131.51 ಕೋಟಿ ವ್ಯವಹಾರ , 5.51 ಲಕ್ಷ ಲಾಭ – ಅಧ್ಯಕ್ಷ ದಾಮೋದರ ಕುಲಾಲ್
ಪುತ್ತೂರು: ಇಲ್ಲಿನ ಕಲ್ಲಾರೆ ಮಹಾಲಕ್ಷ್ಮಿ ಸಂಕೀರ್ಣದಲ್ಲಿ ವ್ಯವಹಾರಿಸುತ್ತಿರುವ, ಕಡಬ ಹಾಗೂ ಮೂಡಬಿದ್ರಿಯಲ್ಲೂ ಶಾಖೆ ಹೊಂದಿರುವಂತಹ ಶ್ರೀ ಮಾತಾ ಸೌಹಾರ್ದ ಸಹಕಾರಿ ಸಂಘ ನಿ.ಇದರ 23-24 ನೇ ಸಾಲಿನ 8ನೇ ವಾರ್ಷಿಕ ಮಹಾಸಭೆಯು ಸಹಕಾರಿಯ ಸಭಾಂಗಣದಲ್ಲಿ ಸೆ.15ರಂದು ಸಂಘದ ಅಧ್ಯಕ್ಷ ದಾಮೋದರ ಕುಲಾಲ್ ಇವರ ನೇತೃತ್ವದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಮ್ಮ ಸಹಕಾರಿ ಸಂಘವು ಪ್ರಸಕ್ತ ಸಾಲಿನಲ್ಲಿ ರೂ.131.51 ಕೋಟಿ ವ್ಯವಹಾರ ನಡೆಸಿದ್ದು, ರೂ. 5.51,368 ಲಕ್ಷ
ಲಾಭಗಳಿಸಿದೆಯೆಂದು ಮಹಾಸಭೆಯಲ್ಲಿ ಘೋಷಣೆ ಮಾಡಿದರು.
ಸುಮಾರು 10 ಕೋಟಿ ರೂಪಾಯಿ ಸಾಲ ನೀಡಲಾಗಿದ್ದು, ರೂ..9.1ಕೋಟಿ ಸಾಲ ವಸೂಲಾತಿಯೂ ಆಗಿದೆ. ಹಾಗೂ 10.34 ಕೋಟಿ ರೂಪಾಯಿ ಹೊರ ಬಾಕಿ ಸಾಲವಿದ್ದು , ರೂ.14.26 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಕ್ಷೇಮ ನಿಧಿ ರೂ.30.94 ಲಕ್ಷ , ಪಾಲು ಬಂಡವಾಳ ರೂ.17.79ಲಕ್ಷ ಹಾಗೂ ಇತರ ನಿಧಿ ರೂ.2.48 ಕೋಟಿ ಜೊತೆಗೆ ಸಹಕಾರಿಯೂ ಪ್ರಸ್ತುತ 3750 ಸದಸ್ಯರೂಗಳನ್ನೊಳಗೊಂಡಿದೆಯೆಂದು ಮಾಹಿತಿ ನೀಡಿದರು.
ಸಹಕಾರಿಯ ಉಪಾಧ್ಯಕ್ಷ ಅರುಣ್ ಕುಮಾರ್ ಆಳ್ವ , ನಿರ್ದೇಶಕರುಗಳಾದ ಭಾಸ್ಕರ್ ಎಂ, ಶಂಕರನಾರಾಯಣ ಭಟ್, ವಸಂತ ಮೂಲ್ಯ, ಶೇಶಪ್ಪ ನಾಯ್ಕ ,ಹುಸೈನ್ , ಹೇಮಾವತಿ ವಿದ್ಯಾ, ತುಂಗಮ್ಮ ,ಶಶಿಕಲಾ ಸಹಿತ ಸಹಕಾರಿಯ ಸದಸ್ಯರು ಈ ವೇಳೆ ಹಾಜರಿದ್ದರು.
ಕಾರ್ಯದರ್ಶಿ ಶರತ್ ಕುಮಾರ್ ಸ್ವಾಗತಿಸಿದರು. ಸ್ವಸ್ತಿಕಾ ಪ್ರಾರ್ಥನೆ ನೆರವೇರಿಸಿ, ಮೇಘಾ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.
ಸಂಸ್ಥೆಯ ಸೇವೆಗಳು :
ಸಹಕಾರಿಯೂ ಸಂಪೂರ್ಣ ಗಣಕೀಕೃತ ಸೇವೆಗೆ ಆದ್ಯತೆ ನೀಡಿದ್ದು , ಗ್ರಾಹಕರ ಠೇವಣಿಗಳಿಗೆ ಆಕರ್ಷಕ ಬಡ್ಡಿಯನ್ನು ನೀಡುತ್ತದೆ. ವಾಹನ ಖರೀದಿ ಸಾಲ ,ಅಡಮಾನ ಸಾಲ , ಜಾಮೀನು ಭದ್ರತೆ ಸಾಲ , ದೈನಿಕ ಠೇವಣಿ ಮೇಲಿನ ಸಾಲ, ಚಿನ್ನದ ಆಭರಣಗಳ ಮೇಲೆ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ ಸಾಲ ಸೌಲಭ್ಯ , ಇ-ಸ್ಟ್ಯಾಂಪಿಂಗ್ ವ್ಯವಸ್ಥೆಗಳಿದ್ದು , ಆರೋಗ್ಯ ವಿಮೆ ,ವಾಹನ ವಿಮೆ , ಪ್ರಾಪರ್ಟಿ ಮೇಲಿನ ವಿಮಾ ಸೌಲಭ್ಯಗಳೂ ಹಾಗೂ ಸದಸ್ಯರಿಗೆ ಆರ್ಟಿಜಿಎಸ್ ಸೇವೆ ,ನೆಫ್ಟ್ ಸೇವೆ ಮತ್ತು ಕೋರ್ ಬ್ಯಾಂಕಿಂಗ್ ಸೇವೆಯೂ ಕೂಡ ಸಹಕಾರಿಯಿಂದ ನೀಡಲಾಗುತ್ತಿದೆಯೆಂದರು. ಈ ಮೊದಲಿನಂತಯೇ ಗ್ರಾಹಕರೆಲ್ಲಾ ಸಹಕಾರ ನೀಡುವಂತೆ ಆಧ್ಯಕ್ಷ ದಾಮೋದರ ಕುಲಾಲ್ ಕೋರಿದರು.