ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

0

ಪುತ್ತೂರು: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪುತ್ತೂರು, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಪುತ್ತೂರು ಇದರ ಆಶ್ರಯದಲ್ಲಿ ಸೆ.13 ರಂದು ಶ್ರೀ ರಾಮಕೃಷ್ಣ ಪ್ರೌಢಶಾಲೆ, ಪುತ್ತೂರು ಇಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವು ನಡೆಯಿತು.

ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿ ಲಿಟ್ಲ್ ಫ್ಲವರ್ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಇಂದಿನ ಮಕ್ಕಳು ದುಶ್ಚಟಗಳಿಗೆ ಹೇಗೆ ಬಲಿಯಾಗುತ್ತಾರೆ, ಮಾದಕ ವ್ಯಸನದ ಹಂತಗಳು, ವ್ಯಸನದಿಂದಾಗಿ ಅವಲಂಬಿತ ವ್ಯಕ್ತಿ ಹಾಗೂ ಸುತ್ತಮುತ್ತಲಿನವರಿಗೆ ಹೇಗೆ ತೊಂದರೆಗಳಾಗುತ್ತದೆ ಎಂಬುದನ್ನು ವಿವರಿಸಿದರು.


ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಖಿಲ ಕರ್ನಾಟಕ ತಾಲೂಕು ಜನಜಾಗೃತಿ ವೇದಿಕೆ ಪುತ್ತೂರು ಇಲ್ಲಿಯ ವಲಯಾಧ್ಯಕ್ಷ ಸತೀಶ್ ನಾಯ್ಕ್‌ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮಿ ಎ, ಅಖಿಲ ಕರ್ನಾಟಕ ತಾಲೂಕು ಜನಜಾಗೃತಿ ವೇದಿಕೆ ಪುತ್ತೂರು ಇಲ್ಲಿನ ಅಧ್ಯಕ್ಷ ಲೋಕೇಶ್ ಹೆಗ್ಡೆ, ಶ್ರೀ ಧ.ಗ್ರಾ.ಯೋ.ಬಿ.ಸಿ.ಟ್ರಸ್ಟ್ ಪುತ್ತೂರು ತಾಲೂಕಿನ ಯೋಜನಾಧಿಕಾರಿ ಶಶಿಧರ್ ಎಮ್, ಸೇವಾ ಪ್ರತಿನಿಧಿಯಾದ ಕಾವ್ಯಾ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ವಲಯ ಮೇಲ್ವಿಚಾರಕ ಉಷಾಲತಾ ನಿರ್ವಹಿಸಿದರು. ಶಿಕ್ಷಕಿ ಗೀತಾ ರೈ ಕೆ ಯವರು ವಂದಿಸಿದರು.

LEAVE A REPLY

Please enter your comment!
Please enter your name here