ಪುತ್ತೂರು: ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯು ಕೆ .ಪಿ .ಎಂ.ಇ . ನೋಂದಾಯಿತ ಐಎಸ್‌ಒ ಪ್ರಮಾಣಿತ 9001:2015 ಆಯುರ್ವೇದ ಆಸ್ಪತ್ರೆಯಾಗಿದ್ದು ,ಆಯುರ್ವೇದ ಪಂಚಕರ್ಮ , ಯೋಗ , ಧ್ಯಾನ , ಸಂಗೀತ, ಫಿಸಿಯೋಥೆರಪಿಗಳನ್ನೂ ಪೂರಕವಾಗಿ ಇಲ್ಲಿ ಜೋಡಿಸಲಾಗುತ್ತಿದ್ದು ಸಾರ್ವಜನಿಕರಿಗೆ ವಿವಿಧ ಆರೋಗ್ಯ ಪೂರ್ಣ ಸೇವೆ ನೀಡಲಾಗುತ್ತಿದೆ.
ಸೋರಿಯಾಸಿಸ್ ಇತ್ಯಾದಿ ಚರ್ಮರೋಗಗಳಿಗೆ , ಪಾರ್ಕಿನ್ಸನ್ಸ್ ಇತ್ಯಾದಿ ನರಮಂಡಲದ ಕಾಯಿಲೆಗಳಿಗೆ , ಸಂಧಿವಾತ , ಅಮವಾತ , ರಕ್ತವಾತಗಳಿಂದ ಬರುವ ನೋವು , ನಿದ್ರಾಹೀನತೆ , ಮಹಿಳೆಯ ಮುಟ್ಟಿನ ಕಾಯಿಲೆಗಳು , ತಲೆನೋವು , ಕುತ್ತಿಗೆ ನೋವು , ಖಿನ್ನತೆ , ಅಲರ್ಜಿ , ನೆಗಡಿ , ಸೈನಸೈಟಿಸ್ , ಪಾರ್ಶ್ವವಾಯು , ರಕ್ತದೊತ್ತಡ , ಸೊಂಟನೋವು , ದಮ್ಮು , ಅಜೀರ್ಣ , ಮಲಬದ್ಧತೆ , ಅಸಿಡಿಟಿ , ಮೂಲವ್ಯಾಧಿ , ಅತಿಸಾರ , ಪಿ .ಸಿ .ಒ .ಡಿ , ವೆರಿಕೋಸ್ ವೀನ್ , ಕರುಳಿನ ಹಾಗೂ ಜಠರದ ಹುಣ್ಣು ಇತ್ಯಾದಿಗಳಿಗೆ ಯಶಸ್ವೀ ಚಿಕಿತ್ಸೆ ಲಭ್ಯವಿದೆ . ವಮನ , ವಿರೇಚನ , ಬಸ್ತಿ , ನಸ್ಯ , ಶಿರೋಧಾರಾ , ಪತ್ರಪಿಂಡಸ್ವೇದ , ಷಷ್ಠಿಕಶಾಲಿ ಪಿಂಡಸ್ವೇದ , ಕಟಿಬಸ್ತಿ , ತರ್ಪಣ , ನೇತ್ರಸೇಕ , ಅಂಜನ ಇತ್ಯಾದಿ ವಿಶೇಷ ಚಿಕಿತ್ಸೆಗಳು ಇಲ್ಲಿನ ವಿಶಿಷ್ಟತೆ.
ಕಣ್ಣಿನ ರೆಟಿನಾ ತೊಂದರೆ , ದೃಷ್ಟಿದೋಷ , ಡ್ರೈ ಐ ಸಿನ್ಡ್ರೋಮ್ ಇತ್ಯಾದಿಗಳಿಗೆ ಆಯುರ್ವೇದ ರೀತಿಯಲ್ಲಿ ಶಸ್ತ್ರ ಚಿಕಿತ್ಸೆ ರಹಿತ ವಿಧಾನಗಳ ಮೂಲಕ ಚಿಕಿತ್ಸೆ ನೀಡುವ ಪುತ್ತೂರಿನ ಏಕೈಕ ಆಯುರ್ವೇದ ಆಸ್ಪತ್ರೆ . ಅತ್ಯಂತ ಹೆಚ್ಚು ಧನಾತ್ಮಕ ಗೂಗಲ್ ರಿವ್ಯೂ ಪಡೆದ ಪುತ್ತೂರಿನ ಆಯುರ್ವೇದ ಆಸ್ಪತ್ರೆ ಎಂಬ ಹೆಗ್ಗಳಿಕೆ ಹೊಂದಿದೆ . ಇಲ್ಲಿನ ಕ್ಯಾನ್ಸರ್ ಕಾಯಿಲೆಗೆ ಆಯುರ್ವೇದ ಪಂಚಗವ್ಯ ಚಿಕಿತ್ಸಾ ವಿಭಾಗವು ಕ್ಯಾನ್ಸರ್ ರೋಗಿಗಳಿಗೆ ಆಶಾಕಿರಣವಾಗಿದೆ . ಮಕ್ಕಳ ತೊಂದರೆಗಳಿಗೆ ಇಲ್ಲಿ ಇವರೇ ತಯಾರಿಸುವ ಸ್ವರ್ಣಪ್ರಾಶನ ಔಷಧವು ಹೆತ್ತವರ ಚಿಂತೆಯನ್ನು ದೂರವಾಗಿಸಿದೆ . ಇದನ್ನು ಮಕ್ಕಳಿಗೆ ಮನೆಯಲ್ಲೇ ಮಕ್ಕಳಿಗೆ ಹೆತ್ತವರು ಕೊಡಬಹುದಾಗಿದೆ.
ಆಸ್ಪತ್ರೆ ತನ್ನದೇ ವೆಬ್ಸೈಟ್ www.prasadini.com ಹೊಂದಿದೆ. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಆಯುರ್ವೇದ ತಜ್ಞ ವೈದ್ಯ ಡಾ . ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಇವರು . ಯಾವುದೇ ಹೆಲ್ತ್ ಇನ್ಸೂರೆನ್ಸ್ (ಆರೋಗ್ಯ ವಿಮೆ ) ಹೊಂದಿರುವವರು ಒಳರೋಗಿಯಾಗಿ ದಾಖಲಾಗಿ ಆಯುರ್ವೇದ ಚಿಕಿತ್ಸೆಯನ್ನು , ಒಳಪಟ್ಟ ಯಾವುದೇ ಕಾಯಿಲೆಗಳಿಗೆ ಇಲ್ಲಿ ಪಡೆದುಕೊಂಡಲ್ಲಿ, ರಿ ಇಂಬರ್ಸಮೆಂಟ್ ಮೂಲಕ ತಮ್ಮ ಆಸ್ಪತ್ರೆ ವೆಚ್ಚವನ್ನು ಪಡೆದುಕೊಳ್ಳುವ ಸೌಲಭ್ಯವಿದೆ. ಆಸ್ಪತ್ರೆಯ ಸಂಪರ್ಕಕ್ಕೆ ಮೊಬೈಲ್ 9740545979 ಗೆ ಕರೆಮಾಡಿ .
ಕಾಣಿಯೂರು ಸುಬ್ರಮಣ್ಯ ರಾಜ್ಯ ಹೆದ್ದಾರಿಯಲ್ಲಿ ಪುತ್ತೂರಿನಿಂದ 5 ಕಿಮೀ ದೂರದ ಶಾಂತ ಪರಿಸರದಲ್ಲಿ ನರಿಮೊಗರು ಗ್ರಾಮಪಂಚಾಯತ್ ಸಮೀಪ ಕಾರ್ಯಾಚರಿಸುತ್ತಿರುವ ಈ ಆಸ್ಪತ್ರೆ ದೂರದ ಊರುಗಳಿಂದ ಬರುವ ರೋಗಿಗಳಿಂದಲೂ ಪ್ರಶಂಸೆಗೆ ಪಾತ್ರವಾಗಿದೆ ಎಂಬುದಕ್ಕೆ ಒಬ್ಬರು ಹಂಚಿಕೊಂಡ ಅನುಭವವೇ ಸಾಕ್ಷಿ .
” ನನ್ನ ತಂದೆಗೆ ಆರಂಭದಲ್ಲಿ dementia ಇರುವುದು ಪತ್ತೆಯಾಯಿತು, ಅದು ನಂತರ ಪಾರ್ಕಿನ್ಸನ್ ಕಾಯಿಲೆಗೆ ಏರಿತು. ನಾವು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರನ್ನು ಸಂಪರ್ಕಿಸಲು ನಿರ್ಧರಿಸಿದೆವು ಮತ್ತು ಅವರ ಪರಿಣತಿ ಮತ್ತು ಕರುಣೆಯಿಂದ ನಾವು ಪ್ರಭಾವಿತರಾಗಿದ್ದೇವೆ. ಅವರು ಚಿಕಿತ್ಸಾ ವಿಧಾನಗಳನ್ನು ಸಂಪೂರ್ಣವಾಗಿ ವಿವರಿಸಲು ಮತ್ತು ನಮ್ಮ ಎಲ್ಲಾ ಪ್ರಶ್ನೆಗಳನ್ನು ಪರಿಹರಿಸಲು ಸಮಯವನ್ನು ತೆಗೆದುಕೊಂಡರು, ಇದು ನಮ್ಮ ತಂದೆಯನ್ನು ಚಿಕಿತ್ಸೆಗೆ ಸೇರಿಸಿಕೊಳ್ಳುವ ವಿಶ್ವಾಸವನ್ನು ನೀಡಿತು. ನಾನು ಆಗಸ್ಟ್ 5, 2024 ರಂದು ನನ್ನ ತಂದೆಯನ್ನು ಸೇರಿಸಿದೆ. ಪ್ರವೇಶದ ಸಮಯದಲ್ಲಿ, ಅವರು ಇನ್ನೊಬ್ಬರ ಬೆಂಬಲವಿಲ್ಲದೆ ನಡೆಯಲು ಸಾಧ್ಯವಿರಲಿಲ್ಲ . ವೈದ್ಯರು ರೋಗಿಗೆ ವೈಯಕ್ತಿಕ ಗಮನದ ಜೊತೆಗೆ ವ್ಯವಸ್ಥಿತ ಆಯುರ್ವೇದ ಚಿಕಿತ್ಸೆಯನ್ನು ನೀಡಿದರು. ಚಿಕಿತ್ಸೆಯು ಫಿಸಿಯೋಥೆರಪಿ ಚಿಕಿತ್ಸೆಯನ್ನೂ ಒಳಗೊಂಡಿತ್ತು. ಈ ಸವಾಲಿನ ಸಮಯದಲ್ಲಿ, ವೈದ್ಯರು ಕುಟುಂಬದ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಮೂಲಕ ಭಾವನಾತ್ಮಕವಾಗಿ ನಮಗೆ ಬೆಂಬಲ ನೀಡಿದರು. 26 ದಿನಗಳ ಚಿಕಿತ್ಸೆಯ ನಂತರ, ನನ್ನ ತಂದೆ ಈಗ ಬೆಂಬಲವಿಲ್ಲದೆ ನಡೆಯಲು ಸಮರ್ಥರಾಗಿದ್ದಾರೆ ಮತ್ತು ಅವರ ಅರಿವಿನಲ್ಲೂ ಸುಧಾರಣೆ ಕಂಡುಬಂದಿದೆ. ಈ ಕ್ಷೇತ್ರದಲ್ಲಿ ವೈದ್ಯರ ಪರಿಣತಿಯು ಸ್ಪಷ್ಟವಾಗಿದೆ ಮತ್ತು ನಮ್ಮ ಕುಟುಂಬವು ಚಿಕಿತ್ಸೆಯ ಗುಣಮಟ್ಟವನ್ನು ಮೆಚ್ಚುತ್ತದೆ.
ಮನೋಜ್ ಕುಮಾರ್ , ಬೆಂಗಳೂರು