ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ “ಹಿಂದಿ  ಹಬ್ಬ”

0

ಪುತ್ತೂರು: ಗೇರು ಸಂಶೋಧನಾ ನಿರ್ದೇಶನಾಲಯ, ನಗರ  ರಾಜಭಾಷಾ ಕಾರ್ಯಾನ್ವಯನ ಸಮಿತಿ ಆಶ್ರಯದಲ್ಲಿ “ ಹಿಂದಿ ಪಖವಾಡಾ” ( ಹಿಂದಿ ಪಕ್ಷ )ವನ್ನು ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಸೆ.27ರಂದು ಆಚರಿಸಲಾಯಿತು.

ಪುತ್ತೂರು ನಗರ ಮಟ್ಟದ ಹಿಂದಿ ನಿಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪೌಢಶಾಲಾ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು. ನೌಕರರಿಗಾಗಿ ನಡೆದ ಹಿಂದಿ ಹಾಡು, ಬರಹ, ಕ್ವಿಜ಼್ ಮುಂತಾದ ಸ್ಪರ್ಧೆಗಳಲ್ಲಿ ಬ್ಯಾಂಕ್ ಆಫ್ ಬರೋಡಾ, ಅಂಚೆ ಅಧೀಕ್ಷಕರ ಕಛೇರಿ, ಸಿ ಪಿ ಸಿ ಆರ್ ಐ ವಿಟ್ಲ ಮತ್ತು  ಡಿ ಸಿ ಆರ್ ಪುತ್ತೂರಿನ ನೌಕರರು ಪ್ರಶಸ್ತಿ ಪಡೆದುಕೊಂಡರು.

ಕಳೆದ ವರ್ಷಗಳಲ್ಲಿ ಹಿಂದಿ ಕಾರ್ಯಗಳನ್ನು ಉತ್ಕೃಷ್ಟ ರೀತಿಯಲ್ಲಿ ನಿರ್ವಹಿಸಿರುವುದಕ್ಕಾಗಿ ಪುತ್ತೂರಿನ ಹಿರಿಯ ಅಂಚೆ ಅಧೀಕ್ಷಕರ ಕಾರ್ಯಾಲಯಕ್ಕೆ“ ಅತ್ಯುತ್ತಮ ಕಾರ್ಯಾಲಯ” ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಯಾಗಿ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂದಿ ಪ್ರಾಧ್ಯಾಪಕಿ ಡಾ.ಕರುಣಾಲಕ್ಷ್ಮೀ ಭಾಗವಹಿಸಿ ಹಿಂದಿ ಭಾಷೆಯೊಂದಿಗಿನ ತಮ್ಮ ಒಡನಾಟ, ಅದರ ವೈವಿಧ್ಯತೆ  ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಈ ಭಾಷೆ ಕಂಡುಕೊಂಡ ಮನ್ನಣೆಯನ್ನು ವಿವರಿಸಿದರು. ವಿಶೇಷ ಅತಿಥಿಯಾಗಿ ಪುತ್ತೂರಿನ ಹಿರಿಯ ಅಂಚೆ ಅಧೀಕ್ಷಕ ಹರೀಶ ಭಾಗವಹಿಸಿ “ಹಿಂದಿ  ಹಬ್ಬಕ್ಕೆ” ಶುಭಾಶಯ ಕೋರಿದರು.ಸಿಪಿ್ಸಿಆರ್ ಐ ವಿಟ್ಲದ ಮುಖ್ಯಸ್ಥ ಡಾ. ರಾಜೇಶ ಉಪಸ್ಥಿತರಿದ್ದರು.

ಸಂಸ್ಥೆಯ ನಿರ್ದೆಶಕ ಡಾ. ದಿನಕರ ಜೆ. ಅಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿವಿಧ ಪ್ರೌಢಶಾಲಾ ಹಿಂದಿ ಅಧ್ಯಾಪಕರ ಅಪೇಕ್ಷೆಯಂತೆ, ಇನ್ನು ಮುಂದೆ ಸಹ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವಂತಹ ಇಂತಹ ಕಾರ್ಯಕ್ರಮಗಳನ್ನು ನಡೆಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಸಿಂಚನಾ, ದೇವಿ ಮತ್ತು ನಿತ್ಯಾನಂದನ್ ಹಿಂದಿ ಹಾಡುಗಳನ್ನು ಹಾಡಿದರು. ಡಾ. ಜ್ಯೋತಿ ನಿಷಾಧ ಸ್ವಾಗತಿಸಿ, ಡಾ. ತೊಂಡೈಮನ್ ವರದಿ ಪ್ರಸ್ತುತಪಡಿಸಿದರು. ಪ್ರಕಾಶ ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಎರಡು ವಾರಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಪುತ್ತೂರು ನಗರದ ಕೇಂದ್ರ ಸರಕಾರಿ ಕಾರ್ಯಾಲಯಗಳ ನೌಕರರು, ಪ್ರೌಢಶಾಲಾ ಅಧ್ಯಾಪಕರು &  ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದರು.

ದೇಶದ ಅಭಿವೃದ್ಧಿ  ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಸದಾ ಬದ್ದತೆಯನ್ನು ತೋರುತ್ತಿರುವ ಈ ನಿರ್ದೇಶನಾಲಯವು ಕಳೆದ ಎರಡು ದಶಕದಿಂದ ಇಂತಹ ರಾಜಭಾಷಾ ಕಾರ್ಯಕ್ರಮಗಳನ್ನು  ಅಚ್ಚುಕಟ್ಟಾಗಿ ಆಯೋಜಿಸುತ್ತ ಬಂದಿದ್ದು ಜನಮಾನಸವನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಸಮಿತಿಯ ವತಿಯಿಂದ ಪ್ರತಿವರ್ಷ ವಿಧ್ಯಾರ್ಥಿ ಮತ್ತು ಅಧ್ಯಾಪಕರಿಗಾಗಿ  ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ.ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ನಡೆಸುವ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ಪುತ್ತೂರಿನ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ  ಪ್ರೊತ್ಸಾಹಿಸಲಾಗುತ್ತಿದೆ. ಈವರೆಗೆ ಸುಮಾರು 70 ವಿದ್ಯಾರ್ಥಿಗಳು ಇಂತಹ ಗೌರವ ಪುರಸ್ಕಾರ ಪಡೆದಿದ್ದಾರೆ.ಹಿಂದಿ ಸಮಿತಿಯ ಕಾರ್ಯಗಳ ಮೂಲಕ ವಿವಿಧ ಕೇಂದ್ರ ಸರಕಾರಿ ಕಾರ್ಯಾಲಯಗಳ ನೌಕರರನು ಒಂದೇ ಸೂರಿನಡಿ ಸೇರಿಸುವಲ್ಲೂ ಈ  ಸಂಸ್ಥೆ ಯಶಸ್ವಿಯಾಗಿದೆ.

LEAVE A REPLY

Please enter your comment!
Please enter your name here