ಮಹಾನ್ ಸಾಹಿತಿಗಳ ಹೆಸರಿನಲ್ಲಿ ವಿದ್ಯಾರ್ಥಿಗಳ ತಂಡ ರಚನೆ- ಕ್ರೀಡಾ ಸಮವಸ್ತ್ರ ವಿತರಿಸಿದ ಎ ವಿ ಜಿ ಆಂಗ್ಲ ಮಾಧ್ಯಮ ಶಾಲೆ 

0

ಪುತ್ತೂರು: ದೇಶ‌ ಕಂಡ ಮಹಾನ್ ಸಾಹಿತಿಗಳ ಹೆಸರಿನಲ್ಲಿ ವಿದ್ಯಾರ್ಥಿಗಳ ತಂಡ ರಚಿಸಿ ಅವರಲ್ಲಿ ಸಾಹಿತ್ಯದ ಒಲವು ಹೆಚ್ಚಿಸುವ ಮತ್ತು ಕ್ರೀಡಾ ಸಮವಸ್ರ್ತ ವಿತರಿಸಿ ಕ್ರೀಡೆಯ ಆಸಕ್ತಿಯನ್ನೂ ಹೆಚ್ಚಿಸುವ ವಿಶೇಷ ಕಾರ್ಯಕ್ರಮ ಇತ್ತೀಚೆಗೆ ಬನ್ನೂರು ಕೃಷ್ಣ ನಗರದಲ್ಲಿರುವ ಎವಿಜಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ನಡೆಯಿತು.

ಶಾಲಾ ಅಧ್ಯಕ್ಷ  ವೆಂಕಟರಮಣ ಗೌಡ ಕಳುವಾಜೆ ಅವರ ಅಧ್ಯಕ್ಷತೆಯಲ್ಲಿ ಸಮವಸ್ತ್ರ ವಿತರಿಸಲಾಯಿತು. ಬಳಿಕ ವಿದ್ಯಾರ್ಥಿಗಳನ್ನು ಮಹಾನ್ ಸಾಹಿತಿಗಳಾದ ಪಂಪ,ರನ್ನ, ಕುವೆಂಪು, ಶಿವರಾಮ ಕಾರಂತ ಎಂಬುದಾಗಿ ನಾಲ್ಕು ತಂಡಗಳಾಗಿ ವಿಂಗಡಿಸಲಾಯಿತು. ರನ್ನ (ಅನುಪ್ ರಾಜ್ ಎಚ್) ಪಂಪ (ತನುಷ್ ಕೆ ಎಸ್) ಕುವೆಂಪು (ಶ್ರೇಯಾಂಚ್) ಶಿವರಾಮ ಕಾರಂತ (ಚಾರ್ವಿ) ತಂಡದ ನಾಯಕರನ್ನಾಗಿ ಮಾಡಲಾಯಿತು. ಶಾಲೆಯ ಅಧ್ಯಕ್ಷ ವೆಂಕಟ್ರಮಣ ಕಳುವಾಜೆ ಅವರು ಮಕ್ಕಳಲ್ಲಿ ನಾಯಕತ್ವದ ಗುಣ ಮತ್ತು ಶಿಸ್ತಿನ ಗುಣ ಹೊಂದಿರಬೇಕು ಎಂದು ತಿಳಿಸಿದರು. ಶಾಲೆಯ ಸಂಚಾಲಕ ಎ ವಿ ನಾರಾಯಣ ಮತ್ತು ಶಾಲೆಯ ಉಪಾಧ್ಯಕ್ಷ  ಉಮೇಶ್ ಮಳು ವೇಲು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲೆಯ ಪ್ರಾಂಶುಪಾಲೆ ಸವಿತಾ ಕೆ ಸ್ವಾಗತಿಸಿ, ಶಿಕ್ಷಕಿ ರಾಧಾ ವಂದಿಸಿ, ಶಿಕ್ಷಕಿ ಹರ್ಷಿತ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here