ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಓಝೋನ್‌ ದಿನಾಚರಣೆ

0

puttur:ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಸೆ. 16 ರಂದು ವಿಶ್ವ ಓಝೋನ್‌ ದಿನಾಚರಣೆ ನಡೆಯಿತು. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ಧೇಶದಿಂದ ಕಳೆದ ಒಂದು ವಾರವನ್ನು “ಓಝೋನ್‌ ಜಾಗೃತಿ ವಾರ” (ಓಝೋನ್‌ ಅವೇರ್ನೆಸ್‌ ವೀಕ್)‌ ಎಂದು ಹೆಸರಿಸಿ “ಓಝೋನ್‌ ಫಾರ್‌ ಲೈಫ್”‌ ಎಂಬ ಶೀರ್ಷಿಕೆಯಡಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು.

ವಿಜ್ಞಾನ ಸಂಘದ ವತಿಯಿಂದ ನಡೆಸಲಾದ ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಓಝೋನ್‌ ಪದರದ ಪ್ರಾಮುಖ್ಯತೆಯ ಕುರಿತು ಅರಿವು ಮೂಡಿಸುವುದಕ್ಕಾಗಿ ನಡೆದಿದ್ದು, ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ, ಮುಖವರ್ಣಿಕೆ, ಪ್ರಬಂಧ ಸ್ಪರ್ಧೆ, ಸ್ಲೋಗನ್‌ ಬರವಣಿಗೆ, ಪೋಸ್ಟರ್‌ ತಯಾರಿಕೆ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಈ ಕಾರ್ಯಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಓಝೋನ್‌ ತಳಹದಿಯ ರಕ್ಷಣೆ ಹಾಗೂ ಪರಿಸರ ಪರಿಪಾಲನೆಯ ಮಹತ್ವವನ್ನು ತಿಳಿಸುವಲ್ಲಿ ಸಫಲವಾಯಿತು.

ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಮಮತಾ ಶೆಟ್ಟಿ, ಸುಖದಾದೇವಿ, ಸಂಧ್ಯಾ ವಿಜ್ಞಾನ ಸಂಘದ ಸದಸ್ಯರು ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here