ಸೊರಕೆ: ಕಟ್ಟತ್ತಡ್ಕದಲ್ಲಿ ದ್ವಿಚಕ್ರ ವಾಹನ ಪಲ್ಟಿ-ಸವಾರನಿಗೆ ಗಾಯ

0

ಪುತ್ತೂರು: ದ್ವಿಚಕ್ರ ವಾಹನ ಪಲ್ಟಿಯಾಗಿ ಸವಾರ ಗಾಯಗೊಂಡಿರುವ ಘಟನೆ ಸರ್ವೆ ಗ್ರಾಮದ ಸೊರಕೆ ಸಮೀಪದ ಕಟ್ಟತ್ತಡ್ಕ ಎಂಬಲ್ಲಿ ಸೆ.26ರಂದು ನಡೆದಿದೆ.


ಕಡಬದ ಶಬೀಬ್ ಎಂಬವರು ಚಲಾಯಿಸುತ್ತಿದ್ದ ಮ್ಯಾಸ್ಟ್ರೋ ದ್ವಿಚಕ್ರ ವಾಹನ ಕಟ್ಟತ್ತಡ್ಕ ತಿರುವಿನಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಆಪೆ ರಿಕ್ಷಾಗೆ ಸೈಡ್ ಕೊಡುವ ವೇಳೆ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ದ್ವಿಚಕ್ರ ವಾಹನ ಸವಾರ ಶಬೀಬ್ ಕಡಬ ಅವರ ಮುಖ ಹಾಗೂ ಕಾಲಿಗೆ ಗಾಯವಾಗಿದೆ. ದ್ವಿಚಕ್ರ ವಾಹನದ ಮುಂಭಾಗ ನಜ್ಜುಗುಜ್ಜಾಗಿದ್ದು ಅಪಾರ ನಷ್ಟ ಸಂಭವಿಸಿದೆ.

LEAVE A REPLY

Please enter your comment!
Please enter your name here