ಪುತ್ತೂರು: ಬೊಳುವಾರು ಅಲ್ಮಾಸ್ ಟವರ‍್ಸ್‌ನಲ್ಲಿರುವ ಚರ್ಮರೋಗ ತಜ್ಞ ಡಾ. ಸಚಿನ್ ಶೆಟ್ಟಿಯವರ ಪುತ್ತೂರು ಸ್ಕಿನ್ ಕ್ಲಿನಿಕ್‌ನ ಏಳನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಚರ್ಮರೋಗದ ಉಚಿತ ತಪಾಸಣಾ ಶಿಬಿರ ಹಾಗೂ ಉಚಿತ ರಕ್ತದ ಅಲರ್ಜಿ ಪರೀಕ್ಷೆ ಸೆ.18ರಂದು ನೆರವೇರಿತು.
ಚರ್ಮರೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಳೆದ ಆರು ವರ್ಷಗಳಿಂದ ನಿರಂತರವಾಗಿ ಚರ್ಮರೋಗದ ತಪಾಸಣೆಯು ಉಚಿತವಾಗಿ ನಡೆಯುತ್ತಿದೆ. ಕ್ಲಿನಿಕ್‌ನ ವಾರ್ಷಿಕೋತ್ಸವ ಮಾತ್ರವಲ್ಲದೆ ಕುಷ್ಟರೋಗ ದಿನ, ತೊಣ್ಣುರೋಗ ದಿನ, ಸೋರಿಯಾಸಿಸ್ ದಿನಗಳಲ್ಲಿ ಸೇರಿದಂತೆ ವರ್ಷದಲ್ಲಿ ಒಟ್ಟು ನಾಲ್ಕು ಬಾರಿ ಉಚಿತ ತಪಾಸಣಾ ಶಿಬಿರಗಳನ್ನು ನಡೆಸಲಾಗುತ್ತಿದೆ. ಶಿಬಿರದ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಚಿಕಿತ್ಸೆ ಹಾಗೂ ಕಡಿಮೆ ಬೆಲೆಯಲ್ಲಿ ಔಷಧಿಗಳನ್ನು ವಿತರಿಸಲಾಗುತ್ತಿದೆ. ಶಿಬಿರದಲ್ಲಿ ಉತ್ತಮ ಸ್ಪಂದನೆ ದೊರೆಯುತ್ತಿದ್ದು ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಲ್ಯಾಬ್‌ನಲ್ಲಿ ರೂ.1600 ರಷ್ಟು ವೆಚ್ಚದ ರಕ್ತದ ಅಲರ್ಜಿ ಪರೀಕ್ಷೆಯನ್ನು ಸುಮಾರು 40 ಮಂದಿಗೆ ಉಚಿತವಾಗಿ ಮಾಡಿಕೊಟ್ಟಿದ್ದೇವೆ. ಇನ್ನಷ್ಟು ಜನರು ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಡಾ.ಸಚಿನ್ ಶೆಟ್ಟಿಯವರು ತಿಳಿಸಿದ್ದಾರೆ. ಶಿಬಿರದಲ್ಲಿ 50 ಮಂದಿ ಭಾಗವಹಿಸಿ ಪ್ರಯೋಜನ ಪಡೆದರು.