ಸೆ.30: ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘ ಕಾರ್ಯದರ್ಶಿ ಜಿನ್ನಪ್ಪ ಸಾಲ್ಯಾನ್ ನಿವೃತ್ತಿ

0

ಪುತ್ತೂರು:ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಜಿನ್ನಪ್ಪ ಸಾಲ್ಯಾನ್ ಸೆ.30ರಂದು ವಯೋನಿವೃತ್ತಿ ಹೊಂದಲಿದ್ದಾರೆ.


ಮುಂಡೂರು ಗ್ರಾಮದ ಪರನೀರು ದಿ.ರಾಮಪ್ಪ ಪೂಜಾರಿ ಹಾಗೂ ಕಮಲ ದಂಪತಿ ಪುತ್ರನಾಗಿರುವ ಜಿನ್ನಪ್ಪ ಸಾಲ್ಯಾನ್ 1988ರಲ್ಲಿ ಸಂಘದ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಜೊತೆಗೆ ಕೃತಕ ಗರ್ಭದಾರಣಾ ಕಾರ್ಯಕರ್ತನಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದರು. ಒಟ್ಟು 37 ವರ್ಷಗಳ ಕಾಲ ಸಹಕಾರ ಸಂಘದಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ.


ಇವರ ಅವಧಿಯಲ್ಲಿ 1966ರಲ್ಲಿ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣಗೊಂಡಿತ್ತು. 2004ರಲ್ಲಿ ಎಎಂಸಿ ಸ್ಥಾಪನೆ. 2023ರಲ್ಲಿ ಬಿಎಂಸಿ ಸ್ಥಾಪನೆಗೊಂಡಿತ್ತು. ಸಂಘದ ಸಾಧನೆಗೆ 1998ರಲ್ಲಿ ತಾಲೂಕಿನಲ್ಲಿ ಪ್ರಥಮ ಹಾಗೂ 2024ರಲ್ಲಿ ತಾಲೂಕಿನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಪತ್ನಿ ಗೀತಾ, ಪುತ್ರ ಬೆಂಗಳೂರು ಇನ್ಫೋಸಿಸ್‌ನಲ್ಲಿ ಉದ್ಯೋಗದಲ್ಲಿರುವ ಜೀವಿತ್‌ರವರೊಂದಿಗೆ ಮುಂಡೂರು ಪರನೀರು ಎಂಬಲ್ಲಿ ವಾಸ್ತವ್ಯವಿದ್ದಾರೆ.

LEAVE A REPLY

Please enter your comment!
Please enter your name here