ಪುತ್ತೂರು: ಕಳೆದ ಹತ್ತು ದಿನಗಳಲ್ಲಿ ಪುಡಾದಲ್ಲಿ ಪುತ್ತೂರು ತಾಲೂಕು ವ್ಯಾಪ್ತಿಯ 9/11 ಖಾತೆಯ 72 ಕಡತಗಳು ವಿಲೇವಾರಿಯಾಗಿದೆ ಎಂದು ಪುಡಾ ಕಾರ್ಯದರ್ಶಿ ಅಭಿಲಾಷ್ ಮಾಹಿತಿ ನೀಡಿದ್ದಾರೆ.
9/11 ಖಾತೆ ನೀಡುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಎರಡು ವಾರಗಳ ಹಿಂದೆ ಕಂದಾಯ ಅಧಿಕಾರಿಗಳ ಸಭೆ ಕರೆದಿದ್ದ ಶಾಸಕ ಅಶೋಕ್ ರೈ ಅವರು ಪುತ್ತೂರು ತಾಲೂಕು, ಸುಳ್ಯ,ಬೆಳ್ತಂಗಡಿ ಹಾಗೂ ಕಡಬ ತಾಲೂಕು ಕೇಂದ್ರಗಳ ಕಡತ ವಿಲೆವಾರಿ ಮಾಡುವ ಚರ್ಚೆ ನಡೆಸಿದ್ದರು. ಆ ಪ್ರಕಾರ ನಾಲ್ಕು ತಾಲೂಕು ಕೇಂದ್ರಗಳಲ್ಲಿ ವಾರದಲ್ಲಿ ಒಂದು ದಿನ ಕಡತ ವಿಲೇವಾರಿ ಮಾಡುವಂತೆ ಶಾಸಕರು ಸೂಚನೆಯನ್ನು ನೀಡಿದ್ದರು. ಪುತ್ತೂರಿನಲ್ಲಿ ಕಳೆದ ಹತ್ತು ದಿನಗಳಲ್ಲಿ 72 ಕಡತಗಳು ವಿಲೇವಾರಿಯಾಗಿದೆ. ಒಟ್ಟು 180 ಅರ್ಜಿಗಳು ಬಂದಿದ್ದು ಈ ಪೈಕಿ 72 ವಿಲೇವಾರಿಯಾಗಿದ್ದು 10 ಕಡತಗಳು ವಿಲೇವಾರಿ ಹಂತದಲ್ಲಿದ್ದು 98 ಅರ್ಜಿಗಳು ಬಾಕಿ ಇದೆ ಎಂದು ಪುಡಾ ಕಾರ್ಯದರ್ಶಿ ಅಭಿಲಾಶ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪುಡಾ ಸದಸ್ಯರಾದ ಅನ್ವರ್ ಖಾಸಿಂ, ನಿಹಾಲ್ ಪಿ ಶೆಟ್ಟಿ ಮತ್ತು ಲ್ಯಾನ್ಸಿಮಸ್ಕರೇನಸ್ ಉಪಸ್ಥಿತರಿದ್ದರು.
9/11 ಸಮಸ್ಯೆ ಬಗ್ಗೆ ನಾನು ಸದನದಲ್ಲಿ ಸರಕಾರದ ಗಮನ ಸೆಳೆದಿದ್ದೆ. ಮೂಡಾ ದಲ್ಲಿದ್ದ ವ್ಯವಸ್ಥೆಯನ್ನು ತಾಲೂಕು ಕೇಂದ್ರದಲ್ಲಿ ಮಾಡಿಸಿದ್ದೆ. ಪುತ್ತೂರು ತಾಲೂಕು ವ್ಯಾಪ್ತಿಯ ಎಲ್ಲಾ ಅರ್ಜಿಗಳು ಕಳೆದ 10 ದಿನಗಳಿಂದ ಪುತ್ತೂರು ಪುಡಾದಲ್ಲಿ ವಿಲೇವಾರಿಯಾಗುತ್ತಿದೆ. ಗ್ರಾಮಾಂತರ ಭಾಗದ ಜನರ ಅನುಕೂಲಕ್ಕಾಗಿ ಪುತ್ತೂರಿನಲ್ಲೇ 9/11 ವ್ಯವಸ್ಥೆಯನ್ನು ಮಾಡಲಾಗಿದೆ. ಕಳೆದ ಹತ್ತು ದಿನದಲ್ಲಿ 72 ಕಡತ ವಿಲೇವಾರಿಯಾಗಿದ್ದು ಬಾಕಿ ಇರುವ ಮತ್ತು ಪ್ರಗತಿ ಹಂತದಲ್ಲಿರುವ ಕಡತಗಳು 15 ದಿನದೊಳಗೆ ವಿಲೇವಾರಿಯಾಗಲಿದೆ. 9/11 ವಿಚಾರದಲ್ಲಿದ್ದ ಸಮಸ್ಯೆಯನ್ನು ಬಗೆಹರಿಸಿಸಲಾಗಿದ್ದು ಸರಕಾರವು ನನಗೆ ಕೊಟ್ಟ ಭರವಸೆಯನ್ನು ಈಡೇರಿಸುವ ಮೂಲಕ ನಾನು ತನ್ನ ಕ್ಷೇತ್ರದ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಿದ್ದೇನೆ
ಶಾಸಕ ಅಶೋಕ್ ಕುಮಾರ್ ರೈ