ಲೈಟ್ಸ್, ಫ್ಯಾನ್ಸ್, ಇಲೆಕ್ಟ್ರಿಕಲ್ಸ್ ಮಲ್ಟಿ ಬ್ರಾಂಡೆಡ್ ಮಳಿಗೆ ಪಶುಪತಿ ಶೋರೂಂನಲ್ಲಿ ತಿಂಗಳ ಅದೃಷ್ಟ ಚೀಟಿ ಡ್ರಾ

0

ಪುತ್ತೂರು: ದರ್ಬೆ ಫಿಲೋಮಿನಾ ಕಾಲೇಜಿನ ಮುಂಭಾಗದಲ್ಲಿ ಕಾರ್ಯಾಚರಿಸುತ್ತಿರುವ ಲೈಟ್ಸ್, ಫ್ಯಾನ್ಸ್, ಇಲೆಕ್ಟ್ರಿಕಲ್ಸ್ ನ ಮಲ್ಟಿ ಬ್ರಾಂಡೆಡ್ ಮಳಿಗೆ ಪಶುಪತಿ ಶೋರೂಂನಲ್ಲಿ ಗ್ರಾಹಕರ ತಿಂಗಳ ಅದೃಷ್ಟ ಚೀಟಿ ಡ್ರಾ.ದ ಪ್ರಥಮ ಡ್ರಾ. ಸೆ. 30 ರಂದು ಮಳಿಗೆಯಲ್ಲಿ ಜರಗಿತು.

ಮಳಿಗೆಗೆ ಆಗಮಿಸುವ ಖರೀದಿದಾರರು ಮಾತ್ರವಲ್ಲ ಮಳಿಗೆಗೆ ಭೇಟಿ ನೀಡಿದ ಪ್ರತಿಯೊಬ್ಬ ಗ್ರಾಹಕರಿಗೆ ಕೂಪನ್ ನೀಡುವ ವ್ಯವಸ್ಥೆಯನ್ನು ಮಳಿಗೆಯ ಮಾಲಕರು ಮಾಡಿದ್ದು ಇದರ ಪ್ರಥಮ ಡ್ರಾ.ದ ಚೀಟಿ ಎತ್ತುವಿಕೆಯನ್ನು ರೋಟರಿ ಕ್ಲಬ್ ಪುತ್ತೂರು ಯುವದ ಸ್ಥಾಪಕಾಧ್ಯಕ್ಷ ರತ್ನಾಕರ್ ರೈ ಕೆದಂಬಾಡಿಗುತ್ತು ನಿರ್ವಹಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದರ್ಬೆ ಪ್ರವೀಣ್ ಡ್ರೈವಿಂಗ್ ಸ್ಕೂಲ್ ಮಾಲಕ ಪ್ರವೀಣ್ ಡಿ’ಸೋಜ, ಮಳಿಗೆಯ ಮಾಲಕ ಪಶುಪತಿ ಶರ್ಮ ಸಹಿತ ಮಳಿಗೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. 

ಸಂಸ್ಥೆಯು ಪ್ರಥಮ, ದ್ವಿತೀಯ ಹಾಗೂ ತೃತೀಯ ಹೀಗೆ ಮೂರು ಬಹುಮಾನಗಳನ್ನು ಗ್ರಾಹಕರಿಗೆ ಪ್ರತಿ ತಿಂಗಳು ನೀಡುತ್ತಿದೆ. ಮಳಿಗೆಯ ನಿರ್ದೇಶಕಿ ಅನ್ನಪೂರ್ಣ ಶರ್ಮ ಸ್ವಾಗತಿಸಿ, ಸಾರ್ವಜನಿಕ ಸಂಪರ್ಕಾಧಿಕಾರಿ ಕವಿತ ದಿನಕರ್ ವಂದಿಸಿದರು.

LEAVE A REPLY

Please enter your comment!
Please enter your name here