ಪುತ್ತೂರು: ಸುದ್ದಿ ಸಮೂಹ ಸಂಸ್ಥೆಗಳು ಪ್ರವರ್ತಿತ ಸುದ್ದಿ ಸೌಹಾರ್ದ ಸಹಕಾರಿ ಸಂಘವು ಯಶಸ್ವಿ 9 ವರ್ಷಗಳನ್ನು ಪೂರೈಸಿ ಸೆ.27 ರಂದು 10 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಮಿನಿ ವಿಧಾನ ಸೌಧದ ಬಳಿ ಇರುವ ಪುತ್ತೂರು ತಾಲೂಕು ಪಂಚಾಯತ್ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುದ್ದಿ ಸೌಹಾರ್ದ ಸಹಕಾರಿ ಸಂಘವು ತನ್ನೆಲ್ಲಾ ಗ್ರಾಹಕ ಮಿತ್ರರಿಗೆ, ಹಿತೈಷಿಗಳಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತಾ ಮುಂದೆಯೂ ತಮ್ಮೆಲ್ಲರ ಸಹಕಾರ, ಪ್ರೋತ್ಸಾಹವನ್ನು ಬಯಸುತ್ತಿದೆ.
ಸಂಘವು 2023-24 ನೇ ಸಾಲಿನಲ್ಲಿ ರೂ. 55.65 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿದ್ದು ರೂ.54.08 ಲಕ್ಷ ನಿವ್ವಳ ಲಾಭ ಗಳಿಸಿದೆ. ಅಡಿಟ್ ವರ್ಗೀಕರಣದಲ್ಲಿ ಎ ತರಗತಿ ಹೊಂದಿರುವ ಸಂಘದಲ್ಲಿ 3203 ಮಂದಿ ಸದಸ್ಯರಿದ್ದು ರೂ.76,16,800 ಪಾಲು ಬಂಡವಾಳ ಇದೆ. ಠೇವಣಾತಿಗಳಲ್ಲಿ ರೂ.12,33,65,141 ಇದೆ. ಸಂಘದಿಂದ ನಿರಖು ಠೇವಣಾತಿಗಳಿಗೆ ಒಂದು ವರ್ಷದ ಅವಧಿಗೆ ಶೇ.9 ಹಾಗೂ ಹಿರಿಯ ನಾಗರಿಕರಿಗೆ ಶೇ.0.5 ಹೆಚ್ಚುವರಿಯಾಗಿ ಬಡ್ಡಿ ನೀಡಲಾಗುತ್ತಿದೆ. ಸಂಘವು ಶೇ.95.81 ರಷ್ಟು ಸಾಲ ವಸೂಲಾತಿ ಮಾಡಿದ್ದು ಹೆಚ್ಚಿನ ಪ್ರಗತಿ ಸಾಧಿಸಿದೆ.
ಸಾಲ ಸೌಲಭ್ಯಗಳು:
ಸಂಘದಲ್ಲಿ ಮುಖ್ಯವಾಗಿ ಭೂ ಅಡಮಾನ ಸಾಲ, ವೇತನ ಆಧಾರಿತ ಸಾಲ, ಭೂಮಿ ಖರೀದಿ ಸಾಲ, ಜಾಮೀನು ಮತ್ತು ವ್ಯಾಪಾರ ಸಾಲ, ಮನೆ ನಿವೇಶನ ಖರೀದಿ ಸಾಲ, ಮನೆ ನಿರ್ಮಾಣ ಸಾಲ, ವಾಹನ ಸಾಲ, ಚಿನ್ನಾಭರಣ ಈಡಿನ ಸಾಲಗಳನ್ನು ನೀಡಲಾಗುತ್ತಿದ್ದು ಸಾಲಗಳನ್ನು ಕಡಿಮೆ ಬಡ್ಡಿ ದರದಲ್ಲಿ ಹಾಗೂ ತ್ವರಿತವಾಗಿ ಕ್ಲಪ್ತ ಸಮಯದಲ್ಲಿ ನೀಡಲಾಗುತ್ತಿದೆ.
ನಿರಖು ಠೇವಣಿ:
ಕಛೇರಿಯು ಸಂಪೂರ್ಣ ಗಣಕೀಕೃತ ಸೇವಾ ಸೌಲಭ್ಯಗಳನ್ನು ಹೊಂದಿದ್ದು ನಿರಖು ಠೇವಣಿಯಲ್ಲಿ 45 ರಿಂದ 90 ದಿನಗಳಿಗೆ ಶೇ.5.5, 91 ದಿನಗಳಿಂದ 180 ದಿನಗಳಿಗೆ ಶೇ.6.25, 181 ದಿನಗಳಿಂದ 364 ದಿನಗಳಿಗೆ ಶೇ.7.5, ಒಂದು ವರ್ಷ ಮೇಲ್ಪಟ್ಟು ಶೇ.9, 3 ವರ್ಷ ಮತ್ತು ಮೇಲ್ಪಟ್ಟು ಶೇ.10 ಹಾಗೂ ಹಿರಿಯ ನಾಗರಿಕರಿಗೆ ಶೇ.0.5 ಹೆಚ್ಚುವರಿ ಬಡ್ಡಿ ನೀಡಲಾಗುತ್ತಿದೆ.
ಆಡಳಿತ ಮಂಡಳಿ:
ಡಾ.ಯು.ಪಿ ಶಿವಾನಂದರವರು ಸಂಘದ ಅಧ್ಯಕ್ಷರಾಗಿ, ಯು.ಪಿ ರಾಮಕೃಷ್ಣ ಉಪಾಧ್ಯಕ್ಷರಾಗಿ, ಯಂ.ನರೇಂದ್ರ ಮುಖ್ಯ ಕಾರ್ಯನಿರ್ವಹಣಾಽಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಜೆ.ಸಿ.ಅಡಿಗ, ಎ.ವಿ ನಾರಾಯಣ, ಯನ್.ಕೆ. ಜಗನ್ನಿವಾಸ ರಾವ್, ಜೋನ್ ಕುಟಿನ್ಹಾ, ಸುಂದರ ನಾಯ್ಕ್ ಕೆ, ಹರೀಶ್ ಬಂಟ್ವಾಳ, ಕೆ.ಎಂ.ಮೋಹನ್ ರೈ, ಜೊಹರಾ ನಿಸಾರ್ ಅಹಮದ್, ಸ್ವಾತಿ ಮಲ್ಲಾರ, ರಾಜೇಶ್ ಎಂ.ಎಸ್ ಮಾಡಾವು, ಶೇಷಪ್ಪ ಕಜೆಮಾರ್, ಫಾರೂಕ್ ಮುಕ್ವೆ ಮತ್ತು ಈಶ್ವರ ವಾರಣಾಸಿ ನಿರ್ದೇಶಕರುಗಳಾಗಿದ್ದಾರೆ. ಸಿಬ್ಬಂದಿಗಳಾಗಿ ಅನಂತರಾಮ ಸಾಜ, ಚೇತನ್ ಕೆ ಕರಿಮಜಲು ಮತ್ತು ಅಶ್ವಿನಿ ರೈ ಕಾವು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇ ಸ್ಟಾಂಪಿಂಗ್ ಸೇವಾ ಸೌಲಭ್ಯ ಹಾಗೂ ನೆಫ್ಟ್ ಸೌಲಭ್ಯ ಇದೆ. ಕಛೇರಿ ಸಂಪೂರ್ಣ ಗಣಕೀಕೃತ ಸೇವಾ ಸೌಲಭ್ಯಗಳನ್ನು ಹೊಂದಿದೆ. ಸುಳ್ಯ ಶಾಖೆಯು ಸುಳ್ಯದಲ್ಲಿ ದ್ವಾರಕಾ ಹೊಟೇಲ್ ಬಳಿ ಇರುವ ರಾಜಶ್ರೀ ಕಾಂಪ್ಲೆಕ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿದೆ.