಂಬದ ಯಜಮಾನ ಬಟ್ಟೇಕಳ ವಿಠಲ ನಾಯ್ಕ್ ರವರ ಉತ್ತರಕ್ರಿಯಾದಿ ಸದ್ಗತಿ ಕಾರ್ಯಕ್ರಮ ಹಾಗೂ ಶ್ರದ್ದಾಂಜಲಿ ಸಭೆ ಸೆ.13 ರಂದು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಮುದಾಯ ಭವನದಲ್ಲಿ ನಡೆಯಿತು.
ಪ್ರಕಾಶ್ ನಾಯ್ಕ್ ಆಲಿಕೋಡಿ ನುಡಿನಮನ ಸಲ್ಲಿಸುತ್ತಾ ನಮ್ಮ ಕುಟುಂಬದ ಹಿರಿಯರಾಗಿದ್ದು ಎಲ್ಲರಿಗೂ ಮಾರ್ಗದರ್ಶಕರಾಗಿದ್ದ ಆತ್ಮೀಯ ವ್ಯಕ್ತಿತ್ವದ ವಿಠಲ ನಾಯ್ಕ್ ರವರು ತುಂಬಿದ ಕೂಡು ಕುಟುಂಬವನ್ನು ಮುನ್ನಡೆಸಿ 89ವರ್ಷದ ತುಂಬು ಜೀವನವನ್ನು ನಡೆಸಿ ನಮ್ಮನ್ನಗಲಿದ್ದಾರೆ. ಹಿರಿಯರ ದಿವ್ಯಾತ್ಮ ಭಗವಂತನ ಸನ್ನಿದಿಯಲ್ಲಿ ಚಿರಶಾಂತಿಯಲ್ಲಿರಲಿ ಅವರ ಕುಟುಂಬಸ್ಥರಿಗೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದರು. ಬಳಿಕ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ ವಿಠಲ ನಾಯ್ಕ್ ರವರ ಭಾವಚಿತ್ರಕ್ಕೆ ಬಂದ ಅತಿಥಿಗಳು ಮತ್ತು ಕುಟುಂಬಸ್ಥರು ಪುಷ್ಪ ನಮನ ಸಲ್ಲಿಸಿದರು.
ಮೃತರ ಪತ್ನಿ ಪದ್ಮಲತಾ ಪುತ್ರಿಯರಾದ ಸೋಮ ಪ್ರಭಾ, ಶಾಂತ ಪ್ರಭಾ, ಸತ್ಯ ಪ್ರಭಾ, ಅಳಿಯಂದಿರಾದ ಉಮೇಶ್ ನಾಯ್ಕ್ ಬೆಂಗಳೂರು, ಅನಂತ ನಾಯ್ಕ್ ಕಾಸರಗೋಡು, ರತನ್ ನಾಯ್ಕ್ ಕೃಷ್ಣನಗರ ಹಾಗೂ ಮೊಮ್ಮಕ್ಕಳು ಕುಟುಂಬಸ್ಥರು ಬಂಧು ವಿತ್ರರು ಉಪಸ್ಥಿತರಿದ್ದರು.