ಕಡಬ: ಸರಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ 2024 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವು ಆರ್ಯಭಟ ಪ್ರಶಸ್ತಿ ವಿಜೇತ, ಹಿರಿಯರೂ, ಕರುಣಾಕರ ಗೋಗಟೆ ನಾಡೋಳಿ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮಾಧಿಕಾರಿ ಸಂತ ಜೋರ್ಜ್ ಪದವಿಪೂರ್ವ ಕಾಲೇಜು ನೆಲ್ಯಾಡಿ ಇಲ್ಲಿನ ಉಪನ್ಯಾಸಕ ವಿಶ್ವನಾಥ ಶೆಟ್ಟಿ ಶಿಬಿರಾರ್ಥಿಗಳಿಗೆ ತಮ್ಮ ಅನುಭವದ ಹಿತವಚನಗಳನ್ನು ನುಡಿದರು.
ಕಡಬ ನೂಜಿಬಾಳ್ತಿಲ ಕ್ಲಿಷ್ಟ ರ್ ಸಿ.ಆರ್.ಪಿ ಗಣೇಶ್ ನಡುವಾಲ್, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ನಿವೃತ್ತ ಪ್ರಾಂಶುಪಾಲ ಇ.ಸಿ.ಚೆರಿಯಾನ್ ಕಡಬ ತಾಲೂಕು ಯುವಜನ ಒಕ್ಕೂಟ ದ ಅಧ್ಯಕ್ಷ ಶಿವಪ್ರಸಾದ್ ಮೈಲೇರಿ, ಪೂರ್ವ ವಿನದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ಉಂಡಿಲ, ಅತಿಥಿಗಳಾಗಿ ಮಾತನಾಡಿದರು.
ಶಿಬಿರದ ಸಂಚಾಲಕ ಕಾಶಿನಾಥ ಗೋಗಟೆ ಶಿಬಿರದ ಆಯೋಜನೆಯ ಉದ್ದೇಶ ಮತ್ತು ಅಗತ್ಯಗಳನ್ನು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಪ್ರಾಂಶುಪಾಲರಾದ ವಾಸುದೇವ ಗೌಡ ಕೆ.ಇವರು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಇತಿಹಾಸದ ಮೆಲುಕು ಹಾಕಿದರು ಮತ್ತು ಶಿಬಿರದಲ್ಲಿ ಭಾಗವಹಿಸುವ ಎಲ್ಲಾ ಉಪನ್ಯಾಸಕರನ್ನು ಅಭಿನಂದಿಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ ಉಳಿಪು ಧ್ವಜಾರೋಹಣ ನೆರವೇರಿಸಿದರು.ಶಿಬಿರದ ಸಂಚಾಲಕ ಕಾಶಿನಾಥ ಗೋಗಟೆ ಶ್ರಮದಾನ ಉದ್ಘಾಟಿಸಿದರು.ಮುಖ್ಯ ಶಿಕ್ಷಕಿ ಶೋಭಾವತಿ ಸ್ವಾಗತಿಸಿದರು.ಕಾರ್ಯಕ್ರಮಾಧಿಕಾರಿ ಸಲೀನ್ ಕೆ.ಪಿ. ಪ್ರಾಸ್ತಾವಿಕ ಮಾತನಾಡಿದರು ಮತ್ತು ದನ್ಯವಾದ ಸಲ್ಲಿಸಿದರು.ಉಪನ್ಯಾಸಕಿ ಲಾವಣ್ಯ ಹೇಮಂತ ಮಂಡೆಕರ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಕಬೀರ್ ಟಿ,ಕುಮಾರಿ ಮಲ್ಲಿಕಾ, ಪವಿತ್ರ, ಕುಮಾರಿ ಸುಮನ ಸಹಕರಿಸಿದರು.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ನಾಯಕ ಮೇಘನಾಥ ಮತ್ತು ಯಶ್ವಿನಿ ಉಪಸ್ಥಿತರಿದ್ದರು.