ರೂ.61,19,24.82 ಲಕ್ಷ ನಿವ್ವಳ ಲಾಭ, ಡಿವಿಡೆಂಡ್ ಶೇ.25
ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರ ಹಾಲು ಉತ್ಪಾದಕರ ಸಹಕಾರ ಸಂಘದ 2023-24ನೇ ಸಾಲಿನ ಮಹಾಸಭೆ ಅಧ್ಯಕ್ಷೆ ದೇವಕಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಅಧ್ಯಕ್ಷೆ ದೇವಕಿ ಮಾತನಾಡಿ ಸಂಘವು ಕಳೆದ ಸಾಲಿನಲ್ಲಿ ಒಟ್ಟು 3 ಕೋಟಿ 30 ಲಕ್ಷದ ವ್ಯವಹಾರ ನಡೆಸಿದೆ. ವರ್ಷಾಂತ್ಯಕ್ಕೆ 134 ಮಂದಿ ಸದಸ್ಯರಿದ್ದು, ರೂ 77,000 ಪಾಲು ಬಂಡವಾಳವಿರುತ್ತದೆ. ವರ್ಷಾಂತ್ಯಕ್ಕೆ 2,64,329,32 ಲೀ.ನಷ್ಟು ಹಾಲು ಸಂಗ್ರಹವಾಗಿರುತ್ತದೆ. ಸಂಘಕ್ಕೆ ರೂ 61,19,24.82 ನಿವ್ವಳ ಲಾಭ ಬಂದಿದೆ ಎಂದು ಹೇಳಿದರು.
ಒಕ್ಕೂಟದ ವಿಸ್ತರಣಾಧಿಕಾರಿ ರಾಜೇಶ್ ಕಾಮತ್ ಮಾತನಾಡಿ ಸಂಘದ ಸದಸ್ಯರು ಹೆಚ್ಚು ಹಾಲು ಪೂರೈಕೆ ಮಾಡುವಂತೆ ಸಲಹೆ ನೀಡಿದರು. ಲಾಭಾಂಶದಲ್ಲಿ ಸದಸ್ಯರಿಗೆ ಶೇ.25 ಡಿವಿಡೆಂಡ್ ನೀಡುವುದೆಂದು ಹಾಗೂ ಸದಸ್ಯರ ಬೋನಸ್ ರೂ 2.92,347ನ್ನು ಪ್ರತಿ ಲೀಟರಿಗೆ ರೂ 1.10ರಂತೆ ನೀಡುವುದೆಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಧನ ಸಹಾಯ ವಿತರಣೆ: ಸದಸ್ಯರ 2 ಜನ ಮಕ್ಕಳಿಗೆ ಪಿ.ಯು.ಸಿಯಲ್ಲಿ ಉತ್ತಮ ಅಂಕ ಗಳಿಸಿರುವುದರಿಂದ ಪ್ರೋತ್ಸಾಹಕ್ಕಾಗಿ ಧನ ಸಹಾಯ ನೀಡಿ ಗುರುತಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಸ್ವಪ್ಪಾ ಶೆಟ್ಟಿ, ನಿರ್ದೇಶಕರುಗಳಾದ ಸವಿತಾ, ನಮಿತಾ, ಭವ್ಯಾ, ಧನ್ಯಶ್ರೀ, ಹರಿಣಾಕ್ಷಿ, ಸುಜಾತ, ಮಮತಾ, ಗೀತಾ, ಇಂದಿರಾ, ಭವಾನಿ ಜೆ. ಉಪಸ್ಥಿತರಿದ್ದರು. ಕಾರ್ಯದರ್ಶಿ ಸುಜಾತ ಕೆ ವಾರ್ಷಿಕ ವರದಿ ಓದಿದರು. ಭವ್ಯ, ಧನ್ಯಶ್ರೀ ಮತ್ತು ಮಮತಾ ಪ್ರಾರ್ಥಿಸಿದರು. ಸಂಘದ ನಿರ್ದೇಶಕಿ ಭವ್ಯ ಸ್ವಾಗತಿಸಿದರು. ಧನ್ಯಶ್ರೀ ವಂದಿಸಿದರು.
ಬಹುಮಾನ ವಿತರಣೆ
ಕಳೆದ ಸಾಲಿನಲ್ಲಿ ಸಂಘಕ್ಕೆ 18389.23 ಲೀ.ನಷ್ಟು ಹಾಲು ಪೂರೈಸಿದ ಸವಿತಾ ರಮೇಶ್ ಶೆಟ್ಟಿರವರಿಗೆ ಪ್ರಥಮ ಬಹುಮಾನ ನೀಡಲಾಯಿತು. 14757.68 ಲೀ.ನಷ್ಟು ಹಾಲು ಪೂರೈಸಿದ ನಮಿತಾ ಚಂದ್ರಶೇಖರ ಗೌಡರವರಿಗೆ ದ್ವಿತೀಯ ಬಹುಮಾನ ನೀಡಲಾಯಿತು. ಹಾಗೂ 12131 ಲೀ.ನಷ್ಟು ಹಾಲು ಪೂರೈಸಿದ ಗುಣವತಿ ಗಂಗಯ್ಯ ಗೌಡರವರಿಗೆ ತೃತೀಯ ಬಹುಮಾನ ನೀಡಲಾಯಿತು. 80 ಜನ ಸದಸ್ಯರಿಗೆ ಪ್ರೋತ್ಸಾಹಕರ ಬಹುಮಾನ ನೀಡಲಾಯಿತು.