puttur: ಸಂತ ಫಿಲೋಮಿನಾ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ “ಟಿಫಿನ್ ಬಾಕ್ಸ್” ಎಂಬ ವಿಶೇಷ ಕಾರ್ಯಕ್ರಮವನ್ನು ಸೆ.14ರಂದು ಆಯೋಜಿಸಲಾಗಿತ್ತು.
ದೀಪ ಬೆಳಗುವುದರ ಮೂಲಕ ಸಾಂಕೇತಿಕವಾಗಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ಪುತ್ತೂರು ತಾಲೂಕು ಆರೋಗ್ಯ ಅಧಿಕಾರಿ ಡಾ. ದೀಪಕ್ ರೈ “ಆಧುನಿಕ ಆಹಾರ ಪದ್ಧತಿಯ ದುಷ್ಪರಿಣಾಮ” ಗಳ ಬಗ್ಗೆ ತಿಳಿಸಿದರು.ಶಾಲಾ ರಕ್ಷಕ- ಶಿಕ್ಷಕ ಸಂಘದ ಉಪಾಧ್ಯಕ್ಷ ವಿವೇಕ್ ಆಳ್ವ, ಕಾರ್ಯಕ್ರಮದ ಅತಿಥಿ ಮಂಗಳೂರು ಕೆ. ಎಂ. ಸಿ ಆಸ್ಪತ್ರೆ ಹಿರಿಯ ಆಹಾರ ತಜ್ಞ ಅರುಣ ಮಲ್ಯರವರು ಜಂಕ್ ಫುಡ್ ಎಂಬ ಭಯಾನಕ ಆಧುನಿಕ ಆಹಾರ ಪದ್ಧತಿಯು ಆರೋಗ್ಯವನ್ನು ಯಾವ ರೀತಿ ಕೆಡಿಸುತ್ತಿದೆ ಮತ್ತು ಅದರಿಂದ ಮುಂದಿನ ಜನಾಂಗವು ಹೇಗೆ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗಬಹುದು, ಸಾಂಪ್ರದಾಯಿಕ ಆಹಾರವನ್ನು ಇಷ್ಟಪಡುವ ರೀತಿಯಲ್ಲಿ ಮಕ್ಕಳಿಗೆ ಹೇಗೆ ನೀಡಬಹುದು ಎಂಬುದನ್ನು ಪಿ. ಪಿ. ಟಿ ಪ್ರೆಸೆಂಟೇಷನ್ ನೊಂದಿಗೆ ತಿಳಿಸಿದರು.
ಅತಿಥಿಗಳಿಗೆ ಹಾಗೂ ಆಹಾರ ಪ್ರಾತ್ಯಕ್ಷಿಕೆಯನ್ನು ನೀಡುವ ಸಂಪನ್ಮೂಲ ವ್ಯಕ್ತಿಗಳಿಗೆ ಗೌರವ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಆಹಾರ ತಯಾರಿಯ ಪ್ರಾತ್ಯಕ್ಷಿಕೆಯನ್ನು ಸಂಪನ್ಮೂಲ ವ್ಯಕ್ತಿ ವಾಣಿ ಪೈಲೂರು ದೋಸೆಗಳ ಪ್ರಕಾರದಲ್ಲಿ ಪ್ರವೀಣ್ಯರು, ದೀಪ ರಾಮಚಂದ್ರ ತಮಿಳುನಾಡಿನ ವಿಶೇಷ ಖಾದ್ಯಗಳಲ್ಲಿ ಪರಿಣಿತರು, ಸಾವಿತ್ರಿ ಜಗದೀಶ್ ಕುಂಬಾರ ಉತ್ತರ ಕರ್ನಾಟಕದ ಖಾದ್ಯಗಳಲ್ಲಿ ನಿಪುಣರು, ಪಾರುಲ್. ಆರ್. ಪಟೇಲ್ ಗುಜರಾತಿ ಖಾದ್ಯಗಳ ಪ್ರವೀಣರು, ಧನ್ವೀರ ಸಿಂಗ್ ಉತ್ತರಕಾಂಡ ವಿಶೇಷ ಖಾದ್ಯಗಳಲ್ಲಿ ನಿಪುಣರು, ನಯನ ರೈ ಸಾಂಪ್ರದಾಯಿಕ ಖಾದ್ಯಗಳಲ್ಲಿ ಪ್ರಾವೀಣ್ಯರು, ಬರಹಗಾರರು ಮತ್ತು ಫುಡ್ ವೋಲ್ಗ ಸೌಖ್ಯ ಮೋಹನ್ ಮಲೆನಾಡಿನ ಖಾದ್ಯಗಳಲ್ಲಿ ಪರಿಣಿತರು ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷರಾಗಿ ಶಾಲಾ ಸಂಚಾಲಕ ವಂದನೀಯ ಧರ್ಮಗುರು ಲಾರೆನ್ಸ್ ಮಸ್ಕರೇನಸ್ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಹೆತ್ತವರು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಹಿತೈಷಿಗಳೆಲ್ಲರೂ ಆಹಾರದ ರುಚಿಯನ್ನು ಸವಿದು, ತಯಾರಿಕೆಯ ವಿಧಾನವನ್ನು ತಿಳಿದುಕೊಂಡು ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು. ಆಹಾರ ಪ್ರಾತ್ಯಕ್ಷಿಕೆಯ ಜೊತೆ ಜೊತೆಗೆ ಸಂಪನ್ಮೂಲ ವ್ಯಕ್ತಿಗಳ ಕಿರು ಸಂದರ್ಶನವನ್ನು ಶಾಲಾ ಶಿಕ್ಷಕಿ ದೀಪ್ತಿ, ವಿದ್ಯಾಶ್ರೀ, ಸರಿತಾ ,ಡಯಾನ ನೊರೋನ್ನ ಮತ್ತು ಪ್ರಿಯಾ ನಡೆಸಿಕೊಟ್ಟರು.
ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಲೋರ ಪಾಯಸ್ ಸ್ವಾಗತಿಸಿ, ಅಖಿಲ ವಂದಿಸಿದರು, ಶಾಲಾ ಶಿಕ್ಷಕಿ ಸರಿತ ನಿರೂಪಿಸಿದರು. ರಕ್ಷಕ- ಶಿಕ್ಷಕ ಸಂಘದ ಸದಸ್ಯರಾದ ಎಲ್ಮೀರ ಸಹಕರಿಸಿದರು.