ನೆಲ್ಯಾಡಿ: ಜೇಸಿ ಸಪ್ತಾಹ, ವಲಯಾಧ್ಯಕ್ಷರ ಭೇಟಿ – ಯುವ ವಾಣಿಜ್ಯೋದ್ಯಮಿಗೆ ಗುರುತಿಸುವಿಕೆ | ಶಾಲೆಗಳಿಗೆ ಕೊಡುಗೆ ಹಸ್ತಾಂತರ

0

ನೆಲ್ಯಾಡಿ: ಜೇಸಿಐ ನೆಲ್ಯಾಡಿ, ಮಹಿಳಾ ಜೇಸಿ ಹಾಗೂ ಜೂನಿಯರ್ ಜೇಸಿವಿಂಗ್ ನೆಲ್ಯಾಡಿ ಇದರ ವತಿಯಿಂದ ನಡೆಯುತ್ತಿರುವ 41ನೇ ವರ್ಷದ ಜೇಸಿ ಸಪ್ತಾಹ ’ಡೈಮಂಡ್-2024’ ಸಪ್ತಸಂಭ್ರಮದ 5ನೇ ದಿನವಾದ ಸೆ.13ರಂದು ಯುವ ವಾಣಿಜ್ಯೋದ್ಯಮಿ ಗುರುತಿಸುವಿಕೆ, ಶಾಲೆಗಳಿಗೆ ಶಾಶ್ವತ ಯೋಜನೆಗಳ ಹಸ್ತಾಂತರ ಕಾರ್ಯಕ್ರಮ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯಲ್ಲಿ ನಡೆಯಿತು.


ನೆಲ್ಯಾಡಿ ಜೇಸಿಐ ಅಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಾಲ್ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಅಭ್ಯಾಗತರಾಗಿದ್ದ ಜೇಸಿ ವಲಯ 15ರ ವಲಯಾಧ್ಯಕ್ಷ ನ್ಯಾಯವಾದಿ ಗಿರೀಶ್ ಎಸ್.ಪಿ.,ಅವರು ಜೇಸಿಯ ಕಾರ್ಯಚಟುವಟಿಕೆಗಳ ಕುರಿತು ಮಾತನಾಡಿ ಯುವ ಜನತೆ ಜೇಸಿಯಲ್ಲಿ ಹೆಚ್ಚು ತೊಡಗಿಕೊಳ್ಳಬೇಕೆಂದು ಹೇಳಿದರು. ಸುಚಿತ್ರಾ ಜೆ.ಬಂಟ್ರಿಯಾಲ್ ಅವರ ಅಧ್ಯಕ್ಷತೆಯಲ್ಲಿ ನೆಲ್ಯಾಡಿ ಜೇಸಿಐ ಹೆಚ್ಚು ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿರುವ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಅತಿಥಿಗಳಾಗಿದ್ದ ವಲಯ ಉಪಾಧ್ಯಕ್ಷರಾದ ಅಭಿಷೇಕ್, ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ನೆಲ್ಯಾಡಿ ವರ್ತಕರ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್., ಕರ್ನಾಟಕ ಸರಕಾರಿ ನೌಕರರ ಸಂಘದ ಕಡಬ ತಾಲೂಕು ಅಧ್ಯಕ್ಷ ವಿಮಲ್‌ಕುಮಾರ್, ನೆಲ್ಯಾಡಿ ನ್ಯೂ ಸ್ಟೋರ್‌ನ ನಾಝೀಂ ಸಾಹೇಬ್‌ರವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ನೆಲ್ಯಾಡಿ ಜೇಸಿಐನ ಪೂರ್ವಾಧ್ಯಕ್ಷರೂ, ಜೇಸಿಐ ವಲಯಾಧಿಕಾರಿಯೂ ಆದ ಕೆ.ಯಂ.ದಯಾಕರ ರೈ, ನೆಲ್ಯಾಡಿ ಜೇಸಿಐ ಕಾರ್ಯದರ್ಶಿ ಆನಂದ ಅಜಿಲ, ಮಹಿಳಾ ಜೇಸಿ ಅಧ್ಯಕ್ಷೆ ಲೀಲಾ ಮೋಹನ್, ಜೆಜೆಸಿ ಅಧ್ಯಕ್ಷರಾಗಿದ್ದ ಶಮಂತ್, ವೈಷ್ಣವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಯೋಜನಾ ನಿರ್ದೇಶಕರಾದ ಜಯಾನಂದ ಬಂಟ್ರಿಯಾಲ್, ಪುರಂದರ ಗೌಡ ಡೆಂಜ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸುಚಿತ್ರಾ ಜೆ.ಬಂಟ್ರಿಯಾಲ್ ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ಆನಂದ ಅಜಿಲ ವಂದಿಸಿದರು. ಸುಪ್ರಿತಾ ರವಿಚಂದ್ರ ಜೇಸಿವಾಣಿ ವಾಚಿಸಿದರು. ಪೂರ್ವಾಧ್ಯಕ್ಷ ರವೀಂದ್ರ ಟಿ.ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು.


ಶಾಶ್ವತ ಯೋಜನೆಗಳ ಹಸ್ತಾಂತರ :
ಪುಚ್ಚೇರಿ ಸರಕಾರಿ ಹಿ.ಪ್ರಾ.ಶಾಲೆಗೆ ಕೈತೊಳೆಯುವ ಬೇಸಿನ್, ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಗೆ ಫ್ಯಾನ್ ಹಾಗೂ ನೆಲ್ಯಾಡಿ ಪಿಎಂಶ್ರೀ ಶಾಲೆಗೆ ಬೇಬಿ ಚಯರ್ ಕೊಡುಗೆಯಾಗಿ ನೀಡಲಾಯಿತು. ಜೇಸಿ ವಲಯಾಧ್ಯಕ್ಷ ಗಿರೀಶ್ ಎಸ್.ಪಿ.ಅವರು ಕೊಡುಗೆ ಹಸ್ತಾಂತರಿಸಿದರು.


ಗುರುತಿಸುವಿಕೆ/ಅಭಿನಂದನೆ:
ನೆಲ್ಯಾಡಿ ಮಧುಶ್ರೀ ಅರ್ಥ್ ಮೂವರ‍್ಸ್ ಮಾಲಕ, ಯುವ ವಾಣಿಜ್ಯೋದ್ಯಮಿ ಧನಂಜಯ ಅವರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು. ಸಾಧನಾಶ್ರೀ ಪ್ರಶಸ್ತಿ ಪುರಸ್ಕೃತ, ನೆಲ್ಯಾಡಿ ಜೇಸಿಐನ ಪೂರ್ವಾಧ್ಯಕ್ಷ ಇಸ್ಮಾಯಿಲ್ ಕೆ.ಅವರನ್ನು ಜೇಸಿಐ ವತಿಯಿಂದ ಗೌರವಿಸಲಾಯಿತು. ನೆಲ್ಯಾಡಿ ಜೇಸಿಐ ಜೊತೆ ಕಾರ್ಯದರ್ಶಿ ಜಾಹ್ನವಿ ಐ., ಪೂರ್ವಾಧ್ಯಕ್ಷ ಜೋನ್ ಪಿ.ಎಸ್.ಅವರು ಸನ್ಮಾನಿತರನ್ನು ಪರಿಚಯಿಸಿದರು.

LEAVE A REPLY

Please enter your comment!
Please enter your name here