ಸವಣೂರು : ಸವಣೂರು ಗ್ರಾಮ ಪಂಚಾಯತ್ ನ ಕುಮಾರಧಾರ ಸಭಾಂಗಣದಲ್ಲಿ ಆದರ್ಶ ಸ್ತ್ರೀ ಶಕ್ತಿ ಗೊಂಚಲು ಸಮಿತಿ ಸಭೆಯು ಅಧ್ಯಕ್ಷೆ ಯಶೋಧಾ ಪೆರಿಯಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ವೇದಿಕೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್, ಗೊಂಚಲು ಸಮಿತಿ ಕಾರ್ಯದರ್ಶಿ ಪುಷ್ಪಾವತಿ, ಶ್ರೀ ರಾಮ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿಜಯ ಈಶ್ವರ ಗೌಡ, ಗೊಂಚಲು ಪ್ರತಿನಿಧಿ ರೇವತಿ ಉಪಸ್ಥಿತರಿದ್ದರು.
ಸಭೆಯಲ್ಲಿ ವಕೀಲರಾದ ರಾಜೇಶ್ವರಿ ಅವರು,ಲಿಂಗತ್ವ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಲಯ ಮೇಲ್ವಿಚಾರಕಿ ಆರತಿ ಅವರು, ಇಲಾಖೆಯ ಮಾಹಿತಿ ನೀಡಿದರು.
ಬಳಿಕ ಗೊಂಚಲು ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.ಅಧ್ಯಕ್ಷರಾಗಿ ಶ್ವೇತ ಬಿ ಎಸ್ ಉಪಾಧ್ಯಕ್ಷರಾಗಿ ಬದ್ರುನ್ನೀಸಾ ಕಾರ್ಯದರ್ಶಿಯಾಗಿ ಯಶೋಧ ನವೀನ್ ಮೆದು, ಜತೆ ಕಾರ್ಯದರ್ಶಿಯಾಗಿ ಸಫಿಯಾ, ಕೋಶಾಧಿಕಾರಿಯಾಗಿ ಅರ್ಚನ ಎಸ್, ಗೊಂಚಲು ಪ್ರತಿನಿಧಿಯಾಗಿ ಪುಷ್ಪಾವತಿ ಕೇಕುಡೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಒಕ್ಕೂಟದ ಸಂಪನ್ಮೂಲ ವ್ಯಕ್ತಿಗಳು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.