





ಪುತ್ತೂರು: ಬೂಡಿಯಾರು ಗುಲಾಬಿ ಮೋಹನ್ದಾಸ್ ಚೌಟರವರ ಉತ್ತರಕ್ರಿಯೆ ಹಾಗೂ ಶ್ರದ್ಧಾಂಜಲಿ ಸಲ್ಲಿಸುವ ನುಡಿನಮನ ಕಾರ್ಯಕ್ರಮ ನ.9ರಂದು ಫರಂಗಿಪೇಟೆ ಅರ್ಕುಳ ವೈಭವ ಹಾಲ್ನಲ್ಲಿ ಜರಗಿತು.



ಉದ್ಯಮಿ ದೇವದಾಸ್ ಶೆಟ್ಟಿ ಕೊಡ್ಮಾಣರವರು ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ ಬೂಡಿಯಾರು ಗುಲಾಬಿ ಮೋಹನ್ದಾಸ್ ಚೌಟರವರು ಬೆಳಿಯೂರು ಬೀಡು ದಿ.ಪದ್ಮಾವತಿ ಎಸ್ ರೈ ಮತ್ತು ಮುಂಡಾಳಗುತ್ತು ದಿ.ಸಂಕಪ್ಪ ರೈಯವರ ಪುತ್ರಿಯಾಗಿ, ಮೋಹನ್ದಾಸ್ ಚೌಟರವರ ಪತ್ನಿಯಾಗಿ ತನ್ನ ಮನೆ ಮತ್ತು ಬಂಧುಗಳೊಂದಿಗೆ ಪ್ರೀತಿ-ವಾತ್ಯಲದಿಂದ ಬದುಕನ್ನು ಸಾಗಿಸಿದ್ದಾರೆ, ಒರ್ವ ಮಮತೆಯ ಮಾತೆಯಾಗಿ, ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದ ಗುಲಾಬಿ ಮೋಹನ್ದಾಸ್ ಚೌಟರವರ ಆದರ್ಶಗುಣ ನಮಗೆ ಪ್ರೇರಣೆಯಾಗಬೇಕು, ಅವರ ಹಾಕಿಕೊಟ್ಟ ಒಳ್ಳೆಯ ಜೀವನಕ್ರಮವನ್ನು ಅವರು ಮಕ್ಕಳು ಪಾಲಿಸಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.






ಗುಲಾಬಿ ಮೋಹನ್ದಾಸ್ ಚೌಟರವರ ಮಕ್ಕಳಾದ ಬೂಡಿಯಾರು ನಾರಾಯಣ ಚೌಟ, ಬೂಡಿಯಾರು ಅಮಿತ ಎ.ಶೆಟ್ಟಿ, ಬೂಡಿಯಾರು ಪ್ರಮೀಳಾ ಜಿ.ರೈ, ಸೊಸೆ ಸುಪ್ರೀತ ಎನ್ ಚೌಟ, ಅಳಿಯಂದಿರಾದ ಡಾ. ಅರುಣ್ಕುಮಾರ್ ಶೆಟ್ಟಿ, ಎ.ಗಂಗಾಧರ್ ರೈ, ಸಹೋದರರಾದ ಬೂಡಿಯಾರು ಡಾ. ಸಂಜೀವ ರೈ, ಬೂಡಿಯಾರು ರಾಮಕೃಷ್ಣ ರೈ, ಬೂಡಿಯಾರು ರಾಧಾಕೃಷ್ಣ ರೈ, ಬೂಡಿಯಾರು ಗಣೇಶ್ ರೈ, ಬೂಡಿಯಾರ್ ಡಾ. ಸಚ್ಚಿದಾನಂದ ರೈ, ಸಹೋದರಿ ಸುಗಂಧಿ ಎಸ್ ಮೇಲಾಂಟ ಹಾಗೂ ಮೊಮ್ಮಕ್ಕಳು, ಮರಿಮಕ್ಕಳು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕರುಗಳಾದ ಶಕುಂತಳಾ ಟಿ.ಶೆಟ್ಟಿ, ಸಂಜೀವ ಮಠಂದೂರು, ಅದಾನಿ ಸಂಸ್ಥೆಯ ಉಪಾಧ್ಯಕ್ಷ ಕಿಶೋರ್ ಅಳ್ವ, ಜಿ.ಪಂ, ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಸಿ.ಎ. ಆಶೋಕ್ ಶೆಟ್ಟಿ, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಸೇರಿದಂತೆ ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಮುಂದಾಳುಗಳು, ಉದ್ಯಮಿಗಳು ಹಾಗೂ ಹಿತೈಷಿಗಳು ಭಾಗವಹಿಸಿ, ಶ್ರದ್ಧಾಂಜಲಿ ಸಲ್ಲಿಸಿದರು.






