’ಏಕಾತ್ಮಾವಾದ’ ಬಿಜೆಪಿಯ ಮಾರ್ಗಸೂಚಿ – ಚಂದ್ರಶೇಖರ್ ರಾವ್ ಬಪ್ಪಳಿಗೆ
ಪುತ್ತೂರು: ಪಂಡಿತ್ ದೀನ್‌ದಯಾಳ್ ಅವರು ’ಏಕಾತ್ಮವಾದ’ ದಲ್ಲಿ ಪ್ರಬಲ ನಂಬಿಕೆಯನ್ನಿರಿಸಿದ್ದರು. ಇದು ಇವತ್ತಿನ ಬಿಜೆಪಿಯ ಮಾರ್ಗಸೂಚಿಯೂ ಹೌದು ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಪ್ರಶಿಕ್ಷಣ ಪ್ರಕೋಷ್ಠದ ಸಂಚಾಲಕ ಚಂದ್ರಶೇಖರ್ ರಾವ್ ಬಪ್ಪಳಿಗೆ ಹೇಳಿದರು.
ಪುತ್ತೂರು ಬಿಜೆಪಿ ಕಛೇರಿಯಲ್ಲಿ ಸೆ.25ರಂದು ಬೆಳಿಗ್ಗೆ ನಡೆದ ಪಂಡಿತ್ ದೀನ್ ಉಪಾಧ್ಯಾಯರ 108 ನೇ ಜನ್ಮದಿನೋತ್ಸವದಲ್ಲಿ ಅವರು ಮಾತನಾಡಿದರು.
ವ್ಯಕ್ತಿ ಮತ್ತು ಸಮಾಜ ಒಂದಕ್ಕೊಂದು ಪೂರಕವಾಗಿ ಇರುವಂತಹದ್ದು, ವ್ಯಕ್ತಿಗಳು ಸೇರಿದಾಗ ಸಮೂಹ, ಸಮೂಹ ಸಮಾಜವಾಗುತ್ತದೆ. ಸಮಾಜಗಳ ಸಮೂಹ ದೇಶ, ದೇಶಗಳ ಸಮೂಹ ವಿಶ್ವ ಆಗುತ್ತದೆ ಎಂಬ ಪರಿಕಲ್ಪಣೆಯೊಂದಿಗೆ ದೀನ್ ದಯಾಳ್ ಉಪಾಧ್ಯಾಯರು ಏಕಾತ್ಮ ಮಾನವತವಾದದ ಮಾರ್ಗಸೂಚಿ ನೀಡಿದರು. ಅವರು ಕೇವಲ ವ್ಯಕ್ತಿಯಾಗಿರದೇ ಪ್ರತಿಯೊಂದು ರಂಗದಲ್ಲೂ ಅತ್ಯದ್ಭುತ ಪ್ರತಿಭೆಯನ್ನು ಹೊಂದಿದ್ದರು ಎಂದರು.
ಸಭೆಯಲ್ಲಿ ಹಿರಿಯರಾದ ಎಸ್ ಅಪ್ಪಯ್ಯ ಮಣಿಯಾಣಿ , ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ , ಗೋಪಾಲಕೃಷ್ಣ ಹೇರಳೆ , ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ರಾಜ್ಯ ಹಿಂದುಳಿದ ಮೋರ್ಚಾದ ಕಾರ್ಯದರ್ಶಿ ಆರ್.ಸಿ ನಾರಾಯಣ, ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆಯ ಅಧ್ಯಕ್ಷೆ ಲೀಲಾವತಿ ಅಣ್ಣುನಾಯ್ಕ, ಪ್ರಧಾನ ಕಾರ್ಯದರ್ಶಿಗಳಾದ ನಾಗೇಶ್ ಪ್ರಭು, ಅನಿಲ್ ತೆಂಕಿಲ , ಉಮೇಶ್ ಕೋಡಿಬೈಲು , ಎರಡು ಮಂಡಲಗಳ ನಿಕಟಪೂರ್ವ ಅಧ್ಯಕ್ಷರುಗಳಾದ ಸಾಜ ರಾಧಾಕೃಷ್ಣ ಆಳ್ವ , ಪಿ.ಜಿ ಜಗನ್ನಿವಾಸ ರಾವ್ , ಮುರಳಿಕೃಷ್ಣ ಹಸಂತಡ್ಕ , ಪಕ್ಷದ ಜಿಲ್ಲಾ ಮಟ್ಟದ ಪ್ರಮುಖರು , ನಗರ ಹಾಗೂ ಗ್ರಾಮಾಂತರ ಮಂಡಲದ ಪ್ರಧಾನ , ಮಂಡಲ ಮಟ್ಟದ ಪ್ರಮುಖರು , ನಗರ ಹಾಗೂ ಗ್ರಾಮಾಂತರ ಮಂಡಲಗಳ ನಿಕಟಪೂರ್ವ ಪದಾಧಿಕಾರಿಗಳು , ಮಹಾಶಕ್ತಿಕೇಂದ್ರಗಳ ಪ್ರಮುಖರು , ಶಕ್ತಿಕೇಂದ್ರಗಳ ಪ್ರಮುಖರು ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಬೆಳಿಗ್ಗೆ ಬಿಜೆಪಿ ಕಚೇರಿಯಲ್ಲಿ ಅರ್ಚಕ ಉದಯ ಭಟ್ ಅವರ ನೇತೃತ್ವದಲ್ಲಿ ಗಣಪತಿ ಹೋಮ ನಡೆಯಿತು.