ಪುತ್ತೂರು; ಪುತ್ತೂರು ತಾಲೂಕು ಕಚೇರಿಯಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಪ್ರಾರಂಭಗೊಂಡಿರುವ ಆಧಾರ್ ಸೇವಾ ಕೇಂದ್ರವು ಸಾರ್ವಜನಿಕರ ಅನುಕೂಲಕ್ಕಾಗಿ ಭಾನುವಾರವೂ ತೆರೆದಿಡಲಾಗಿದ್ದು , ಸಾರ್ವಜನಿಕರು ಆಧಾರ್ ಕಾರ್ಡು ಸಂಬಂಧಿತ ಸಮಸ್ಯೆಗಳಿಗೆ ಕಚೇರಿಯನ್ನು ಸಂಪರ್ಕಿಸುವಂತೆ ಕೇಂದ್ರ ಸಿಬ್ಬಂಧಿ ಮನವಿ ಮಾಡಿದ್ದಾರೆ.ಬಯೋಮೆಟ್ರಿಕ್ ಅಪ್ಡೇಟ್ ಮತ್ತು ಡೋಕ್ಯುಮೆಂಟ್ ಅಪ್ಡೇಟ್ ಕಡ್ಡಾಯಗೊಳಿಸಿ ಸರಕಾರ ಅದೇಶ ಮಾಡಿದ್ದು ಸಾರ್ವಜನಿಕರು ಸೇವೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಲಭ್ಯವಿರುವ ಸೇವೆಗಳು
ಹೊಸ ಆಧಾರ್ ಕಾರ್ಡ್: ಬೇಕಾದ ದಾಖಲೆಗಳು:ಜನನ ಪ್ರಮಾಣ ಪತ್ರ,ತಂದೆ/ತಾಯಿಯ ಆಧಾರ್ ಕಾರ್ಡ್,ಶುಲ್ಕ: ಉಚಿತ
ಬಯೋಮೆಟ್ರಿಕ್: 5-7 ವರ್ಷ ಹಾಗೂ 15-17 ವರ್ಷ ಮಕ್ಕಳಿಗೆ ಕಡ್ಡಾಯ ಬಯೋಮೆಟ್ರಿಕ್, ಶುಲ್ಕ: ಉಚಿತ
ಇತರ ತಿದ್ದುಪಡಿ( ಬದಲಾವಣೆಗಳಿದ್ದಲ್ಲಿ)
ತಂದೆ/ತಾಯಿ/ಗಂಡನ ಹೆಸರು,ಜನ್ಮ ದಿನಾಂಕ,ವಿಳಾಸ ತಿದ್ದುಪಡಿ,ಲಿಂಗ,ಮೊಬೈಲ್ ಸಂಖ್ಯೆ,ಇ-ಮೇಲ್,ಶುಲ್ಕ: 50( ಸರಕಾರಿ ದರ)
ಪೋಟೊ ತಿದ್ದುಪಡಿ: ಶುಲ್ಕ: 100 (ಸರಕಾರಿ ದರ)
ಎಲ್ಲಾ ಸರ್ಕಾರಿ ಯೋಜನೆಗಳನ್ನು ಪಡೆಯಲು 10 ವರ್ಷ ಮತ್ತು ಅದಕ್ಕೂ ಮೀರಿದ ಆಧಾರ್ ಹೊಂದಿರುವವರು ಬಯೋಮೆಟ್ರಿಕ್ ಅಪ್ಡೇಟ್ ಮತ್ತು ಡೋಕ್ಯುಮೆಂಟ್ ಅಪ್ಡೇಟ್ ಮಾಡತಕ್ಕದ್ದು ಇದಕ್ಕಾಗಿ ಮತದಾರರ ಗುರುತಿನ ಚೀಟಿ,ಪಡಿತರ ಚೀಟಿ ಅಥವಾ ಪಾಸ್ ಪೋರ್ಟ್ ದಾಖಲೆಯಾಗಿ ನೀಡಬಹುದಾಗಿದೆ.