ಅಜೇಯನಗರದಲ್ಲೊಂದು ಅನಧಿಕೃತ ಸಭಾಂಗಣ !- ಸಾರ್ವಜನಿಕರಿಂದ ಜಿಲ್ಲಾಧಿಕಾರಿಗೆ ದೂರು

0

ಪುತ್ತೂರು: ಇಲ್ಲಿನ ನೆಹರುನಗರ ಅಜೇಯನಗರ ಎಂಬಲ್ಲಿ ಅನಧಿಕೃತವಾಗಿ ಸಭಾಂಗಣವೊಂದು ಕಳೆದ ನಾಲ್ಕು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದು, ಇಲ್ಲಿ ರಾತ್ರಿ ನಡೆಯುವ ಕಾರ್ಯಕ್ರಮಗಳು, ಮೈಕ್ ಹಾಡುಗಳು, ಕುಣಿತಗಳು, ಕರ್ಕಶ ಧ್ವನಿ ಸ್ಥಳೀಯರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ಸುಮಾರು 25 ಮಂದಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವ ವಿಚಾರ ಬೆಳಕಿಗೆ ಬಂದಿದೆ.

ಈ ಭಾಗದಲ್ಲಿ ಅಗಲ ಕಿರಿದಾದ ರಸ್ತೆಯಲ್ಲಿ ಶರವೇಗದಿಂದ ವಾಹನಗಳು ಸಂಚರಿಸುತ್ತಿವೆ. ರಸ್ತೆಯಲ್ಲಾ ವಾಹನ ನಿಲ್ಲಿಸಿ ಇತರ ಸಾರ್ವಜನಿಕರಿಗೆ ತೊಂದರೆ ನೀಡಲಾಗುತ್ತಿದೆ. ರಾತ್ರಿ ಗಂಟೆ 12ರ ತನಕ ಕರ್ಕಶ ಹಾರ್ನ್, ಮೈಕ್ ಸೌಂಡ್ ಸ್ಥಳೀಯರ ನಿದ್ದೆಗೆಡಿಸಿದೆ. ಉಪಯೋಗಿಸಿದ ಪ್ಲಾಸ್ಟಿಕ್ ಬಾಟಲಿಗಳು ಪರಿಸರದಲ್ಲಿ ಎಲ್ಲೆಂದರಲ್ಲಿ ಹರಡಿಕೊಂಡಿದ್ದು, ಕೊಳಚೆ ನೀರು ಸುತ್ತಮುತ್ತಲಿನ ವಾತಾವರಣವನ್ನು ಕೆಡಿಸಿದೆ. ರಾತ್ರಿಯೆಲ್ಲಾ ಪ್ರಕರವಾದ ಬೆಳಕಿನಿಂದಾಗಿ ಸುತ್ತಲಿನ ಜನರಿಗೆ ತೊಂದರೆ ಆಗಿದೆ. ಸಿಗರೇಟ್, ಗಾಂಜಾ ಸೇವನೆ ಮಾಡಿಕೊಂಡು ಹಾಲ್ ಬಳಿಗೆ ಬರುತ್ತಿರುವುದು ಆತಂಕ ಸೃಷ್ಟಿಸಿದೆ ಎಂದು ಆರೋಪಿಸಲಾಗಿದ್ದು, ಸುಮಾರು 25 ಮಂದಿ ಸಹಿ ಹಾಕಿದ ಪತ್ರದಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ.

ಕ್ರಮಕ್ಕೆ ಹಿಂಬರಹವನ್ನೂ ಕೇಳಿದ ದೂರುದಾರರು
ಅನಧಿಕೃತ ಹಾಲ್ ದೂರು ಆರೋಪ ಮಾಡಿರುವ ದೂರುದಾರು ಹಾಲ್‌ನಿಂದ ನಗರಸಭೆಗೆ ಎಷ್ಟು ತೆರಿಗೆ ಬಂದಿದೆ. ಸದ್ರಿ ಹಾಲ್‌ಗೆ ನೀರಿನ ವ್ಯವಸ್ಥೆ ಜಲಸಿರಿಯಿಂದ ಆಗುತ್ತಿದ್ದರೆ ಎಷ್ಟು ಹಣ ಈ ಬಗ್ಗೆ ಸಂದಾಯವಾಗಿದೆ. ವಸತಿ ಪ್ರದೇಶದಲ್ಲಿ ಹಾಲ್ ನಡೆಸಲು ಪರವಾನಿಗೆ ಕೊಟ್ಟವರು ಯಾರು. ಇದೆಲ್ಲ ಸರಕಾರಕ್ಕೆ ಆಗುತ್ತಿರುವ ಹಣಕಾಸಿನ ವಂಚನೆಯಲ್ಲವೇ. ಇದು ನಿಮ್ಮ ಗಮನಕ್ಕೆ ಬಾರದಿರಲು ಕಾರಣವೇನು ಎಂಬುದನ್ನು ಆರೋಪಿಸಿ ಸಹಿ ಮಾಡಿರುವ ನಮಗೆ ಸೂಕ್ತ ಉತ್ತರ ನೀಡುವಂತೆ ಮತ್ತು ಸೂಕ್ತ ಕ್ರಮದ ಹಿಂಬರಹ ನೀಡುವಂತೆ ದೂರುದಾರರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here