ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ

0

4.04 ಲಕ್ಷ ರೂ. ಲಾಭ: ಶೇ.9 ಡಿವಿಡೆಂಡ್‌


ಉಪ್ಪಿನಂಗಡಿ: ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಉಪ್ಪಿನಂಗಡಿಯು ವರ್ಷಾಂತ್ಯದಲ್ಲಿ 41,44,500.00 ರೂ. ಪಾಲು ಬಂಡವಾಳ ಸಂಗ್ರಹಿಸಿದ್ದು, 8,14,26,876.15 ರೂ. ಠೇವಣಿಯು ವಿವಿಧ ಖಾತೆಗಳಲ್ಲಿ ಜಮೆ ಇರುತ್ತದೆ. ಆರ್ಥಿಕ ವರ್ಷದ ಕೊನೆಗೆ ನಮ್ಮ ಸಹಕಾರಿ ಸಂಘವು ರೂ.33,77,59,845.75 ವ್ಯವಹಾರವನ್ನು ಮಾಡಿದ್ದು 4.04 ಲಕ್ಷ ಲಾಭ ಬಂದಿರುತ್ತದೆ. ಬಂದ ಲಾಭಾಂಶದಲ್ಲಿ ಅರ್ಹ ಸದಸ್ಯರಿಗೆ ಶೇ.9 ಡಿವಿಡೆಂಟ್ ನೀಡಲು ಸಭೆಯ ಅನುಮೋದನೆಯಂತೆ ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ರೋಬರ್ಟ್ ಡಿಸೋಜ ತಿಳಿಸಿದರು.


ಉಪ್ಪಿನಂಗಡಿಯ ದೀನರ ಕನ್ಯಾ ಮಾತೆ ದೇವಾಲಯದ ಮಿನಿ ಹಾಲ್‌ನಲ್ಲಿ ಸೆ.22ರಂದು ನಡೆದ 2023-24ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ವೇದಿಕೆಯಲ್ಲಿ ಸಂಘದ ನಿರ್ದೇಶಕ ಗ್ರೆಗೋರಿ ಲೋಬೊ, ವಿನ್ಸೆಂಟ್ ಮಿನೇಜಸ್, ಸಿಲ್ವೆಸ್ಟರ್ ವೇಗಸ್, ಸೆಬೆಸ್ಟಿಯನ್ ಲೋಬೊ, ಐರಿನ್ ಲೋಬೊ ಉಪಸ್ಥಿತರಿದ್ದರು.
ಉಪ್ಪಿನಂಗಡಿ ಕೇಂದ್ರ ಕಚೇರಿಯ ಗುಮಾಸ್ತೆ ತನುಶ್ರೀ ಹಾಗೂ ಕಡಬ ಶಾಖೆಯ ಪೂಜಾಶ್ರಿ ಬಿ. ಪ್ರಾರ್ಥಿಸಿದರು. ನೆಲ್ಯಾಡಿ ಶಾಖೆಯ ಗುಮಾಸ್ತ ಜೋನ್ಸಿ ಡಿಸೋಜ ಹಿಂದಿನ ಸಭೆಯ ನಡವಳಿಗಳನ್ನು ವಾಚಿಸಿದರು. ಕೇಂದ್ರ ಕಚೇರಿಯ ವಸೂಲಾತಿ ಅಧಿಕಾರಿ ಚಂದ್ರಶೇಖರ್ ಕೆ. 2022-23ನೇ ಸಾಲಿನ ಆಡಳಿತ ಮಂಡಳಿಯ ವರದಿಯನ್ನು ಮಂಡಿಸಿದರು. ಲಾಭ ನಷ್ಟ ಹಾಗೂ ಆಸ್ತಿ ಜವಾಬ್ದಾರಿ ತಖ್ತೆಯನ್ನು ಸಭೆಯಲ್ಲಿ ಕೇಂದ್ರ ಕಚೇರಿಯ ಲೆಕ್ಕಿಗ ಸಂತೋಷ್ ಫ್ರಾನ್ಸಿಸ್ ಪಿಂಟೊ ಮಂಡಿಸಿದರು. 2023 -24 ನೇ ಸಾಲಿನ ಅಂದಾಜು ಮುಂಗಡ ಬಜೆಟನ್ನು ನೆಲ್ಯಾಡಿ ಶಾಖೆಯ ವ್ಯವಸ್ಥಾಪಕ ಶ್ರೇಯಸ್ ಶೆಟ್ಟಿ ಸಭೆಯ ಮುಂದಿಟ್ಟರು. ಸಂಘದ ಸಿಬ್ಬಂದಿಯ ಹೆಸರುಗಳನ್ನು ನಿರ್ದೇಶಕ ಮ್ಯಾಕ್ಸಿ ಲೋಬೊ ವಾಚಿಸಿದರು. ನಿರ್ದೇಶಕ ಹೆನ್ರಿ ಲೋಬೊ ಹೂ ನೀಡಿ ಗೌರವಿಸಿದರು.


ಸಂಘದ ಅಧ್ಯಕ್ಷ ರೋಬರ್ಟ್ ಡಿಸೋಜ ಸ್ವಾಗತಿಸಿದರು. ಉಪಾಧ್ಯಕ್ಷ ಜೆರೋಮ್ ಬ್ರ್ಯಾಗ್ಸ್ ವಂದಿಸಿದರು. ಮುಖ್ಯಕಾರ್ಯನಿರ್ವಹಣಾದಿಕಾರಿ ವಿಲ್ಫ್ರೆಡ್ ವಿನ್ಸೆಂಟ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಪಿಗ್ಮಿ ಸಂಗ್ರಾಹಕ ವಿಕ್ಟರ್ ಪಿಂಟೊ ಹಾಗೂ ಸೋಮನಾಥ ಸಹಕರಿಸಿದರು.

LEAVE A REPLY

Please enter your comment!
Please enter your name here