ವಿದ್ಯಾಮಾತಾ ಅಕಾಡೆಮಿಯ ಹಿರಿಮೆಯನ್ನು ಹೆಚ್ಚಿಸಿದ ಗ್ರಾಮೀಣ ಪ್ರತಿಭೆಗಳು

0

ಪುತ್ತೂರು: ಭಾರತೀಯ ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸಬೇಕೆನ್ನುವ ಆಶಯದಲ್ಲಿರುವ ಗ್ರಾಮೀಣ ಪ್ರದೇಶದ ಯುವ ಜನತೆಗೆ ಆಶಾಕಿರಣವಾಗಿರುವ ಪುತ್ತೂರಿನಲ್ಲಿ ಕೇಂದ್ರ ಸ್ಥಾನವನ್ನು ಹೊಂದಿ ಸುಳ್ಯ ಹಾಗೂ ಕಾರ್ಕಳದಲ್ಲಿ ಶಾಖೆಯನ್ನು ಹೊಂದಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆದ ಅವಿನ್ ಎಂ ಮತ್ತು ವಿಜೇತ್ ಎಂ ರವರು 2024ನೇ ಸಾಲಿನ ಅಗ್ನಿಪಥ್ ನೇಮಕಾತಿಯ ಲಿಖಿತ ಪರೀಕ್ಷೆ, ದೈಹಿಕ ಸದೃಢತಾ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಭಾರತೀಯ ಸೇನೆಗೆ ಆಯ್ಕೆಯಾಗಿರುತ್ತಾರೆ.

ಸತತ ವೈಪಲ್ಯವನ್ನು ಮೆಟ್ಟಿ ನಿಂತ ಸಾಧಕರು
ಅಗ್ನಿಪಥ್ ನೇಮಕಾತಿಯು ಪ್ರಾರಂಭವಾದಾಗಿನಿಂದ ಸೇನೆಗೆ ಸೇರಬಯಸುವ ಯುವ ಜನತೆಗೆ ನಿರಂತರವಾಗಿ ತರಬೇತಿಯನ್ನು ನೀಡುತ್ತಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ಈ ಇಬ್ಬರು ವಿದ್ಯಾರ್ಥಿಗಳು ಕಳೆದ 2 ನೇಮಕಾತಿಯಲ್ಲಿ ಕೂದಲೆಳೆಯ ಅಂತರದಲ್ಲಿ ಅನರ್ಹಗೊಂಡಿದ್ದರು, ಇದರಿಂದ ದೃತಿಗೆಡದ ವಿದ್ಯಾರ್ಥಿಗಳಿಗೆ ವಿದ್ಯಾಮಾತಾ ಅಕಾಡೆಮಿಯು ನಿರಂತರವಾಗಿ ಉಚಿತ ತರಬೇತಿಯನ್ನು ನೀಡಿ ವಿದ್ಯಾರ್ಥಿಗಳ ಕನಸನ್ನು ನನಸಾಗಿಸುವಲ್ಲಿ ಯಶಸ್ವಿಯಾಗಿದೆ.


ಅವಿನ್ ರವರು ಪುತ್ತೂರು ತಾಲೂಕಿನ ಕಾವು, ಮನಿಯಡ್ಕ ನಿವಾಸಿಯಾದ ಚಂದ್ರಶೇಖರ ಮತ್ತು ಗೀತಾ ದಂಪತಿಗಳ ಪುತ್ರ ಇವರು ಪ್ರಸ್ತುತ ವಿವೇಕಾನಂದ ಪದವಿ ಕಾಲೇಜಿನಲ್ಲಿ ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದಾರೆ ಹಾಗೂ ವಿಜೇತ್ ಎಂ ರವರು ಪುತ್ತೂರು ತಾಲೂಕಿನ ಅರಿಯಡ್ಕದ ಮಜ್ಜಾರಡ್ಕ ನಿವಾಸಿಗಳಾದ ಪದ್ಮನಾಭ ಪೂಜಾರಿ ಮತ್ತು ಯಶೋಧ ದಂಪತಿಗಳ ಪುತ್ರ ಇವರು ಪ್ರಸ್ತುತ ಸಂತ ಪಿಲೋಮಿನಾ ಪದವಿ ಕಾಲೇಜ್ ನ ಅಂತಿಮ ಬಿ ಕಾಂ ವಿದ್ಯಾರ್ಥಿ.

2024ನೇ ಸಾಲಿನಲ್ಲಿ 50ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುತ್ತಿದೆ ವಿದ್ಯಾಮಾತಾ ಅಕಾಡೆಮಿ
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡುತ್ತಾ ಬರುತ್ತಿರುವ ವಿ.ಅಕಾಡೆಮಿಯು ಕಳೆದ 4 ವರ್ಷಗಳಿಂದ ಅಗ್ನಿಪಥ್ ನೇಮಕಾತಿಗೂ ತರಬೇತಿಯನ್ನು ನೀಡುತ್ತಿದೆ ಈ ವರ್ಷವೂ ಕೂಡ 50 ಕ್ಕೂ ಅಧಿಕ ಅಭ್ಯರ್ಥಿಗಳು ವಿವಿಧ ಸಶಸ್ತ್ರ ಪಡೆಗಳ ನೇಮಕಾತಿಗೆ ತರಬೇತಿಯನ್ನು ಪಡೆಯುತ್ತಿದ್ದು ಇಲ್ಲಿಯವರೆಗೆ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆದ 18 ವಿದ್ಯಾರ್ಥಿಗಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದು ಉಲ್ಲೇಖಾರ್ಹ.


ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತ ಪಡಿಸಿರುವ ಸಂಸ್ಥೆಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ರವರು “ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಸೇನಾ ನೇಮಕಾತಿಗಳಲ್ಲಿ ಆಯ್ಕೆ ಯಾಗುತ್ತಿರುವುದು ಭವಿಷ್ಯದ ನೇಮಕಾತಿಗಳಿಗೆ ತರಬೇತಿಯನ್ನು ನೀಡಲು ಇನ್ನಷ್ಟು ಉತ್ತೇಜನ ಸಿಕ್ಕಿದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.”

LEAVE A REPLY

Please enter your comment!
Please enter your name here