ಪುತ್ತೂರು: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರು ಇದರ ವತಿಯಿಂದ ಸೆ.20ರಂದು ಹಾರಾಡಿ ಶಾಲೆಯಲ್ಲಿ ಸಂಸ್ಕೃತ ಅಧ್ಯಾಪಕ ಸುಬ್ರಹ್ಮಣ್ಯ ಹೊಳ್ಳ ಅವರ ನೇತೃತ್ವದಲ್ಲಿ ಅಸ್ಮಾಕಮ್ ಸಂಸ್ಕೃತಮ್ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳಿಂದ ಸಂಸ್ಕೃತಕ್ಕೆ ಸಂಬಂಧಿಸಿ ವಿವಿಧ ಕಾರ್ಯಕ್ರಮ ಮತ್ತು ಸಂಸ್ಕೃತ ಭಾಷೆಯ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ವಿವಿಧ ಭಿತ್ತಿಪತ್ರಗಳೊಂದಿಗೆ ಮತ್ತು ಘೋಷಣೆಯೊಂದಿಗೆ ಪಥ ಸಂಚಲನ ನಡೆಯಿತು.
ಶಾಲಾ ಮುಖ್ಯಗುರು ಕೆ.ಕೆ.ಮಾಸ್ತರ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಸಂಸ್ಕೃತ ತರಗತಿ ವಿದ್ಯಾರ್ಥಿಗಳಿಂದ ಭಗವದ್ಗೀತೆಯ ಶ್ಲೋಕಗಳ ಪಠಣ ಹಾಗು ವಿವಿಧ ಸಂಸ್ಕೃತ ಕಾರ್ಯಕ್ರಮ ನಡೆಯಿತು. ಹಿರಿಯ ಶಿಕ್ಷಕಿ ಗಂಗಾವತಿ ಸಹಿತ ಶಿಕ್ಷಕರು ಭಾಗವಹಿಸಿದರು. ಸಂಸ್ಕೃತ ವಿದ್ಯಾರ್ಥಿನಿ ಸ್ತುತಿ ವಂದಿಸಿದರು.