ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ ಇದರ 31ನೇ ವಾರ್ಷಿಕ ಮಹಾಸಭೆ – ನೂತನ ಗ್ರಂಥಗಳ ಅನಾವರಣ, ಪ್ರಶಸ್ತಿಪ್ರದಾನ

0

ವಿದ್ಯಾಕುಟೀರ, ಕಬಕ: ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ (ರಿ), ಇದರ 31ನೇ ವಾರ್ಷಿಕ ಮಹಾಸಭೆ, ವಾರ್ಷಿಕೋತ್ಸವ, ನೂತನ ಗ್ರಂಥಗಳ ಅನಾವರಣ, ಪ್ರಶಸ್ತಿಪ್ರದಾನ ಹಾಗೂ ಸಂಸ್ಕೃತ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು, ಸೆ.29ರಂದು ಸಂಪ್ರತಿಷ್ಠಾನದ ನೂತನ ಕಾರ್ಯಭವನ ವಿದ್ಯಾಕುಟೀರದಲ್ಲಿ ನಡೆಯಿತು.

ಬೆಳಿಗ್ಗೆ, 6.00 ಗಂಟೆಯಿಂದ, ವೈದಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ರಾಮಕಲ್ಪೋಕ್ತಪೂಜೆ, ಆಂಶಿಕಯಜುಸಂಹಿತಾ ಹವನ, ಶ್ರೀ ಸರಸ್ವತೀ ಪೂಜೆ ಇತ್ಯಾದಿಗಳು ನಡೆದು, ಸುಮಾರು 9.45 ಗಂಟೆಯಿಂದ, ವಾರ್ಷಿಕ ಮಹಾಸಭೆ ನಡೆಯಿತು.

ನಂತರ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ, ದ್ವಾರಕಾ ಪ್ರತಿಷ್ಠಾನದ ಏ ಗೋಪಾಲಕೃಷ್ಣ ಭಟ್ಟರ ಅಧ್ಯಕ್ಷತೆ ಮತ್ತು ಮಿತ್ತೂರು ಸಂಪ್ರತಿಷ್ಠಾನದ ಅಧ್ಯಕ್ಷ ರಮೇಶ ಭಟ್ ಬಿ ಇವರ ಉಪಸ್ಥಿತಿಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆದವು. ಮುಖ್ಯ ಅಭ್ಯಾಗತರಾಗಿ, ಕಾಸರಗೋಡಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಿಕೆ ಡಾ.ಯು ಮಹೇಶ್ವರಿ ಭಾಗವಹಿಸಿದರು.

ಗ್ರಂಥ ಅನಾವರಣ ಕಾರ್ಯಕ್ರಮ: ಡಾ.ಪಾದೇಕಲ್ಲು ವಿಷ್ಣು ಭಟ್ಟರು ಪ್ರಾಸ್ತಾವಿಕ ಮಾತುಗಳನ್ನಾಡಿ, ಅನಾವರಣಗೊಳ್ಳಲಿರುವ‌ ಗ್ರಂಥಗಳ ಮಾಹಿತಿಗಳನ್ನು ನೀಡಿದರು.

1) ಶ್ರೀ ಎನ್.ಕೆ.ಕೃಷ್ಣ ಭಟ್ಟ ಕೆದಿಮಾರು ಸಂಗ್ರಹಿಸಿದ, ಪಿ ವಿ ಶ್ರೀಹರಿ ಶರ್ಮಾ ಇವರಿಂದ ಸಂಪಾದಿಸಲ್ಪಟ್ಟ ಸೂಕ್ತಿಮಾಲಾ

2) ವೇ.ಬ್ರ. ಪುರೋಹಿತ ಮಿತ್ತೂರು ಶ್ರೀನಿವಾಸ ಭಟ್ಟರಿಂದ ಸಂಪಾದಿಸಲ್ಪಟ್ಟ ಎರಡು ಕೃತಿಗಳು, ಶ್ರೀ ದುರ್ಗಾರಾಧನಾವಿಧಿಃ ಮತ್ತು ನಿತ್ಯೋಪಾಸನಾಪದ್ಧತಿಃ

3) ಪಿತೃಯಜ್ಞ: ವಿಷಯಸಂಗ್ರಹ ಮತ್ತು ನಿರೂಪಣೆ – ವೇ.ಮೂ. ಮಿತ್ತೂರು ಪುರೋಹಿತ ತಿರುಮಲೇಶ್ವರ ಭಟ್ಟ ಮತ್ತು ಡಾ. ಪಾದೆಕಲ್ಲು ವಿಷ್ಣು ಭಟ್ಟ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮ:

ಬ್ರಹ್ಮಶ್ರೀ ಮಿತ್ತೂರು ಪುರೋಹಿತ ಕೃಷ್ಣ ಭಟ್ಟ ಸಂಸ್ಮರಣ ವೈದಿಕಪ್ರಶಸ್ತಿ ಪ್ರದಾನ: ವೇ.ಬ್ರ. ಎತ್ತುಕಲ್ಲು ಶಿವರಾಮ ಭಟ್ಟ, ಮಿತ್ತೂರು ಪುರೋಹಿತ ಶಂಕರನಾರಾಯಣ ಭಟ್ಟ ಸಂಸ್ಮರಣ ಶಾಸ್ತ್ರ ವಿದ್ವತ್ ಪ್ರಶಸ್ತಿ ಪ್ರದಾನ: ಪ್ರೊ. ಪಿ ಕೃಷ್ಣ ಭಟ್, ಕಾಸರಗೋಡು, ಪ್ರೊ. ಎಂ ಮರಿಯಪ್ಪ ಭಟ್ಟ ಪ್ರಶಸ್ತಿ ಪ್ರದಾನ: ಟಿ.ಆರ್.ಅನಂತರಾಮು, ಬೆಂಗಳೂರು, ಉಗ್ಗಪ್ಪಕೋಡಿ ವೈದ್ಯ ಪಂ.ಈಶ್ವರ ಭಟ್ಟ ವೈದ್ಯ ಪ್ರಶಸ್ತಿ ಪ್ರದಾನ: ಮಜಲುಕರೆ ಬಿ. ಶಿವಕುಮಾರ, ಸುಳ್ಯ, ಎಚ್ ಎಮ್ ಸಂಗೀತ ಕಲಾಪ್ರತಿಭಾ ಪುರಸ್ಕಾರ: ಕು. ಆತ್ರೇಯೀಕೃಷ್ಣಾ ಕೆ, ಮುಖ್ಯ ಅಭ್ಯಾಗತರಾದ ಯು.ಮಹೇಶ್ವರಿ ಅವರು, ಪ್ರಶಸ್ತಿ ಸ್ವೀಕರಿಸಿದ ಸಾಧಕರ ಬಗ್ಗೆ ಮಾತನಾಡಿದರು. ಹಾಗೆಯೇ, ಅಧ್ಯಕ್ಷೀಯ ಭಾಷಣದಲ್ಲಿ, ಏ ಗೋಪಾಲಕೃಷ್ಣ ಭಟ್ಟರು, ಸಂಪ್ರತಿಷ್ಠಾನದ ಕೆಲಸಕಾರ್ಯಗಳ ಬಗ್ಗೆ ಮಾತನಾಡುತ್ತಾ, ಹಲವು ವರ್ಷಗಳಿಂದ ಪುರಸ್ಕಾರಗಳನ್ನು ನೀಡಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸುವ ಕೆಲಸವು ಶ್ಲಾಘನೀಯ ಎಂದರು.

ವಿದ್ಯಾರ್ಥಿ ಸಂಸ್ಕೃತ ಪ್ರತಿಭಾ ಪುರಸ್ಕಾರದಲ್ಲಿ ಈ ಬಾರಿ ಸುಮಾರು 23 ಸಂಸ್ಥೆಗಳ, ಸಂಸ್ಕೃತದಲ್ಲಿ ಅತ್ಯಧಿಕ ಅಂಕಗಳಿಸಿ, ವಿದ್ಯಾಸಂಸ್ಥೆಯಲ್ಲಿ ಅಗ್ರಗಣ್ಯ ಸ್ಥಾನಪಡೆದ 23 ವಿದ್ಯಾರ್ಥಿಗಳಿಗೆ ನಗದು ಸಹಿತ ಪ್ರಶಸ್ತಿಪತ್ರಗಳನ್ನು ನೀಡಿ ಪುರಸ್ಕರಿಸಲಾಯಿತು.

ಸಂಪ್ರತಿಷ್ಠಾನದ ಕಾರ್ಯದರ್ಶಿ ರಮೇಶ ಭಟ್ ಎಂ ಎಚ್ ಧನ್ಯವಾದಗಳನ್ನು ಅರ್ಪಿಸಿದರು. ಪಿಳಿಂಜ ತಿರುಮಲೇಶ್ವರ ಭಟ್ ಮತ್ತು ಪಿ ವಿ ಶ್ರೀಹರಿ ಶರ್ಮಾ‌ ಕಾರ್ಯಕ್ರಮ ನಿರೂಪಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here