ಸೆ.22:ಕಡಬ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

0

ಪುತ್ತೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಪಂಚಾಯತ್ ಪುತ್ತೂರು, ಪಟ್ಟಣ ಪಂಚಾಯತ್ ಕಡಬ, ತಾಲೂಕು ಪಂಚಾಯತ್ ಕಡಬ, ತಾಲೂಕು ಯುವಜನ ಒಕ್ಕೂಟ ಕಡಬ, ಸಂತ ಫಿಲೋಮಿನಾ ಕಾಲೇಜು ಪುತ್ತೂರು, ಕಡಬ ಸರಕಾರಿ ಪದವಿ ಪೂರ್ವ ಕಾಲೇಜು, ಕೇಪು ಲಕ್ಷ್ಮೀ ಜನಾರ್ದನ ಯುವಕ ಮಂಡಲ, ಬಿಳಿನೆಲೆ ಯುವಕ ಮಂಡಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಡಬ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವು ಸೆ.22ರಂದು ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜರಗಲಿದೆ.


ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯರವರು ಪಂದ್ಯಾಟವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಬ ಪಟ್ಟಣ ಪಂಚಾಯತ್ ತಹಶೀಲ್ದಾರ್ ಹಾಗೂ ಆಡಳಿತಾಧಿಕಾರಿಗಳು ಪ್ರಭಾಕರ ಖಜೂರೆರವರು ವಹಿಸಿಕೊಳ್ಳಲಿದ್ದಾರೆ. ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿರವರು ಗೌರವ ವಂದನೆಯನ್ನು ಸ್ವೀಕರಿಸಲಿದ್ದಾರೆ. ಕಡಬ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಶ್ರೀಮತಿ ಲೀಲಾವತಿರವರು ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ. ಮಂಗಳೂರು ಯುವ ಸಬಲೀಕರಣ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿ’ಸೋಜರವರು ಕ್ರೀಡಾ ಜ್ಯೋತಿ ಬೆಳಗಿಸಲಿದ್ದಾರೆ ಜೊತೆಗೆ ಅನೇಕ ಗಣ್ಯರು ಉಪಸ್ಥಿತಲಿದ್ದಾರೆ.


ಸೆ.21ರಂದು ಪುರುಷ/ಮಹಿಳೆಯರಿಗೆ ಸ್ಪರ್ಧೆಗಳು:
ಕಬಡ್ಡಿ* ಖೋ-ಖೋ* ವಾಲಿಬಾಲ್* ತ್ರೋಬಾಲ್* ಫುಟ್ಬಾಲ್* ಅಥ್ಲೆಟಿಕ್ಸ್(100ಮೀ.,200ಮೀ.,400ಮೀ., 800ಮೀ., 1,500ಮೀ., 5,000ಮೀ., ಶಾಟ್‌ಪುಟ್, ಉದ್ದ ಜಿಗಿತ,
ಎತ್ತರ ಜಿಗಿತ, ಜಾವೆಲಿನ್ ತ್ರೋ, ಡಿಸ್ಕಸ್ ತ್ರೋ, ಟ್ರಿಪಲ್‌ಜಂಪ್, 4100ಮೀ ಮತ್ತು 4400ಮೀ ರಿಲೇ), ಮಹಿಳೆಯರಿಗೆ ಕಬಡ್ಡಿ* ಖೋ-ಖೋ* ವಾಲಿಬಾಲ್* ತ್ರೋಬಾಲ್* ಅಥ್ಲೆಟಿಕ್ಸ್(100ಮೀ., 200ಮೀ., 400ಮೀ., 800ಮೀ., 1,500ಮೀ., 3,000ಮೀ.) ಶಾಟ್‌ಪುಟ್, ಉದ್ದ ಜಿಗಿತ, ಎತ್ತರ ಜಿಗಿತ, ಜಾವೆಲಿನ್ ತ್ರೋ, ಡಿಸ್ಕಸ್ ತ್ರೋ, ಟ್ರಿಪಲ್‌ಜಂಪ್ ಮತ್ತು 4100ಮೀ, 4400ಮೀ. ರಿಲೇ) ನಡೆಯಲಿರುವುದು.


ವಿಶೇಷ ಸೂಚನೆ:
ಪಂದ್ಯಾಟದ ಉದ್ಘಾಟನೆಯ ಮುಂಚಿತವಾಗಿ ಎಲ್ಲಾ ಸ್ಪರ್ಧೆಗಳು ಪ್ರಾರಂಭವಾಗಲಿದೆ. ಬೆಳಿಗ್ಗೆ 8-30ಕ್ಕೆ ಪುರುಷರ ವಿಭಾಗದ 5000 ಮೀ. ಓಟ ಮತ್ತು ಮಹಿಳೆಯರ
ವಿಭಾಗದ 3000ಮೀ. ಓಟ ಸ್ಪರ್ಧೆಗಳು ನಡೆಯಲಿರುವುದು ಹಾಗೂ ಇತರ ವೈಯುಕ್ತಿಕ ಕ್ರೀಡಾ ಸ್ಪರ್ಧೆಗಳು ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ನಡೆಯಲಿರುವುದು, ಆದುದರಿಂದ ಎಲ್ಲಾ ಸ್ಪರ್ಧಿಗಳು ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಕ್ರೀಡಾಂಗಣದಲ್ಲಿ ಹಾಜರಿರುವುದು. ಭಾಗವಹಿಸುವವರು ಸ್ಥಳದಲ್ಲೇ ನೋಂದಾಯಿಸುವುದು. ಗುಂಪಾಟ ಸ್ಪರ್ಧೆಗಳಲ್ಲಿ ಭಾಗವಹಿಸುವ ತಂಡದವರು 9 ಗಂಟೆಯ ಒಳಗಾಗಿ ಸ್ಥಳದಲ್ಲಿ ವರದಿ ಮಾಡಿಕೊಳ್ಳತಕ್ಕದ್ದು. 9-30 ಗಂಟೆಗೆ ಸರಿಯಾಗಿ ತಳುಕು (Fixture) ಹಾಕುವುದರಿಂದ ನಂತರ
ಬಂದ ಯಾವುದೇ ತಂಡದವರಿಗೆ ಭಾಗವಹಿಸಲು ಅವಕಾಶವಿರುವುದಿಲ್ಲ. ಸೆ.22 ರಂದು ಪುರುಷರ ವಿಭಾಗದ ಫುಟ್‌ಬಾಲ್ ಪಂದ್ಯಾಟವು ಸಂತ ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ನಡೆಸಲಾಗುವುದು ಎಂದು ಯುವ ಸಬಲೀಕರಣ ಕ್ರೀಡಾ ಇಲಾಖೆಯ ನೋಡಲ್ ಅಧಿಕಾರಿ ಮಾಮಚ್ಚನ್ ಎಂ.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here