ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ :ಪುಣಚ ಶ್ರೀದೇವಿ ಪ್ರಾ. ಶಾಲೆಗೆ ಸಮಗ್ರ ಪ್ರಶಸ್ತಿ

0

ಪುಣಚ: ದ.ಕ.ಜಿ.ಪಂ ಹಿ.ಪ್ರಾ.ಶಾಲೆ ದಂಬೆಯಲ್ಲಿ ನಡೆದ ಅಜ್ಜಿನಡ್ಕ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಿರಿಯ ಹಾಗೂ ಹಿರಿಯ ವಿಭಾಗದಲ್ಲಿ ಹೆಚ್ಚು ಅಂಕಗಳನ್ನು ಪಡೆದು ಪುಣಚ ದೇವಿನಗರ ಶ್ರೀದೇವಿ ಪ್ರಾಥಮಿಕ ಶಾಲೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.


ಕಿರಿಯ ವಿಭಾಗದಲ್ಲಿ ಕನ್ನಡ ಕಂಠಪಾಠ ಅಭಿನವ ಕೃಷ್ಣ.ಜಿ ಪ್ರಥಮ, ಧಾರ್ಮಿಕ ಪಠಣ ಸಂಸ್ಕೃತ ಪ್ರಣಮ್ಯ ಜೆ.ಪ್ರಥಮ, ದೇಶಭಕ್ತಿ ಗೀತೆ ಸುಧನ್ವ ಎ.ಎಸ್ ಪ್ರಥಮ, ಕ್ಲೇ ಮಾಡಲಿಂಗ್ ಅಮೃತ್ ವಿ ಕೆ ಪ್ರಥಮ, ಚಿತ್ರಕಲೆ ವಚನ್ ಕೆ ಪ್ರಥಮ, ಅಭಿನಯ ಗೀತೆ ಆದ್ಯನಾಯಕ್ ಕೆ ದ್ವಿತೀಯ, ಕಥೆ ಹೇಳುವುದು ನಿದ್ವಿಕಾ ದ್ವಿತೀಯ, ಇಂಗ್ಲೀಷ್ ಕಂಠಪಾಠ ಮೋಕ್ಷಿತ ತೃತೀಯ, ಧಾರ್ಮಿಕ ಪಠಣ ಅರೇಬಿಕ್ ಮುಹಮ್ಮದ್ ಹಾಫಿಲ್ ತೃತೀಯ, ಭಕ್ತಿಗೀತೆ ಹವಿಕ್ಷ ತೃತೀಯ, ಹಿರಿಯ ವಿಭಾಗದಲ್ಲಿ ಆಶು ಭಾಷಣ ಪ್ರೇಕ್ಷಾ ಪ್ರಥಮ, ಕವನವಾಚನ ಹರ್ಷ ಪ್ರಥಮ, ಮಿಮಿಕ್ರಿ ಸಂಹಿತಾ.ಎ ಪ್ರಥಮ, ಅಭಿನಯ ಗೀತೆ ಮಾನ್ವಿ ಪ್ರಥಮ, ಧಾರ್ಮಿಕ ಪಠಣ ಸಂಸ್ಕೃತ ಸಂಹಿತಾ.ಎ ಪ್ರಥಮ, ಚಿತ್ರಕಲೆ ಕ್ಲೇವಿಷಾ ಫೆರಾವೋ ಪ್ರಥಮ, ಪ್ರಬಂಧ ರಚನೆ ಹರ್ಷ ಪ್ರಥಮ, ಕನ್ನಡ ಕಂಠಪಾಠ ಮಾನ್ವಿ. ಎನ್ ದ್ವಿತೀಯ, ದೇಶಭಕ್ತಿ ಗೀತೆ ಲಾವಣ್ಯ ದ್ವಿತೀಯ, ಭಕ್ತಿಗೀತೆ ಲಾವಣ್ಯ ದ್ವಿತೀಯ, ಕಥೆ ಹೇಳುವುದು ಪ್ರೇಕ್ಷಾ ದ್ವಿತೀಯ, ಕ್ಲೇ ಮಾಡಲಿಂಗ್ ರಂಜಿತ್ ಪ್ರಭು ದ್ವಿತೀಯ, ಇಂಗ್ಲೀಷ್ ಕಂಠಪಾಠ ಶ್ರುತಿ ತೃತೀಯ, ಹಿಂದಿ ಕಂಠಪಾಠ ಎ.ರಂಜಿತ್ ಪ್ರಭು ತೃತೀಯ, ಧಾರ್ಮಿಕ ಪಠಣ ಅರೇಬಿಕ್ ಮುಹಮ್ಮದ್ ಅರಫಾ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಕ್ಲಸ್ಟರ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ 12 ಮಂದಿ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

LEAVE A REPLY

Please enter your comment!
Please enter your name here