ವಿದ್ಯಾರ್ಥಿಗಳ ಕೌಶಲ್ಯಗಳಿಗೆ ಉನ್ನತ ಶಿಕ್ಷಣ, ಉದ್ಯೋಗ ರಂಗದಲ್ಲಿ ಹೆಚ್ಚಿನ ಪ್ರಾಧಾನ್ಯತೆ-ಡಾ. ಪೀಟರ್ ವಿಲ್ಸನ್ ಪ್ರಭಾಕರ್
ಪುತ್ತೂರು: ಪಠ್ಯಕ್ರಮದ ಮಾರ್ಕ್ಸ್ ಕಾರ್ಡ್ ಗಳಿಗಿಂತಲೂ ವಿದ್ಯಾರ್ಥಿಗಳಲ್ಲಿನ ಕೌಶಲ್ಯಗಳಿಗೆ ಉನ್ನತ ಶಿಕ್ಷಣ ರಂಗದಲ್ಲಿ ಮತ್ತು ಉದ್ಯೋಗ ರಂಗದಲ್ಲಿ ಹೆಚ್ಚು ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ ಎಂದು ಕಾಲೇಜಿನ ಸಂಚಾಲಕರು ಮತ್ತು ಮಾತೃ ಸಂಸ್ಥೆಯ ಕಾರ್ಯದರ್ಶಿಗಳೂ ಆಗಿರುವ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ರವರು ಹೇಳಿದರು.
ಸುದಾನ ಸಮೂಹ ಶಿಕ್ಷಣ ಸಂಸ್ಥೆಗಳ ಸುದಾನ ಪದವಿ ಪೂರ್ವ ಕಾಲೇಜಿನಲ್ಲಿ 2024-25ರ ಸಾಲಿನ ಶೈಕ್ಷಣಿಕ ವರ್ಷದ ಸರ್ಟಿಫಿಕೇಟ್ ಕೋರ್ಸ್ ಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಶೈಕ್ಷಣಿಕ ವರ್ಷ ಸುದಾನ ಸೆಂಟರ್ ಫಾರ್ ರೂರಲ್ ಡೆವಲಪ್ಮೆಂಟ್ ಅಂಡ್ ಎಜ್ಯುಕೇಶನ್ ಮಾತೃ ಸಂಸ್ಥೆಯು ಸುದಾನ ಪದವಿ ಪೂರ್ವ ಕಾಲೇಜನ್ನು ಆರಂಭಿಸಿ, ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣವನ್ನು ಪಠ್ಯಕ್ರಮದಲ್ಲಿ ತಿಳಿಸಿದಂತೆ ನೀಡುವುದಲ್ಲದೆ ವೈಯಕ್ತಿಕ ಹಾಗೂ ವೃತ್ತಿಪರ ಬೆಳವಣಿಗೆಯತ್ತ ಪ್ರೇರೇಪಿಸಲು ಸರ್ಟಿಫಿಕೇಟ್ ಕೋರ್ಸ್ ಗಳನ್ನು ನೀಡಲು ಮುಂದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸುದಾನ ಸೆಂಟರ್ ಫಾರ್ ರೂರಲ್ ಡೆವಲಪ್ಮೆಂಟ್ ಅಂಡ್ ಎಜುಕೇಶನ್ ಮಾತೃಸಂಸ್ಥೆಯ ಅಧ್ಯಕ್ಷರಾದ ರೆ|ವಿಜಯ ಹಾರ್ವಿನ್ ಇವರು, ಸಂಸ್ಥೆಯನ್ನು ವಿಶಿಷ್ಟ ಮತ್ತು ವಿಭಿನ್ನವಾಗಿ ಬೆಳೆಸಲು ಇಚ್ಛೆಯಿದ್ದು ನಾವೆಲ್ಲರೂ ಆ ಕಡೆಗೆ ಶ್ರಮಿಸಬೇಕು, ಸಂಸ್ಥೆಯು ಹೊಸ ರೀತಿಯ ಕೌಶಲ್ಯ ಅಭಿವೃದ್ಧಿಯನ್ನು ಈ ವರ್ಷದಿಂದಲೇ ವಿದ್ಯಾರ್ಥಿಗಳ ಏಳಿಗೆಯನ್ನು ಗುರಿಯಾಗಿಟ್ಟುಕೊಂಡು ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸರ್ಟಿಫಿಕೇಟ್ ಕೋರ್ಸ್ ಸಂಯೋಜಕರಾದ ಮುಕುಂದ ಕೃಷ್ಣರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುದಾನ ಪಿಯು ಕಾಲೇಜಿನ ಪ್ರಾಂಶುಪಾಲರಾದ ಸುಪ್ರೀತ್ ಕೆ.ಸಿ ಶುಭಹಾರೈಸಿದರು. ಗಣಕ ವಿಜ್ಞಾನ ಉಪನ್ಯಾಸಕರಾದ ಶ್ರೀಮತಿ ಧನ್ಯಶ್ರೀ ಧನ್ಯವಾದ ಸಮರ್ಪಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿಯಾದ ಕ್ಯಾರಲ್ ಫೆರ್ನಾಂಡಿಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನ ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾರ್ಥಿಗಳು, ಕಾಲೇಜಿನ ಉಪನ್ಯಾಸಕ ಮತ್ತು ಉಪನ್ಯಾಸಕೇತರ ಬಂಧುಗಳು, ಸುದಾನ ಸೆಂಟರ್ ಫಾರ್ ರುರಲ್ ದೆವಲಪ್ಮೆಂಟ್ ಅಂಡ್ ಎಜುಕೇಶನ್ ಇದರ ಖಜಾಂಚಿ ಆಸ್ಕರ್ ಆನಂದ್ ಅವರು ಉಪಸ್ಥಿತರಿದ್ದರು.
6 ಕೋರ್ಸ್ಗಳು…
ಎಂ.ಎಸ್ ಎಕ್ಸೆಲ್, ಎಚ್.ಟಿ.ಎಂ. ಎಲ್, ಜೀವನ ಕೌಶಲ್ಯಗಳು, ಪರ್ಸನಲ್ ಫೈನಾನ್ಸ್ , ಇಮೇಲ್ ಎಟಿಕೇಟ್, ಟ್ಯಾಲಿ ಜಿ.ಎಸ್.ಟಿ ಈ ಆರು ಸರ್ಟಿಫಿಕೇಟ್ ಕೋರ್ಸ್ ಗಳನ್ನು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಕಾಲೇಜು ನೀಡಲು ಮುಂದಾಗಿದೆ.